ಬರ್ಲಿನ್: ಬಾಹುಬಲಿ 2 ನಲ್ಲಿ ಪ್ರಭಾಸ್​ ಸ್ಟಂಟ್​ ನೋಡಿ ಎಷ್ಟೋ ಅಭಿಮಾನಿಗಳು ಫಿದಾ ಆಗಿದ್ದಾರೆ.  ಬಾಹುಬಲಿ 2 ಸಿನಿಮಾದಲ್ಲಿ ಸೊಂಡಿಲಿನ ಸಹಾಯದಿಂದ ಆನೆಯನ್ನು ಹತ್ತಿ ನಿಲ್ಲುವ ರೀತಿಯಲ್ಲಿಯೇ ವ್ಯಕ್ತಿಯೊಬ್ಬರು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಪ್ರಾಣಿಗಳ ತರಬೇತುದಾರ ಹಾಗೂ ಸಕ್ಸ್​ ಕಂಪನಿಯಲ್ಲಿ  ಕೆಲಸ ಮಾಡುತ್ತಿರುವ ಜರ್ಮನಿ  ದೇಶದ  ರೆನೆ ಕಾಸೆಲೋವ್ಸಿ  ಸ್ಟಂಟ್ಸ್​  ವಿಡಿಯೋ ಸದ್ಯ ವೈರಲ್​ ಆಗಿದೆ.

 

Trust. Love. Respect. 🐘❤️. #animallover #elephant

A post shared by Rene Casselly | Official (@rene_casselly) on


ದೈತ್ಯ ಆನೆಯೊಂದನ್ನು ಪಳಗಿಸಿ, ಚಾಣಾಕ್ಷತನದಿಂದ ಸಾಹಸ ಮಾಡಿ ವಿಡಿಯೋವನ್ನು ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆನೆಗೆ ತನ್ನ ಸೊಂಡಿಲಿನಿಂದ ಮೇಲೆತ್ತಲು ತರಬೇತಿ ನೀಡಲು ಹೆಚ್ಚುಕಾಲ ಶ್ರಮಿಸಿದ್ದಾರೆ ಎಂದು ವರದಿಯಾಗಿದೆ. ಇದೆಲ್ಲದೇ ಬಾಸ್ಕೆಟ್​ ಬಾಲ್​ ಹಾಕುವುದು, ಆನೆ ಜೊತೆ ಸ್ಟಂಟ್​ ಮಾಡುವುದು ನಿಜಕ್ಕೂ ಮೈ ಜುಂ ಅನಿಸುತ್ತದೆ.

ರೆನೆ ಅವರು ಆನೆಯ ಸೊಂಡಿಲಿನ ಸಹಾಯದಿಂದ ಅದರ ಮೇಲೆ ಹತ್ತಿ ನಿಲ್ಲುವ ದೃಶ್ಯ ನೋಡುಗರಲ್ಲಿ ಒಂದು ಕ್ಷಣ ರೊಮಾಂಚನ ಉಂಟುಮಾಡಿದ್ದು ವಿಡಿಯೋ ಈಗ ವೈರಲ್ ಆಗಿದೆ.

 

Please follow and like us:
0
http://bp9news.com/wp-content/uploads/2018/05/Capture-11.jpghttp://bp9news.com/wp-content/uploads/2018/05/Capture-11-150x150.jpgBP9 Bureauಟೈಮ್ ಪಾಸ್ಸಿನಿಮಾಬರ್ಲಿನ್: ಬಾಹುಬಲಿ 2 ನಲ್ಲಿ ಪ್ರಭಾಸ್​ ಸ್ಟಂಟ್​ ನೋಡಿ ಎಷ್ಟೋ ಅಭಿಮಾನಿಗಳು ಫಿದಾ ಆಗಿದ್ದಾರೆ.  ಬಾಹುಬಲಿ 2 ಸಿನಿಮಾದಲ್ಲಿ ಸೊಂಡಿಲಿನ ಸಹಾಯದಿಂದ ಆನೆಯನ್ನು ಹತ್ತಿ ನಿಲ್ಲುವ ರೀತಿಯಲ್ಲಿಯೇ ವ್ಯಕ್ತಿಯೊಬ್ಬರು ಸ್ಟಂಟ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಪ್ರಾಣಿಗಳ ತರಬೇತುದಾರ ಹಾಗೂ ಸಕ್ಸ್​ ಕಂಪನಿಯಲ್ಲಿ  ಕೆಲಸ ಮಾಡುತ್ತಿರುವ ಜರ್ಮನಿ  ದೇಶದ  ರೆನೆ ಕಾಸೆಲೋವ್ಸಿ  ಸ್ಟಂಟ್ಸ್​  ವಿಡಿಯೋ ಸದ್ಯ ವೈರಲ್​ ಆಗಿದೆ.   Trust. Love. Respect. 🐘❤️. #animallover #elephant A post shared by...Kannada News Portal