ಬೆಂಗಳೂರು: ಬಿಗ್ ಬಾಸ್.. ಬಿಗ್ ಬಾಸ್… ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳ ಲಿಸ್ಟ್ನಲ್ಲಿ ಸದ್ಯ ಟಾಪ್ ಶೋ. ಕನ್ನಡದಲ್ಲಿ ಈ ಶೋನ ಖದರೆಽ ಬೇರೆ.

ಈಗಾಗಲೇ ಕನ್ನಡದಲ್ಲಿ 5 ಸೀಸನ್ಗಳನ್ನ ಕಂಪ್ಲೀಟ್ ಆಗಿದ್ದು, ಬಿಗ್ ಬಾಸ್ 6ನೇ ಆವೃತ್ತಿಗೆ ರೆಡಿಯಾಗ್ತಿದೆ. ಬಿಗ್ ಬಾಸ್ ಪ್ರತಿ ಬಾರಿಯೂ ಹೊಸ ಹೊಸ ರೀತಿಯಲ್ಲಿ ಪ್ರೇಕ್ಷಕರೆದುರು ಬರುತ್ತೆ. ಆಗಿದ್ದರೆ ಈ ಬಾರಿಯ ಬಿಗ್ ಬಾಸ್ ಹೇಗಿರುತ್ತೆ? ಏನೆಲ್ಲಾ ಹೊಸತನಗಳನ್ನ ಹೊತ್ತು ತರುತ್ತೆ ಅಂತ ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

ಕಳೆದ ಬಾರಿ ಬಿಗ್ ಬಾಸ್ ಮುಗಿದ ಬಳಿಕ ಬಿಡದಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿರುವ ಬಿಗ್ ಬಾಸ್ ಮನೆಗೆ ಬೆಂಕಿ ಬಿದ್ದಿತ್ತು. ಇದೀಗ ಮತ್ತೆ ಬಿಗ್ ಬಾಸ್ ಮನೆ ತನ್ನ ಹಳೇ ವೈಭವವನ್ನ ಪಡೆದುಕೊಂಡಿದೆ. ಹೊಸ ಸ್ಪರ್ಧಿಗಳನ್ನ ವೆಲ್ಕಂ ಮಾಡೋಕೆ ಮದುವಣಗಿತ್ತಿಯಂತೆ ರೆಡಿಯಾಗಿದೆ. ಈಗಾಗಲೇ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಚಾಲನೆ ದೊರೆತಿದ್ದು, ಕಲರ್ಸ್ ವಾಹಿನಿಯಲ್ಲಿ ಸುದೀಪ್ ಅವರ ಪ್ರೊಮೋ ಪ್ರಸಾರವಾಗ್ತಿದೆ. ಸೆಲೆಬ್ರಿಟಿ ಜೊತೆಗೆ ಜನಸಾಮಾನ್ಯರ ಆಯ್ಕೆ ಪ್ರಕ್ರಿಯೆ ಕೂಡ ಶುರುವಾಗಿದೆ.
ಎಲ್ಲವು ಸರಿಯಾಗಿಯೇ ನಡೆದರೆ ಈ ಸಲದ ಬಿಗ್ ಬಾಸ್ ಸೀಜನ್ 6, ಅಕ್ಟೋಬರ್ 15 ಕ್ಕೆ ಶುರುವಾಗಲಿದೆ. ಆದ್ರೆ ಈ ಡೇಟ್ ಸ್ವಲ್ಪ ಆಚೇ ಈಚೆ ಆದ್ರೂ ಆಶ್ಚರ್ಯ ಇಲ್ಲ. ಅಕ್ಟೋಬರ್ 13, 15 ಅಥವಾ 20ಕ್ಕೆ ಶುರುವಾಗಬಹುದು. ಈ ಬಾರಿ ಶೋ ಕೂಡ 90 ರಿಂದ 100 ದಿನಗಳ ಕಾಲ ನಡೆಯಲಿದೆ.

ಬಿಗ್ ಬಾಸ್ ಅಂದ್ರೆ ಅದ್ರಲ್ಲಿ ಯಾರೆಲ್ಲಾ ಕಂಟೆಸ್ಟ್ ಮಾಡ್ತಾರೆ ಅನ್ನೋದು ಯಾವಾಗಲೂ ಇರುವ ಕುತೂಹಲವೇ. ಫ್ಯಾನ್ಸ್ ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಈ ಬಾರಿ ಇರ್ತಾರಾ ಅಂತ ನೋಡೋಕೆ ಕಾಯ್ತಿರ್ತಾರೆ. ಜೊತೆಗೆ ಕಳೆದ ಎರಡು ಸೀಸನ್ಗಳಿಂದ ಸಾಮಾನ್ಯ ಜನ್ರಿಗೂ ಚಾನ್ಸ್ ಸಿಗ್ತಿದೆ. ಹೀಗಾಗಿ ಈ ಬಾರಿ ಬಿಗ್ ಬಾಸ್ ಮನೆಗೆ ಎಂಟ್ರಿ ಆಗೋರು ಯಾರು? ಎಷ್ಟು ಮಂದಿ ಕಂಟೆಸ್ಟ್ ಮಾಡ್ತಾರೆ? ಅದ್ರಲ್ಲಿ ಸೆಲೆಬ್ರೆಟಿಗಳು ಯಾರು? ಕಾಮನ್ ಮ್ಯಾನ್ ಯಾರು? ಈ ಕುತೂಹಲಕ್ಕೂ ಉತ್ತರ ಇದೀಗ ಸಿಕ್ಕಿದೆ. ಹೌದು , ಬಿಪಿ9 ನ್ಯೂಸ್ಗೆ ಸಿಕ್ಕಿರುವ ಕಂಟೆಸ್ಟೆಂಟ್ಸ್ ಎಕ್ಸ್ಕ್ಲ್ಯೂಸಿವ್ ಲಿಸ್ಟ್ ಇಲ್ಲಿದೆ.

ದೊರೆತಿರುವ ಸಂಭಾವ್ಯರ ಪಟ್ಟಿ ಹೀಗಿದೆ:

ಭಾವನಾ (ನಟಿ)
ಕುರಿ ಪ್ರತಾಪ್ (ಹಾಸ್ಯ ನಟ)
ಹೇಮಲತಾ (ನಿರೂಪಕಿ)
ನವೀನ್ ಕೃಷ್ಣ (ನಟ)
ಶಾಲಿನಿ ಗೌಡ (ಮಾಡಲ್, ನಟಿ)
ಪ್ರೇಮಕುಮಾರಿ (ಮೈಸೂರು)
ಮುರಳಿ (ಒಗ್ಗರಣೆ ಡಬ್ಬಿ ಖ್ಯಾತಿ)
ರಂಜಿನಿ (ಪುಟ್ಟಗೌರಿ ಖ್ಯಾತಿ)
ವಿಜಯಲಕ್ಷ್ಮಿ (ನಟಿ)
ಗಡ್ಡಪ್ಪ (ತಿಥಿ ಸಿನಿಮಾ ಖ್ಯಾತಿ)
ಸುಮನ್ ರಂಗನಾಥ್ (ನಟಿ)
ಕಾವ್ಯ ಗೌಡ (ನಟಿ)
ನವೀನ್ ಸಜ್ಜು (ಸಿಂಗರ್)

Please follow and like us:
0
http://bp9news.com/wp-content/uploads/2018/06/biggbossoR_75105_730x419-m.jpghttp://bp9news.com/wp-content/uploads/2018/06/biggbossoR_75105_730x419-m-150x150.jpgPolitical Bureauಪ್ರಮುಖಸಿನಿಮಾಬೆಂಗಳೂರು: ಬಿಗ್ ಬಾಸ್.. ಬಿಗ್ ಬಾಸ್… ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋಗಳ ಲಿಸ್ಟ್ನಲ್ಲಿ ಸದ್ಯ ಟಾಪ್ ಶೋ. ಕನ್ನಡದಲ್ಲಿ ಈ ಶೋನ ಖದರೆಽ ಬೇರೆ. ಈಗಾಗಲೇ ಕನ್ನಡದಲ್ಲಿ 5 ಸೀಸನ್ಗಳನ್ನ ಕಂಪ್ಲೀಟ್ ಆಗಿದ್ದು, ಬಿಗ್ ಬಾಸ್ 6ನೇ ಆವೃತ್ತಿಗೆ ರೆಡಿಯಾಗ್ತಿದೆ. ಬಿಗ್ ಬಾಸ್ ಪ್ರತಿ ಬಾರಿಯೂ ಹೊಸ ಹೊಸ ರೀತಿಯಲ್ಲಿ ಪ್ರೇಕ್ಷಕರೆದುರು ಬರುತ್ತೆ. ಆಗಿದ್ದರೆ ಈ ಬಾರಿಯ ಬಿಗ್ ಬಾಸ್ ಹೇಗಿರುತ್ತೆ? ಏನೆಲ್ಲಾ ಹೊಸತನಗಳನ್ನ ಹೊತ್ತು ತರುತ್ತೆ ಅಂತ...Kannada News Portal