ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷ ಟಿಕೆಟ್ ಹಂಚಿಕೆ ಮಾಡಿದ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿಯೂ ಸೇರಿದಂತೆ JDS ಭಿನ್ನಮತೀಯರು ಮಾತ್ರ ಈಗಾಗಲೇ ಪಕ್ಷಕ್ಕೆ ಸೆಡ್ಡು ಹೊಡೆದು ಮುಂದೆ ಹೋಗಿದ್ದಾರೆ. ತುಮಕೂರಿನಲ್ಲಿ ಸೊಗಡು ಶಿವಣ್ಣ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ್ಲ್ಲಿ ಎಂ.ನಾಗರಾಜ್, ಎಸ್.ಹರೀಶ್, ಸಾಗರದ ಗೋಪಾಲಕೃಷ್ಣ ಬೇಳೂರು, ನಂಜನಗೂಡಿನಿಂದ ಕೋಟೆ ಶಿವಣ್ಣ, ಕಲಘಟಗಿಯಿಂದ ಲಿಂಬಣ್ಣನವರ್, ಗದಗದಲ್ಲಿ ಶ್ರೀಶೈಲಪ್ಪ ಬಿದರೂರು ಸೇರಿದಂತೆ ಮತ್ತಿತರ ಕಡೆ ಭಿನ್ನಮತೀಯ ಕಾವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.

ತುಮಕೂರು ನಗರದಿಂದ ಸೊಗಡು ಶಿವಣ್ಣ ಟಿಕೆಟ್ ಕೈ ತಪ್ಪಿದ್ದರಿಂದ ತಮ್ಮ ಬೆಂಬಲಿಗರ ಸಭೆ ಕರೆದಿದ್ದಾರೆ. ಮೂಲಗಳ ಪ್ರಕಾರ ಅವರು ಅನ್ಯ ಪಕ್ಷದತ್ತ ಮುಖ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕಲಘಟಗಿಯಲ್ಲಿ ಆಕಾಂಕ್ಷಿಯಾಗಿದ್ದ ಲಿಂಬಣ್ಣನವರ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆಂದು ಘೋಷಿಸಿದ್ದಾರೆ. ಇನ್ನು ನಂಜನಗೂಡು ಮೀಸಲು ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮಾಜಿ ಸಚಿವ ಶಿವಣ್ಣ ಕೂಡ ಬಿಜೆಪಿ ಬಿಡುವ ತೀರ್ಮಾನಕ್ಕೆ ಬಂದಿದ್ದಾರೆ.

ಹೀಗೆ ಹಲವಾರು ಕ್ಷೇತ್ರಗಳಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿರುವ ಭಿನ್ನಮತೀಯರು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದ್ದಾರೆ. ಕೆಲವು ಕಡೆ ಬೆಂಬಲಿಗರು ಟಯರ್ಗೆನ ಬೆಂಕಿ ಹಚ್ಚಿದರೆ, ಮತ್ತಿತರೆಡೆ ರಸ್ತೆ ತಡೆ ನಡೆಸಿದ್ದಾರೆ. ಕಲಘಟಗಿಯಲ್ಲಿ ನಿಂಬಣ್ಣನವರ ಬೆಂಬಲಿಗರು ಬೆಳಗ್ಗಿನಿಂದಲೇ ಬಂದ್ಗೆವ ಕರೆ ಕೊಟ್ಟಿದ್ದರು. ಪರಿಣಾಮ ಇಡೀ ನಗರವೇ ಸ್ತಬ್ಧಗೊಂಡಿತ್ತು. ಮೂರನೇ ಪಟ್ಟಿಯಲ್ಲೂ ಟಿಕೆಟ್ ಸಿಗದವರು ಬಂಡಾಯವೇಳುವ ಸಾಧ್ಯತೆ ಇರುವುದರಿಂದ ಬಿಜೆಪಿಗೆ ಭಿನ್ನಮತೀಯರು ಮಗ್ಗಲು ಮುಳ್ಳಾಗಿ ಕಾಡುತ್ತಿದ್ದಾರೆ. ಸಿ.ವಿ.ರಾಮನ್ ನಗರ ಕಾಂಗ್ರೆಸ್ ಟಿಕೆಟ್ ವಂಚಿತ ಮಹದೇವಪ್ಪ ಆಪ್ತರಾಗಿದ್ದ ಪಿ.ರಮೇಶ್ ಅವರು ಪಕ್ಷ ತೊರೆದು ಇಂದು ಜೆಡಿಎಸ್ ಸೇರ್ಪಡೆಯಾದರೆ, ಚಿಕ್ಕಪೇಟೆಯಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹೇಮಚಂದ್ರ ಸಾಗರ್ ಅವರು ಕೂಡ ಜೆಡಿಎಸ್ ಪಕ್ಷ ಸೇರ್ಪಡೆಯಾದರು. ಇನ್ನು ಮೊಳಕಾಲ್ಮೂರು ಕ್ಷೇತ್ರದ ಬಿಜೆಪಿ ಶಾಸಕ ತಿಪ್ಪೇಸ್ವಾಮಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯವೆದ್ದಿದ್ದು, ಕಾಂಗ್ರೆಸ್ನೆತ್ತ ಮುಖ ಮಾಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೈಸೂರಿನ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಕಾಂಗ್ರೆಸ್ನಿಂ ದ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರಿಗೆ ಟಿಕೆಟ್ ಕೈ ತಪ್ಪಿದ್ದರಿಂದ ಅವರು ಬಿಜೆಪಿ ಸೇರಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಖಂಡ ವಿ.ಆರ್.ಸುದರ್ಶನ್ ಅವರು ಪಕ್ಷದ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜಾಜಿನಗರದ ಮಂಜುಳಾ ನಾಯ್ಡು, ಮಹಾಲಕ್ಷ್ಮಿಲೇಔಟ್ ಕಾಂಗ್ರೆಸ್ ಮುಖಂಡ ಗಿರೀಶ್ ಕೆ.ನಾಶಿ ಪಕ್ಷದ ವಿರುದ್ಧ ಸಿಡಿದೆದ್ದಿದ್ದಾರೆ. ಪದ್ಮನಾಭನಗರದಲ್ಲಿ ಟಿಕೆಟ್ ಆಕಾಂಕ್ಷಿಗಳಾಗಿದ್ದ ಡಿ.ವೆಂಕಟೇಶ್ಮೂಗರ್ತಿ, ಚೇತನ್ಗೌ್ಡ, ಎಂ.ಶ್ರೀನಿವಾಸ್ ಅವರೂ ಕೂಡ ಪರ್ಯಾಯ ಚಿಂತನೆ ನಡೆಸಿದ್ದಾರೆ. ಒಟ್ಟಾರೆ ಕಾಂಗ್ರೆಸ್-ಬಿಜೆಪಿಯಲ್ಲಿ ಇಂದೂ ಕೂಡ ಆಕ್ರೋಶ ಕಟ್ಟೆ ಒಡೆದಿದೆ. ತೇಪೆ ಹಾಕಲು ವರಿಷ್ಠರು ನಡೆಸುತ್ತಿರುವ ಪ್ರಯತ್ನ ಕೈಗೂಡಿದಂತೆ ಕಂಡು ಬಂದಿಲ್ಲ.

Please follow and like us:
0
http://bp9news.com/wp-content/uploads/2018/04/BJP-congress-JDS.jpghttp://bp9news.com/wp-content/uploads/2018/04/BJP-congress-JDS-150x150.jpgPolitical Bureauಪ್ರಮುಖರಾಜಕೀಯTicket cheater prepares to hit the martyr in the state !!!ಬೆಂಗಳೂರು: ರಾಜ್ಯದಲ್ಲಿ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷ ಟಿಕೆಟ್ ಹಂಚಿಕೆ ಮಾಡಿದ ನಂತರ ಎರಡೂ ರಾಷ್ಟ್ರೀಯ ಪಕ್ಷಗಳಲ್ಲಿಯೂ ಸೇರಿದಂತೆ JDS ಭಿನ್ನಮತೀಯರು ಮಾತ್ರ ಈಗಾಗಲೇ ಪಕ್ಷಕ್ಕೆ ಸೆಡ್ಡು ಹೊಡೆದು ಮುಂದೆ ಹೋಗಿದ್ದಾರೆ. ತುಮಕೂರಿನಲ್ಲಿ ಸೊಗಡು ಶಿವಣ್ಣ, ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ನ್ಲ್ಲಿ ಎಂ.ನಾಗರಾಜ್, ಎಸ್.ಹರೀಶ್, ಸಾಗರದ ಗೋಪಾಲಕೃಷ್ಣ ಬೇಳೂರು, ನಂಜನಗೂಡಿನಿಂದ ಕೋಟೆ ಶಿವಣ್ಣ, ಕಲಘಟಗಿಯಿಂದ ಲಿಂಬಣ್ಣನವರ್, ಗದಗದಲ್ಲಿ ಶ್ರೀಶೈಲಪ್ಪ ಬಿದರೂರು ಸೇರಿದಂತೆ ಮತ್ತಿತರ ಕಡೆ ಭಿನ್ನಮತೀಯ ಕಾವು ಕ್ಷಣಕ್ಷಣಕ್ಕೂ...Kannada News Portal