ಬೆಂಗಳೂರು : ನಾನು ಹಣಕೊಡದಿದ್ದ ಕಾರಣ ಟಿಕೆಟ್ ನೀಡಲಿಲ್ಲ ಎಂದು ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ ಎಸ್ ನವೀನ್ ನನ್ನ ಬಳಿ ಪರಿವರ್ತನಾ ಯಾತ್ರೆಗಾಗಿ ಹಣ ಕೇಳಿದ್ದರು. ನಾನೂ ಕೂಡ ಆಗ 25 ಲಕ್ಷ ರೂ ಹಣ ನೀಡಿದ್ದೆ. ಪಕ್ಷ ಸಂಘಟನೆಗಾಗಿ 4 – 5 ಕೋಟಿ ಖರ್ಚು ಮಾಡಿಸಿದ್ದಾರೆ. ಮತ್ತಷ್ಟು ಹಣ ಕೇಢಳಿದಾಗ ನನ್ನ ಬಳಿ ಹಣ ಇರಲಿಲ್ಲ. ಆದ ಕಾರಣವಾಗಿಯೇ ಬಿಜೆಪಿ ನನಗೆ ಟಿಕೆಟ್ ನೀಡಲಿಲ್ಲ ಎಂದು ಅವರು ಆರೋಪ ಮಾಡಿದ್ದಾರೆ.

ಇನ್ನು ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಬಿಜೆಪಿ ಮುಖಂಡ ಶ್ರೀರಾಮುಲುರವರ ಕಟ್ಟಾ ಬೆಂಬಲಿಗ. ಕಳೆದ ಬಾರಿ ಶಾಸಕನಾಗಲೂ ರಾಮುಲುರವರೇ ಬೆಂಬಲ ನೀಡಿದ್ದರು. ಈ ಬಾರಿ ಶ್ರೀರಾಮುಲು ತಾವೇ ಸ್ವತಃ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದ ಕಾರಣ ಬಿಜೆಪಿ ಹೈ ಕಮಾಂಡ್ ತಿಪ್ಪೇಸ್ವಾಮಿಗೆ ಟಿಕೆಟ್ ನಿರಾಕರಿಸಿತ್ತು. ಆದರೂ ಪಟ್ಟು ಬಿಡದ ತಿಪ್ಪೇಸ್ವಾಮಿ ಕ್ಷೇತ್ರದ ಮತದಾರರು ನನ್ನ ಬೆಂಬಲಕ್ಕೆ ಇದ್ದಾರೆ. ನಾನು ಪಕ್ಷೇತ್ರವಾಗಿಯೇ ಕಣಕ್ಕಿಳಿದು ನನ್ನ ಶಕ್ತಿ ಪ್ರದರ್ಶನ ಮಾಡುವುದಾಗಿ ಸವಾಲು ಎಸೆದು ನಾಮಪತ್ರ ಸಲ್ಲಿಸಿ ಈಗ ಕಣದಲ್ಲಿ ಇದ್ದಾರೆ.

ತಿಪ್ಪೇಸ್ವಾಮಿಯವರ ಈ ನಡೆಯಿಂದಾಗಿ ಬಿಜೆಪಿ ಅವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ನಿನ್ನೆ ಉಚ್ಚಾಟನೆ ಮಾಡಿತ್ತು. ಇದೀಗ ಮತ ಪ್ರಚಾರದ ಱಲಿಯಲ್ಲಿ ತಿಪ್ಪೇಸ್ವಾಮಿ ಬಿಜೆಪಿ ಮೇಲೆ ಹೊಸದೊಂದು ಹಾಂಬ್ ಸಿಡಿಸಿ, ಹಣ ಕೊಡದ ಕಾರಣ ನನಗೆ ಟಿಕೆಟ್ ಕೊಡಲಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/05/dc-Cover-bsnudco08r3igtj44duecnr7m4-20180415030055.Medi_.jpeghttp://bp9news.com/wp-content/uploads/2018/05/dc-Cover-bsnudco08r3igtj44duecnr7m4-20180415030055.Medi_-150x150.jpegPolitical Bureauಚಿತ್ರದುರ್ಗಪ್ರಮುಖರಾಜಕೀಯಬೆಂಗಳೂರು : ನಾನು ಹಣಕೊಡದಿದ್ದ ಕಾರಣ ಟಿಕೆಟ್ ನೀಡಲಿಲ್ಲ ಎಂದು ಮೊಳಕಾಲ್ಮೂರು ಶಾಸಕ ತಿಪ್ಪೇಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಚಿತ್ರದುರ್ಗ ಜಿಲ್ಲಾಧ್ಯಕ್ಷ ಕೆ ಎಸ್ ನವೀನ್ ನನ್ನ ಬಳಿ ಪರಿವರ್ತನಾ ಯಾತ್ರೆಗಾಗಿ ಹಣ ಕೇಳಿದ್ದರು. ನಾನೂ ಕೂಡ ಆಗ 25 ಲಕ್ಷ ರೂ ಹಣ ನೀಡಿದ್ದೆ. ಪಕ್ಷ ಸಂಘಟನೆಗಾಗಿ 4 - 5 ಕೋಟಿ ಖರ್ಚು ಮಾಡಿಸಿದ್ದಾರೆ. ಮತ್ತಷ್ಟು ಹಣ ಕೇಢಳಿದಾಗ ನನ್ನ ಬಳಿ ಹಣ ಇರಲಿಲ್ಲ. ಆದ...Kannada News Portal