ತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಡಿಸಿ ಗೌರಿಶಂಕರ್ ಗಂಭೀರ ಆರೋಪ ಮಾಡಿದರು.

ತುಮಕೂರು ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಪಾಲಸಂದ್ರ ಗ್ರಾಮದಲ್ಲಿ ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನೀವು ಅಖಾಡ ರೆಡಿ ಮಾಡಿ ನಾನು ಅಖಾಡಕ್ಕೆ ಧುಮುಕುತ್ತೇನೆ ಗ್ರಾಮಾಂತರ ಕ್ಷೇತ್ರದ ಜನತೆ ಯಾರು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ ಎಂದು  ತೀರ್ಮಾನ ಮಾಡುತ್ತಾರೆ ಎಂದು ಬಹಿರಂಗ ಪಂಥಾಹ್ವಾನ ನೀಡಿದರು.

ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಇಡೀ ರಾಜ್ಯದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ತುಮಕೂರು ಗ್ರಾಮಾಂತರದಲ್ಲಿ ಈಗಾಗಲೇ ಐವತ್ತು ಹಳ್ಳಿಗಳಲ್ಲಿ ಪ್ರವಾಸ ಮಾಡಿ ಕುಮಾರಣ್ಣನವರು ಅಭಿವೃದ್ಧಿ ಕಾರ್ಯಗಳನ್ನು ಮನೆಮನೆಗೆ ಮುಟ್ಟಿಸಲಾಗಿದೆ ಈ ಭಾಗದಲ್ಲಿ ಸಹ ಜನರಿಂದ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಜಮೀರ್ ಅಹಮದ್ ಖಾನ್ ಅವರಿಗೆ ತುಮಕೂರು ತವರು ಮನೆಯಿದ್ದಂತೆ ಅವರು ಇಲ್ಲಿ ಬಂದು ಹೋಗಿ ಮಾಡುತ್ತಿರುತ್ತಾರೆ ಜೆಡಿಎಸ್ ವರಿಷ್ಠರು ಅವರನ್ನು ಗಮನಿಸಿ ಕೊಳ್ಳುತ್ತಾರೆ ಈ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ನಾವು ಜನರ ಮನೆಗೆ ಹೋಗಿ ನಾವು ಮಾಡಿರುವ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇವೆ .ಸೋಲು ಗೆಲುವು ಜನ ತೀರ್ಮಾನ ಮಾಡುತ್ತಾರೆ ಜನತಾ ತೀರ್ಪಿಗೆ ನಾವು ಬದ್ಧ   ಜನರ ತೀರ್ಮಾನದ ಮುಂದೆ ಯಾರ ಆಟವೂ ನಡೆಯುವುದಿಲ್ಲ  ಎಂದರು.

Please follow and like us:
0
BP9 News Bureauತುಮಕೂರುತುಮಕೂರು: ಅಭಿವೃದ್ಧಿ ಹೆಸರಿನಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ ಸುರೇಶ್ ಗೌಡ ಜನರಿಗೆ ಮಕ್ಮಲ್ ಟೋಪಿ ಹಾಕುತ್ತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್ ಮುಖಂಡ ಡಿಸಿ ಗೌರಿಶಂಕರ್ ಗಂಭೀರ ಆರೋಪ ಮಾಡಿದರು. ತುಮಕೂರು ಗ್ರಾಮಾಂತರ ಕ್ಷೇತ್ರವ್ಯಾಪ್ತಿಯ ಪಾಲಸಂದ್ರ ಗ್ರಾಮದಲ್ಲಿ ಮನೆಮನೆಗೆ ಕುಮಾರಣ್ಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ನೀವು ಅಖಾಡ ರೆಡಿ ಮಾಡಿ ನಾನು ಅಖಾಡಕ್ಕೆ ಧುಮುಕುತ್ತೇನೆ ಗ್ರಾಮಾಂತರ ಕ್ಷೇತ್ರದ ಜನತೆ ಯಾರು ಅಭಿವೃದ್ಧಿ ಕಾರ್ಯ...Kannada News Portal