ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಕರಾಳ ದಿನಾಚರಣೆ ಆಚರಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ  ನಡೆದ ಕರಾಳ ದಿನಾಚರಣೆಯ ವಿವರ….

ತುಮಕೂರು

ನೂತನ ಸಿಎಂ ಎಚ್ಡಿಕೆ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಮತ್ತು ಕಾಂಗ್ರೆಸ್​​​ ಮತ್ತು ಜೆಡಿಎಸ್​​​ ಮೈತ್ರಿ ವಿರುದ್ಧ ತುಮಕೂರಿನ ಟೌನ್ ಹಾಲ್​​ನಲ್ಲಿ ಬಿಜೆಪಿ ಕರಾಳ ದಿನಾಚರಣೆ ನಡೆಸಿತು. ಜೆಡಿಎಸ್, ಕಾಂಗ್ರೆಸ್ ದೋಸ್ತಿ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು, ಕುತಂತ್ರ ಮೈತ್ರಿ ಸರ್ಕಾರಕ್ಕೆ ಧಿಕ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ತುಮಕೂರು ನಗರ ಬಿಜೆಪಿ ಶಾಸಕ ಜಿಬಿ ಜ್ಯೋತಿ ಗಣೇಶ್ ಭಾಗಿಯಾಗಿ ಮಾತನಾಡಿದರು. ಅಪವಿತ್ರ ಮೈತ್ರಿ ಸರ್ಕಾರದ ವಿರುದ್ಧ ಇಂದು  ರಾಜ್ಯಾದ್ಯಂತ ದಿನವನ್ನಾಗಿ ಆಚರಿಸಲಾಗುತ್ತಿದೆ.ಯಡಿಯೂರಪ್ಪರನವರು ಏನೂ ತಪ್ಪು ಮಾಡದೇ ರಾಜೀನಾಮೆ ಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ ಅವರ ಕಾರ್ಯಕ್ಕೆ ಜನ ಮೆಚ್ಚಿದ್ದಾರೆ.ಕರ್ನಾಟಕದಲ್ಲಿ ಜನರು ಬಿಜೆಪಿಗೆ ಒಳ್ಳೆಯ ತೀರ್ಪು ಕೊಟ್ಟಿದ್ದರು ಆದರೆ ಕಾಂಗ್ರೆಸ್​​​ ಮತ್ತು ಜೆಡಿಎಸ್​​ ಅಪವಿತ್ರ ಮೈತ್ರಿ ಮಾಡಿಕೊಂಡರು ಎಂದು ಹೇಳಿದರು.

ಬಿಎಸ್​​​ವೈ ರಾಜೀನಾಮೆ ಕೊಟ್ಟರೂ ಸಹ ರೈತರಿಗೋಸ್ಕರ  ಹೋರಾಟ ಮಾಡುತ್ತಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿಯವರ ಕಣ್ಣಾಮುಚ್ಚಾಲೆ ಆಟ ಇಡೀ ರಾಜ್ಯದ ಜನೆತೆಗೆ ತಿಳಿದಿದೆ ಎಂದು ವಗ್ದಾಳಿ ನಡೆಸಿದರು.

ಗದಗ

ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ  ವಿರೋಧಿಸಿ ಗದಗ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಕರಾಳ ದಿನ ಆಚರಿಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ  ಸೇರಿದ ಬಿಜೆಪಿ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದ್ದಲ್ಲದೆ, ಕಪ್ಪು ಪಟ್ಟಿ ಧರಿಸಿ, ಮೈತ್ರಿ ಸರ್ಕಾರದ ವಿರುದ್ದ ಧಿಕ್ಕಾರ ಕೂಗಿದರು. ನಂತರ ಟೈಯರ್​​​ಗೆ ಬೆಂಕಿ ಹಚ್ಚಿ ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಕೆಲ ಕ್ಷಣ ರಸ್ತೆ ತಡೆಯಿಂದ ಸಂಚಾರ ಅಸ್ತವ್ಯಸ್ಥವಾಗಿತ್ತು.

ರಾಯಚೂರು

ಜನಾದೇಶಕ್ಕೆ ವಿರೋಧವಾಗಿ ಕಾಂಗ್ರೆಸ್, ಜೆಡಿಎಸ್ ಅಪವಿತ್ರ ಮೈತ್ರಿ ಮಾಡಿಕೊಳ್ಳುವ ಮೂಲಕ ರಾಜ್ಯದಲ್ಲಿ ಅಧಿಕಾರ ಹಿಡಿದಿವೆ ಎಂದು ಆರೋಪಿಸಿ ರಾಯಚೂರಿನಲ್ಲಿ ಬಿಜೆಪಿ ಕರಾಳದಿನ ಆಚರಿಸಿದರು.

ನಗರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಜೆಡಿಎಸ್ ಕಾಂಗ್ರೆಸ್ ಮೈತ್ರಿ ವಿರುದ್ದ ಕಿಡಿಕಾರಿದರು. ಕಪ್ಪು ಪಟ್ಟಿಯನ್ನ ಧರಿಸಿ ನೂತನ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಕೊಡಗು

ಜೆಡಿಎಸ್  ಹಾಗೂ ಕಾಂಗ್ರೆಸ್ ಮೈತ್ರಿ  ವಿರುದ್ಧ ಕೊಡಗಿನಲ್ಲೂ ಕೂಡಾ ಬಿಜೆಪಿ ಕಾರ್ಯಕರ್ತರು ಕರಾಳ ದಿನಾಚರಣೆ ನಡೆಸಿದರು. ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಕಪ್ಪು ಬಾವುಟ ಪ್ರದರ್ಶಿಸಿ  ಕರಾಳ ದಿನಾಚರಣೆ ಅಚರಿಸಿದರಲ್ಲದೆ, ದೇವೇಗೌಡ,ಕುಮಾರಸ್ವಾಮಿ, ಸಿದ್ದರಾಮಯ್ಯ,ವಿರುದ್ಧ ಧಿಕ್ಕಾರ ಕೂಗಿದರು.

ಟಿ.ನರಸೀಪುರ

ಇಂದು ಹೆಚ್.ಡಿ.ಕುಮಾರ ಸ್ವಾಮಿ‌ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಹಿನ್ನೆಲೆ ಮತ್ತು ಕಾಂಗ್ರೆಸ್​​​​ ಜೆಡಿಎಸ್​​​ ಮೈತ್ರಿ ವಿರುದ್ಧ ಟಿ.ನರಸೀಪುರ ಪಟ್ಟಣ ಬಸ್ ನಿಲ್ದಾಣದ ಬಳಿ ಬಿಜೆಪಿ‌ ಕಾರ್ಯಕರ್ತರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

ವರುಣ ಹಾಗೂ ಟಿ.ನರಸೀಪುರ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ವಿರುಧ್ದ ಘೋಷಣೆ ಕೂಗಿ, ಇದು ಅಪವಿತ್ರ ಮೈತ್ರಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಕಾಕ

ರಾಜ್ಯದಲ್ಲಿ ನೂತನವಾಗಿ ರಚನೆಯಾದ ಜೆಡೆಎಸ್ ಕಾಂಗ್ರೇಸ್ ಮೈತ್ರಿ ಸರಕಾರ ಅಪವಿತ್ರ ಮತ್ತು ಜನಮತ ವಿರೋಧಿಯಾಗಿದೆ ಎಂದು ಗೋಕಾಕ ಬಿಜೆಪಿ ಘಟಕದ ವತಿಯಿಂದ ಕಪ್ಪು ಬಟ್ಟೆ ಕಟ್ಟಿಕೊಂಡು ಕರಾಳ ದಿನ ಆಚರಣೆ ಮಾಡಿದರು.

ಮುಖಂಡ ಅಶೋಕ ಪೂಜಾರಿ ನೇತ್ರತ್ವದಲ್ಲಿ ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ರಾಜ್ಯದಲ್ಲಿ ರಚನೆಯಾದ ಮೈತ್ರಿ ಸರಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಷ ವ್ಯಕ್ತಪಡಿಸಿದರು.

ಜನಾದೇಶದ ವಿರುದ್ಧ ಅಪವಿತ್ರ ಮೈತ್ರಿ ಮಾಡಿಕೊಂಡು ಸರಕಾರ ರಚಿಸಿರುವ ಜೆಡಿಎಸ್-ಕಾಂಗ್ರೇಸ್ ಜನವಿರೋಧಿ ನೀತಿ ಅನುಸರಿಸುವ ಮೂಲಕ ರಾಜ್ಯದಲ್ಲಿ ಕೆಟ್ಟ ಪರಂಪರೆಗೆ ನಾಂದಿ ಹಾಡಿದ್ದಾರೆ. ಈ ಅಪವಿತ್ರ ಸರಕಾರ ಬಹುದಿನಗಳ ಕಾಲ ಉಳಿಯದು ಎಂದು ಬಿಜೆಪಿ ಕಾರ್ಯಕರ್ತರು ತಮ್ಮ ಆಕ್ರೋಷ ವ್ಯಕ್ತಪಡಿಸಿದರು.

ಈ ಕರಾಳ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಮ್ ಎಲ್ ಮುತ್ತೆನ್ನವರ, ನಗರ ಘಟಕ ಅಧ್ಯಕ್ಷ ಶಶಿಧರ ದೇಮಶೆಟ್ಟಿ, ಪ್ರಮೋದ ಜೋಶಿ, ರಾಜು ಜಾಧವ, ವಿರುಪಾಕ್ಷ ಯಲಿಗಾರ, ಚನ್ನಗೌಡ ಪಾಟೀಲ, ಅಶೋಕ ಓಸ್ವಾಲ, ಸುನೀಲ ಮುರ್ಕಿಭಾವಿ, ಲಕ್ಕಪ್ಪ ತಹಶೀಲದಾರ, ಶ್ರೀದೇವಿ ತಡಕೋಡ, ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

Please follow and like us:
0
http://bp9news.com/wp-content/uploads/2018/05/Karnatakada-Miditha-75.jpeghttp://bp9news.com/wp-content/uploads/2018/05/Karnatakada-Miditha-75-150x150.jpegBP9 Bureauಗದಗತುಮಕೂರುಪ್ರಮುಖಮೈಸೂರುರಾಜಕೀಯರಾಯಚೂರು  ಬೆಂಗಳೂರು : ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ವಿರೋಧಿಸಿ ಬಿಜೆಪಿ ಇಂದು ರಾಜ್ಯಾದ್ಯಂತ ಕರಾಳ ದಿನಾಚರಣೆ ಆಚರಿಸುತ್ತಿದೆ. ರಾಜ್ಯದ ವಿವಿಧ ಭಾಗಗಳಲ್ಲಿ  ನಡೆದ ಕರಾಳ ದಿನಾಚರಣೆಯ ವಿವರ…. ತುಮಕೂರು ನೂತನ ಸಿಎಂ ಎಚ್ಡಿಕೆ ಪ್ರಮಾಣ ವಚನ ಸ್ವೀಕಾರ ಹಿನ್ನೆಲೆ ಮತ್ತು ಕಾಂಗ್ರೆಸ್​​​ ಮತ್ತು ಜೆಡಿಎಸ್​​​ ಮೈತ್ರಿ ವಿರುದ್ಧ ತುಮಕೂರಿನ ಟೌನ್ ಹಾಲ್​​ನಲ್ಲಿ ಬಿಜೆಪಿ ಕರಾಳ ದಿನಾಚರಣೆ ನಡೆಸಿತು. ಜೆಡಿಎಸ್, ಕಾಂಗ್ರೆಸ್ ದೋಸ್ತಿ ಸರ್ಕಾರದ ವಿರುದ್ಧ ಹರಿಹಾಯ್ದ ಬಿಜೆಪಿ ಮುಖಂಡರು, ಕುತಂತ್ರ...Kannada News Portal