ತಿಪಟೂರು: ತಾಲೂಕಿನ ಆಲೂರು, ಪರವಗೊಂಡನಹಳ್ಳಿ, ಕಾಲೋನಿಗಳಲ್ಲಿ ಬಿಜೆಪಿ ಪ್ರಚಾರ ನಡೆಸಿದ ಮಾಜಿ ಶಾಸಕ ಬಿ.ಸಿ.ನಾಗೇಶ್ ಅವರಿಗೆ ಗ್ರಾಮಸ್ಥರು ಸ್ಥಳೀಯ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು.

ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಏರ್ಪಟ್ಟಿದೆ. ಗಂಟೆಗಟ್ಟಲೆ ಟ್ಯಾಂಕ್ ಮುಂದೆ ಬಿಂದಿಗೆ‌ ನೀರಿಗಾಗಿ ಸರದಿ ನಿಲ್ಲುವಂತಾಗಿದೆ. ರಸ್ತೆಗಳು ದುರಸ್ತಿಯಾಗಿಲ್ಲ. ಯಾವುದೇ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಅಧಿಕಾರಿಗಳು ಗ್ರಾಮದ ನೈರ್ಮಲ್ಯದ ಬಗ್ಗೆಯಾಗಲೀ, ಸಮಸ್ಯೆಯನ್ನು ಪರಿಹರಿಸಿವುದಕ್ಕಾಗಲೀ ಪ್ರಯತ್ನಿಸುತ್ತಿಲ್ಲ. ದಿನನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಚರಂಡಿ ವ್ಯವಸ್ಥೆ ಸರಿ ಇಲ್ಲದೆ ರಸ್ತೆಯಲ್ಲಿ ಕೊಳಚೆ ನೀರು ಹರಿಯುವಂತಾಗಿದೆ. ಸ್ವಚ್ಛತೆ ಮರೀಚಿಕೆಯಾಗಿ ಕಾಯಿಲೆಗಳಿಗೆ ಗ್ರಾಮಸ್ಥರು ತುತ್ತಾಗಬೇಕಾದ ಪರಿಸ್ಥಿತಿ ಎದುರಾಗಿದೆ ಎಂದು ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟರು. ಈ ಸಂದರ್ಭದಲ್ಲಿ ಮಾಜಿ ಶಾಸಕರು ತಮ್ಮ ಮೊಬೈಲ್ ಮೂಲಕವೇ ಹದಗೆಟ್ಟ ರಸ್ತೆ, ಟ್ಯಾಂಕ್ ಮುಂದೆ ನೀರಿಗಾಗಿ ಇಟ್ಟಿದ್ದ ನೂರಾರು ಬಿಂದಿಗೆಗಳು, ಕೈಗೆಟುಕುವಂತೆ ನೇತಾಡುತ್ತಿದ್ದ ವಿದ್ಯುತ್ ತಂತಿ ಮುಂತಾದ ಜನರ ಸಮಸ್ಯೆಯ ಭಾವಚಿತ್ರವನ್ನು ತೆಗೆದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಪರಿಹರಿಸುವಂತೆ ಆಗ್ರಹಿಸುವುದಾಗಿ ಹೇಳಿದರು.

ಕಳೆದ ೫ ವರ್ಷದಿಂದ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಅಭಿವೃದ್ಧಿ ಮರೀಚಿಕೆಯಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಕ್ಷೇತ್ರದ ಜನತೆ ಬೆಂಬಲಿಸಬೇಕು, ತಿಪಟೂರು ಕ್ಷೇತ್ರವನ್ನು ನಿಮ್ಮೆಲ್ಲರ ಸಹಕಾರದಿಂದ ಅಭಿವೃದ್ಧಿಯಲ್ಲಿ ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಲಾಗುವುದು ಎಂದರು.

ತಾಲೂಕು ಬಿಜೆಪಿ ಮಾಜಿ ಅಧ್ಯಕ್ಷ ಗಂಗಾಧರ್, ಗ್ರಾಪಂ ಮಾಜಿ ಅಧ್ಯಕ್ಷರಾದ ರೇಣುಕಾ ಮೂರ್ತಿ, ಶೇಖರಪ್ಪ,  ಗ್ರಾಮಸ್ಥರಾದ ಬಸಪ್ಪ, ಮಧು, ರೇಣುಕಯ್ಯ, ಚಂದ್ರು ಮುಂತಾದವರಿದ್ದರು.

 

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/03/WhatsApp-Image-2018-03-14-at-4.01.26-PM-1024x768.jpeghttp://bp9news.com/wp-content/uploads/2018/03/WhatsApp-Image-2018-03-14-at-4.01.26-PM-150x150.jpegBP9 Bureauತುಮಕೂರುತಿಪಟೂರು: ತಾಲೂಕಿನ ಆಲೂರು, ಪರವಗೊಂಡನಹಳ್ಳಿ, ಕಾಲೋನಿಗಳಲ್ಲಿ ಬಿಜೆಪಿ ಪ್ರಚಾರ ನಡೆಸಿದ ಮಾಜಿ ಶಾಸಕ ಬಿ.ಸಿ.ನಾಗೇಶ್ ಅವರಿಗೆ ಗ್ರಾಮಸ್ಥರು ಸ್ಥಳೀಯ ಸಮಸ್ಯೆಗಳ ಕುರಿತು ಅಳಲು ತೋಡಿಕೊಂಡರು. ಗ್ರಾಮದಲ್ಲಿ ಕುಡಿಯುವ ನೀರಿಗೆ ತತ್ವಾರ ಏರ್ಪಟ್ಟಿದೆ. ಗಂಟೆಗಟ್ಟಲೆ ಟ್ಯಾಂಕ್ ಮುಂದೆ ಬಿಂದಿಗೆ‌ ನೀರಿಗಾಗಿ ಸರದಿ ನಿಲ್ಲುವಂತಾಗಿದೆ. ರಸ್ತೆಗಳು ದುರಸ್ತಿಯಾಗಿಲ್ಲ. ಯಾವುದೇ ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಆಲಿಸುತ್ತಿಲ್ಲ. ಅಧಿಕಾರಿಗಳು ಗ್ರಾಮದ ನೈರ್ಮಲ್ಯದ ಬಗ್ಗೆಯಾಗಲೀ, ಸಮಸ್ಯೆಯನ್ನು ಪರಿಹರಿಸಿವುದಕ್ಕಾಗಲೀ ಪ್ರಯತ್ನಿಸುತ್ತಿಲ್ಲ. ದಿನನಿತ್ಯ ನೀರಿಗಾಗಿ ಪರದಾಡುವಂತಾಗಿದೆ. ಚರಂಡಿ ವ್ಯವಸ್ಥೆ ಸರಿ...Kannada News Portal