ತುಮಕೂರು : ಸದ್ಯ ರಾಜ್ಯ ರಾಜಕೀಯ ಅತಂತ್ರವಾಗಿದ್ದು, ಕ್ಷಣ, ಕ್ಷಣಕ್ಕೆ ತಿರುವು ಪಡೆಯುತ್ತಿದೆ. ಕಾಂಗ್ರೆಸ್​​​ ಮತ್ತು ಜೆಡಿಎಸ್​​​ ಸರ್ಕಾರ ರಚನೆಗೆ ಕಮಾಲ್​​​ ನಡೆಸುತ್ತಿದ್ದರೆ, ಅತಿ ದೊಡ್ಡ ಪಕ್ಷವಾದ ಬಿಜೆಪಿ, ಹೇಗಾದರೂ ಮಾಡಿ ಸರ್ಕಾರ ರಚಿಸಲು ದೆಹಲಿಯಿಂದ ಪ್ಲ್ಯಾನ್​​​ ಮಾಡುತ್ತಿದ್ದಾರೆ.

ಸರ್ಕಾರ ರಚನೆಗಾಗಿ   ಬಿಜೆಪಿ,  ಕಾಂಗ್ರೆಸ್​​​ ಮತ್ತು ಜೆಡಿಎಸ್​​​   ಶಾಸಕರಿಗೆ ಗಾಳ ಹಾಕುತ್ತಿದ್ದು, ಅದಕ್ಕೆ ಶ್ರೀರಾಮುಲು ಅಖಾಡಕ್ಕೆ ಇಳಿದಿದ್ದಾರೆ ಎನ್ನು ಮಾಹಿತಿ ಇದೆ. ಅದಕ್ಕೆ ಪುಷ್ಠಿ ನೀಡುವಂತೆ ತುಮಕೂರಿನಿಂದ ಸಂಚಲನ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ  ಪಾವಗಡ ಕ್ಷೇತ್ರದ ಕಾಂಗ್ರೆಸ್​​​​ ಶಾಸಕ ಮತ್ತು ಶಿರಾದ ಜೆಡಿಎಸ್​​​​ ಶಾಸಕರನ್ನು ಶ್ರೀರಾಮುಲು ಸಂಪರ್ಕಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿಂದುಳಿದ ಕ್ಷೇತ್ರವಾದ ಪಾವಗಡದಿಂದ ಕಾಂಗ್ರೆಸ್​​​ ಅಭ್ಯರ್ಥಿಯಾಗಿ ವೆಂಕಟರಮಣಪ್ಪ ಜೆಡಿಎಸ್​​​ ವಿರುದ್ಧ ಗೆಲುವು ಸಾಧಿಸಿದ್ದರು. ಹಾಗೆ ಶಿರಾದಲ್ಲಿ ಜೆಡಿಎಸ್​​​ ಅಭ್ಯರ್ಥಿಯಾಗಿ ಪಿ.ಸತ್ಯನಾರಾಯಣ್​​ ಗೆದ್ದಿದ್ದರು.ಈಗ ಈ ಇಬ್ಬರು ಶಾಸಕರಿಗೆ ಬಿಜೆಪಿ ಗಾಳ ಹಾಕಿದ್ದು, ವೆಂಕಟರಮಣಪ್ಪ ಮತ್ತು ಪಿ.ಸತ್ಯನಾರಾಯಣ ಅವರನ್ನ ರಾಮುಲು ಸಂಪರ್ಕ ಮಾಡಿ ಬಿಜೆಪಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಆದರೆ ಇನ್ನು ವರೆಗೂ ಈ ಇಬ್ಬರು ಶಾಸಕರು ರಾಮುಲು ಗಾಳಕ್ಕೆ ಬಿದ್ದಿಲ್ಲ ಎಂದು ಮಾಹಿತಿ ಸಿಕ್ಕಿದ್ದು, ರಾಮುಲು ಸಹಿತ ಬಿಡದೆ ಇನ್ನೂ ಸಂಪರ್ಕದಲ್ಲಿದ್ದಾರೆ ಎಂದು ಆಪ್ತವಲಯ ಹೇಳಿದೆ. ಒಟ್ಟಾರೆ ಸರ್ಕಾರ ರಚಿಸುವ ಜಿದ್ದಿಗೆ ಬಿದ್ದಿರುವ  ಬಿಜೆಪಿ ಆಯ್ದ ಕಾಂಗ್ರೆಸ್​​​ ಮತ್ತು ಜೆಡಿಎಸ್​​​ ಶಾಸಕರನ್ನ   ಸಂಪರ್ಕಿಸುತ್ತಿದ್ದು,ಆಂತರಿಕವಾಗಿ ಒಂದೊಂದೆ ಪ್ಲ್ಯಾನ್​​ನ್ನು ಪ್ರಯೋಗಿಸುತ್ತಿದೆ ಎಂಬುದಂತು ಸತ್ಯವಾಗಿದೆ.

 

Please follow and like us:
0
http://bp9news.com/wp-content/uploads/2018/05/collage-1-25.jpghttp://bp9news.com/wp-content/uploads/2018/05/collage-1-25-150x150.jpgBP9 Bureauತುಮಕೂರುಪ್ರಮುಖರಾಜಕೀಯತುಮಕೂರು : ಸದ್ಯ ರಾಜ್ಯ ರಾಜಕೀಯ ಅತಂತ್ರವಾಗಿದ್ದು, ಕ್ಷಣ, ಕ್ಷಣಕ್ಕೆ ತಿರುವು ಪಡೆಯುತ್ತಿದೆ. ಕಾಂಗ್ರೆಸ್​​​ ಮತ್ತು ಜೆಡಿಎಸ್​​​ ಸರ್ಕಾರ ರಚನೆಗೆ ಕಮಾಲ್​​​ ನಡೆಸುತ್ತಿದ್ದರೆ, ಅತಿ ದೊಡ್ಡ ಪಕ್ಷವಾದ ಬಿಜೆಪಿ, ಹೇಗಾದರೂ ಮಾಡಿ ಸರ್ಕಾರ ರಚಿಸಲು ದೆಹಲಿಯಿಂದ ಪ್ಲ್ಯಾನ್​​​ ಮಾಡುತ್ತಿದ್ದಾರೆ. ಸರ್ಕಾರ ರಚನೆಗಾಗಿ   ಬಿಜೆಪಿ,  ಕಾಂಗ್ರೆಸ್​​​ ಮತ್ತು ಜೆಡಿಎಸ್​​​   ಶಾಸಕರಿಗೆ ಗಾಳ ಹಾಕುತ್ತಿದ್ದು, ಅದಕ್ಕೆ ಶ್ರೀರಾಮುಲು ಅಖಾಡಕ್ಕೆ ಇಳಿದಿದ್ದಾರೆ ಎನ್ನು ಮಾಹಿತಿ ಇದೆ. ಅದಕ್ಕೆ ಪುಷ್ಠಿ ನೀಡುವಂತೆ ತುಮಕೂರಿನಿಂದ ಸಂಚಲನ ಸುದ್ದಿಯೊಂದು...Kannada News Portal