ತುರುವೇಕೆರೆ: ಕೇಂದ್ರ ಸರ್ಕಾರ  ಹಿಂದುಳಿದ ವರ್ಗಗಳಿಗೆ ಸೇರಿರುವ  ನೇಕಾರರ ಹಾಗೂ ಕರಕುಶಲ  ಉತ್ಪನ್ನಗಳ ಮೇಲೆ ವಿಧಿಸಿರುವ GST ತೆರಿಗೆಯನ್ನು ಹಿಂಪಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಒತ್ತಾಯಿಸಿದ್ದಾರೆ.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಮೇಲೆ‌ ಕೆಂಗಣ್ಣು ಬೀರಿದೆ. ನೇಕಾರ ಕುಟುಂಬಗಳು ನೇಯ್ಗೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡು ಬದುಕು ಸಾಗಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವದಲ್ಲಿ ನೇಕಾರರು ತಾವು ಉತ್ಪಾದಿಸಿದ ವಸ್ತುಗಳನ್ನು ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ನೇಕಾರರ ಹಾಗೂ ಕರಕುಶಲ  ಉತ್ಪನ್ನಗಳ ಮೇಲೆ GST ತೆರಿಗೆ ವಿಧಿಸಿರುವುದು ನೇಕಾರ ವೃತ್ತಿದಾರರಿಗೆ ಬಹಳ ತೊಂದರೆಯನ್ನುಂಟುಮಾಡಿದೆ ಎಂದರು.

ಕೇಂದ್ರ ಸರ್ಕಾರ ವಿಧಿಸಿರುವ ಜಿ.ಎಸ್.ಟಿ ತೆರಿಗೆ ಹಿಂಪಡೆದು ನೇಕಾರ ಬಂಧುಗಳಿಗೆ ಅನುಕೂಲ ಮಾಡಿಕೊಡಬೇಕೆಂದ ಅವರು, ಈ ಕುರಿತಂತೆ ವಿಧಾನಪರಿಷತ್ತಿನಲ್ಲಿ ವಿಚಾರ ಪ್ರಸ್ತಾಪಿಸಿ ಸದನದ ಬೆಂಬಲ ಪಡೆದು ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚಿಸಿ ಕೇಂದ್ರಕ್ಕೆ ಆಗ್ರಹಿಸುವಂತೆ ಮನವಿ ಮಾಡಲಾಗುವುದು ಎಂದರು. ಅಲ್ಲದೆ ತೆರಿಗೆ ಹಿಂಪಡೆಯುವಂತೆ ಒತ್ತಾಯಿಸಿ ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿ  ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ರಂಗಕರ್ಮಿ ಪ್ರಸನ್ನರವರನ್ನು ಭೇಟಿ ಮಾಡಿ ಚರ್ಚಿಸಿದ್ದು ಅವರ‌ ಹೋರಾಟ ‌ನ್ಯಾಯಯುತವಾಗಿದ್ದು ಬೆಂಬಲ ವ್ಯಕ್ತಪಡಿಸಿದ್ದೇನೆಂದರು.

ವರದಿ: ಗಿರೀಶ್ ಭಟ್, ತುರುವೇಕೆರೆ

 

Please follow and like us:
0
BP9 News Bureauತುಮಕೂರುತುರುವೇಕೆರೆ: ಕೇಂದ್ರ ಸರ್ಕಾರ  ಹಿಂದುಳಿದ ವರ್ಗಗಳಿಗೆ ಸೇರಿರುವ  ನೇಕಾರರ ಹಾಗೂ ಕರಕುಶಲ  ಉತ್ಪನ್ನಗಳ ಮೇಲೆ ವಿಧಿಸಿರುವ GST ತೆರಿಗೆಯನ್ನು ಹಿಂಪಡೆಯಬೇಕೆಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್ ಒತ್ತಾಯಿಸಿದ್ದಾರೆ. ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ ಮೇಲೆ‌ ಕೆಂಗಣ್ಣು ಬೀರಿದೆ. ನೇಕಾರ ಕುಟುಂಬಗಳು ನೇಯ್ಗೆಯನ್ನೇ ಜೀವನಾಧಾರವನ್ನಾಗಿ ಮಾಡಿಕೊಂಡು ಬದುಕು ಸಾಗಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಪ್ರಭಾವದಲ್ಲಿ ನೇಕಾರರು ತಾವು ಉತ್ಪಾದಿಸಿದ ವಸ್ತುಗಳನ್ನು...Kannada News Portal