ತುಮಕೂರು :  ಸಚಿವ ಜಮೀರ್ ಅಹಮದ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.  ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ, ಯಾವ ಖಾತೆ ಕೊಟ್ಟರು ಓಕೆ ಅಂದಿದ್ದೆ, ಖಾತೆಯಲ್ಲಿ ನನಗೆ ಅನುಭವ ಇಲ್ಲ. ಆದರೆ ಐದು ವರ್ಷದಲ್ಲಿ  ನನ್ನ ಖಾತೆಯಲ್ಲಿ ಇತಿಹಾಸ ಸೃಷ್ಟಿಸಿ, ಗಿನ್ನಿಸ್ ದಾಖಲೆ ಮಾಡುತ್ತೇನೆ ಎಂದರು.

ಸಮ್ಮಿಶ್ರ ಸರ್ಕಾರದಲ್ಲಿ ದೇವೇಗೌಡರ ಮಾತು ಕೇಳೋದ್ರಲ್ಲಿ ತಪ್ಪಿಲ್ಲ, ರಾಜ್ಯದ ಸಮಸ್ಯೆ ಇದ್ದಾಗ ದೇವೇಗೌಡರ ಮಾತೂ ಕೇಳಬೇಕು. ಅವರು ಮಾಜಿ ಪ್ರಧಾನಿ. ಖಾತೆ ಹಂಚಿಕೆಯಲ್ಲಿ ದೇವೇಗೌಡರಾಗಲಿ, ಕುಮಾರಸ್ವಾಮಿ ಅವರ ಪ್ರಭಾವ ಇಲ್ಲ ಎಂದು ಹೇಳಿದರು.

ಇಂಗ್ಲಿಷಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ‌ ವಿಚಾರ ಮಾತನಾಡಿದ ಜಮೀರ್​​, ಕನ್ನಡದ ಜನತೆಯಲ್ಲಿ ಕ್ಷಮೆ ಕೇಳುತ್ತೇನೆ. ಕನ್ನಡ ಕಲಿಯದೇ ಇದ್ದದ್ದು ನನ್ನ ದುರಾದೃಷ್ಟ. ತಂದೆ ತಾಯಿ ನನಗೆ ಕನ್ನಡ ಶಾಲೆಗೆ ಕಳುಹಿಸಿಲ್ಲ. ಹಾಗಾಗಿ ಕನ್ನಡ ‌ ಸರಿಯಾಗಿ ಬರದೆ ಇಂಗ್ಲಿಷ್​​​​ನಲ್ಲಿ ಪ್ರಮಾಣ ವಚನ ಪಡೆದಿದ್ದೇನೆ. ರಾಜ್ಯದ ಜನತೆಗಿಂತ‌ ದುಪ್ಪಟ್ಟು ನೋವು ನನಗಾಗಿದೆ. ನಾನು ಬೇಕಂತಲೇ ಇಂಗ್ಲಿಷ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರೆ  ನನಗೆ ಗಲ್ಲು ಶಿಕ್ಷೆ ಕೊಡಲಿ ಇಲ್ಲ ಬೇಕಂತಲೇ ಮಾಡಿದ್ರೆ ನನ್ನ ದೇಶ‌ದ್ರೋಹಿ ಎನ್ನಲಿ ಎಂದು ಹೇಳಿದರು.

Please follow and like us:
0
http://bp9news.com/wp-content/uploads/2018/06/zameer.jpghttp://bp9news.com/wp-content/uploads/2018/06/zameer-150x150.jpgBP9 Bureauತುಮಕೂರುಪ್ರಮುಖರಾಜಕೀಯತುಮಕೂರು :  ಸಚಿವ ಜಮೀರ್ ಅಹಮದ್ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಸಚಿವ ಸ್ಥಾನದ ಬಗ್ಗೆ ಮಾತನಾಡಿದ್ದಾರೆ.  ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಬಂದಿದ್ದು ಸಂತೋಷವಾಗಿದೆ, ಯಾವ ಖಾತೆ ಕೊಟ್ಟರು ಓಕೆ ಅಂದಿದ್ದೆ, ಖಾತೆಯಲ್ಲಿ ನನಗೆ ಅನುಭವ ಇಲ್ಲ. ಆದರೆ ಐದು ವರ್ಷದಲ್ಲಿ  ನನ್ನ ಖಾತೆಯಲ್ಲಿ ಇತಿಹಾಸ ಸೃಷ್ಟಿಸಿ, ಗಿನ್ನಿಸ್ ದಾಖಲೆ ಮಾಡುತ್ತೇನೆ ಎಂದರು. var domain = (window.location...Kannada News Portal