ತುರುವೇಕೆರೆ: ಹಿರಿಯ ಕಾಂಗ್ರೆಸ್ಸಿಗ, ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ  ಬೆಟ್ಟಸ್ವಾಮಿಗೌಡ ಶಾಸಕ, ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು.

ಜೆಡಿಎಸ್ ಸೇರ್ಪಡೆಯಾದ ಬೆಟ್ಟಸ್ವಾಮಿಗೌಡರನ್ನು ಹಾರ ಹಾಕಿ ಮೈಸೂರು ಪೇಟ ತೊಡಿಸಿ ಪಕ್ಷದ ಶಾಲು ಹೊದಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬೆಟ್ಟಸ್ವಾಮಿಗೌಡ ಮಾತನಾಡಿ, ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಬೆಲೆ ಇಲ್ಲವಾಗಿದ್ದು, ಹಿರಿಯರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಚೌದ್ರಿ ರಂಗಪ್ಪ ಅವರಿಗೆ ಪಕ್ಷ ಟಿಕೆಟ್ ನೀಡಿರುವುದರಿಂದ ಬೇಸತ್ತು ಕಾಂಗ್ರೆಸ್ ಗೆ ಗುಡ್ ಬೈ ಹೇಳುತ್ತಿರುವುದಾಗಿ ಹೇಳಿದರು.

ಜೆಡಿಎಸ್ ಅಧ್ಯಕ್ಷ ಅರೆಮಲ್ಲೇನಹಳ್ಳಿ ಸ್ವಾಮಿ, ಜಿಪಂ ಮಾಜಿ ಸದಸ್ಯರಾದ ಎ.ಬಿ.ಜಗದೀಶ್, ಲೀಲಾವತಿ ಗಿಡ್ಡಯ್ಯ, ಜೈಗಿರಿ ಸುಂದರ್,  ಸಿದ್ದಲಿಂಗಪ್ಪ, ಸೋಮಶೇಖರ್ ಮುಂತಾದವರಿದ್ದರು.

 

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/05/WhatsApp-Image-2018-05-08-at-1.39.12-PM-1024x839.jpeghttp://bp9news.com/wp-content/uploads/2018/05/WhatsApp-Image-2018-05-08-at-1.39.12-PM-150x150.jpegBP9 Bureauತುಮಕೂರುತುರುವೇಕೆರೆ: ಹಿರಿಯ ಕಾಂಗ್ರೆಸ್ಸಿಗ, ಸಿ.ಎಸ್.ಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ  ಬೆಟ್ಟಸ್ವಾಮಿಗೌಡ ಶಾಸಕ, ಜೆಡಿಎಸ್ ಅಭ್ಯರ್ಥಿ ಎಂ.ಟಿ.ಕೃಷ್ಣಪ್ಪ ಸಮ್ಮುಖದಲ್ಲಿ ಜೆಡಿಎಸ್ ಸೇರ್ಪಡೆಯಾದರು. ಜೆಡಿಎಸ್ ಸೇರ್ಪಡೆಯಾದ ಬೆಟ್ಟಸ್ವಾಮಿಗೌಡರನ್ನು ಹಾರ ಹಾಕಿ ಮೈಸೂರು ಪೇಟ ತೊಡಿಸಿ ಪಕ್ಷದ ಶಾಲು ಹೊದಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಬೆಟ್ಟಸ್ವಾಮಿಗೌಡ ಮಾತನಾಡಿ, ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯರಿಗೆ ಬೆಲೆ ಇಲ್ಲವಾಗಿದ್ದು, ಹಿರಿಯರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ದೊರೆಯುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಚೌದ್ರಿ ರಂಗಪ್ಪ...Kannada News Portal