ತುಮಕೂರು: ತುಮಕೂರಿನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ ಗೋವಿಂದರಾಜು ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿಗಾಗಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ತುಮಕೂರಿನ ಮತದಾರರನ್ನು ಬಸ್​​ಗಳಲ್ಲಿ ಕರೆದೊಯ್ದು ಆಣೆ ಪ್ರಮಾಣ ಮಾಡಿಸುವ ಚಾಳಿಯನ್ನು ಮುಂದುವರಿಸಿದ್ದಾರೆ.

ಆಣೆ ಪ್ರಮಾಣಕ್ಕಾಗಿ ಭಾನುವಾರದ ದಿನವನ್ನು ನಿಗದಿಪಡಿಸುವ ಗೋವಿಂದ್ ರಾಜು ಬೆಂಬಲಿಗರು ಮಳೆ ಕೋಟೆ ಭಾಗದ ಮತದಾರರಿಗೆ ಬಲೆ ಬೀಸಿದ್ದಾರೆ.

ಗೋವಿಂದರಾಜು ಬೆಂಬಲಿಗರು ಮೆಳೇಕೋಟೆ ಭಾಗದ ಮತದಾರರನ್ನು ಆಣೆ ಪ್ರಮಾಣ ಮಾಡಿಸಿಕೊಳ್ಳಲು ಕರೆದೊಯ್ಯಲು ಬಸ್ ಗಳನ್ನು ತೆಗೆದುಕೊಂಡು ಆ ಭಾಗಕ್ಕೆ ಹೋದ ತಕ್ಷಣ ಅಲ್ಲಿನ ಸ್ಥಳೀಯರು ಗೋವಿಂದರಾಜು ಬೆಂಬಲಿಗರ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ .

ಅಮಾಯಕ ಜನರಿಂದ ಆಣೆ ಪ್ರಮಾಣ ಮಾಡಿಸಿಕೊಳ್ಳಲು ಮುಂದಾದರೆ ಬಸ್ ಗಳಿಗೆ ಬೆಂಕಿ ಹಚ್ಚುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿ ಆಣೆ ಪ್ರಮಾಣಕ್ಕೆ ತೆರಳಲಿದ್ದ ಜನರನ್ನು ಬಸ್​ಗಳಿಂದ ಇಳಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಗೋವಿಂದರಾಜು ಬೆಂಬಲಿಗರು ಸ್ಥಳೀಯರ ವಿರೋಧಕ್ಕೆ ಹೆದರಿ ಸ್ತಳದಿಂದ ಕಾಲ್ಕಿತ್ತಿದ್ದಾರೆ.

ಕಳೆದ ಒಂದು ತಿಂಗಳಿಂದ ಗೋವಿಂದರಾಜುವಿನ ಓಟಿಗಾಗಿ ನೋಟು ಚುನಾವಣಾ ಗಿಮಿಕ್ ಬಗ್ಗೆ ಜಿಲ್ಲೆಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ವಿಚಾರ ಗೊತ್ತಿದ್ದರೂ ಸಹ ಅವರು ಈ ಬಗ್ಗೆ ಶಿಸ್ತು ಕ್ರಮಕ್ಕೆ ಮುಂದಾಗಿಲ್ಲ.

ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಆರೋಗ್ಯ ವೃದ್ದಿಗಾಗಿ ಪೂಜೆ ಮಾಡಿಸುವ ನೆಪದಲ್ಲಿ ಅಕ್ರಮ ಎಸಗುತ್ತಿರುವ ಗೋವಿಂದರಾಜು ವಿರುದ್ದ ಜೆಡಿಎಸ್ ವರಿಷ್ಠರು ಶಿಸ್ತು ಕ್ರಮಕ್ಕೆ ಮುಂದಾಗದಿರುವುದು ಹಲವು ಅನುಮಾನ ಹುಟ್ಟು ಹಾಕಿದೆ.

Please follow and like us:
0
BP9 News Bureauತುಮಕೂರುತುಮಕೂರು: ತುಮಕೂರಿನ ಜೆಡಿಎಸ್ ಟಿಕೆಟ್ ಆಕಾಂಕ್ಷಿ ಅಭ್ಯರ್ಥಿ ಗೋವಿಂದರಾಜು ಮತ್ತೆ ತಮ್ಮ ಹಳೆ ಚಾಳಿ ಮುಂದುವರಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಆರೋಗ್ಯ ವೃದ್ಧಿಗಾಗಿ ದೇವಸ್ಥಾನಗಳಲ್ಲಿ ಪೂಜೆ ಮಾಡಿಸುವ ನೆಪದಲ್ಲಿ ತುಮಕೂರಿನ ಮತದಾರರನ್ನು ಬಸ್​​ಗಳಲ್ಲಿ ಕರೆದೊಯ್ದು ಆಣೆ ಪ್ರಮಾಣ ಮಾಡಿಸುವ ಚಾಳಿಯನ್ನು ಮುಂದುವರಿಸಿದ್ದಾರೆ. ಆಣೆ ಪ್ರಮಾಣಕ್ಕಾಗಿ ಭಾನುವಾರದ ದಿನವನ್ನು ನಿಗದಿಪಡಿಸುವ ಗೋವಿಂದ್ ರಾಜು ಬೆಂಬಲಿಗರು ಮಳೆ ಕೋಟೆ ಭಾಗದ ಮತದಾರರಿಗೆ ಬಲೆ ಬೀಸಿದ್ದಾರೆ. ಗೋವಿಂದರಾಜು ಬೆಂಬಲಿಗರು ಮೆಳೇಕೋಟೆ ಭಾಗದ ಮತದಾರರನ್ನು...Kannada News Portal