ತುಮಕೂರು : ಉಡುಪಿ ಮಠದಲ್ಲಿ ಕಳೆದ ಬಾರಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿತ್ತು ಆದರೆ ಈ ಬಾರಿ ನಾನು ಪ್ರವಾಸದಲ್ಲಿ ಇರೋದ್ರಿಂದ ಅದು ಸಾಧ್ಯವಾಗಲಿಲ್ಲ ಎಂದು ತುಮಕೂರಿನಲ್ಲಿ ಪೇಜಾವರ ಶ್ರೀಗಳು ಹೇಳಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಠದಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಮುಸ್ಲಿಂ ಬಾಂಧವರಲ್ಲಿ ಆಸಕ್ತಿ ಇಲ್ಲ. ಕಳೆದ ಬಾರಿ ಇದ್ದಷ್ಟು ಆಸಕ್ತಿ ಅವರು ತೊರಿಸುತ್ತಿಲ್ಲ. ಕಳೆದ ಬಾರಿ ದೇವರ ಮೂರ್ತಿ ಇರುವ ಕೊಠಡಿಯಲ್ಲಿ ಇಫ್ತಾರ್ ಆಯೋಜನೆ ಮಾಡಿದ್ದಾರೆ ಎಂದ ಅಪನಂಬಿಕೆ ಅವರಲ್ಲಿ ಇದೆ.ಆದರೆ ಆ ಕೊಠಡಿಯಲ್ಲಿ ಮೂರ್ತಿ ಇರಲಿಲ್ಲ.ಪಕ್ಕದ ಕೊಠಡಿಯಲ್ಲಿ ಮೂರ್ತಿ ಇತ್ತು. ಆದರೆ ಮೂರ್ತಿ ಇರುವ ಕೊಠಡಿಯಲ್ಲಿ ಇಫ್ತಾರ್ ಆಯೋಜನೆ ಮಾಡಿದ್ದಾರೆ ಎಂದು ಮುಸ್ಲಿಂ ಬಾಂಧವರು ಇಫ್ತಾರ್ ಗೆ ಅಷ್ಟೊಂದು ಆಸಕ್ತಿ ತೋರುತ್ತಿಲ್ಲ ಎಂದು ಶ್ರೀಗಳು ಹೇಳಿದರು.

ಮತ್ತೆ ಮೋದಿ ಸರ್ಕಾರದ ಬಗ್ಗೆ ಮಾತನಾಡಿದ ಶ್ರೀಗಳು, ಮೋದಿ ಸರ್ಕಾರದ ವಿರುದ್ದ ನಾನು ಟೀಕೆ ಮಾಡಿರಲಿಲ್ಲ, ಸಲಹೆ ನೀಡಿದ್ದೆ ಅಷ್ಟೆ.ಮಾಧ್ಯಮಗಳು ಅದನ್ನು ಅಪಾರ್ಥ ಮಾಡಿಕೊಂಡಿವೆ. ಗಂಗಾ ಶುದ್ಧೀಕರಣ ಕೆಲಸ ಇನ್ನಷ್ಟು ಚುರುಕುಗೊಳಿಸುವಂತೆ ಸಲಹೆ ನೀಡಿದ್ದೆ. ವಿದೇಶದಿಂದ ಕಪ್ಪು ಹಣ ಶೀಘ್ರತರುವಂತೆ ಹೇಳಿದ್ದೆ. ಹಗರಣ ಮುಕ್ತ, ಆರ್ಥಿಕ ಸುಭದ್ರತೆಯ ಸರ್ಕಾರ ಮೋದಿ ನೀಡಿದ್ದಾರೆ ಎಂದರು.

ಎರಡು ಪಕ್ಷಕ್ಕಿಂತ ಸರ್ವ ಪಕ್ಷ ಆಡಳಿತ ಬಂದರೆ ಒಳ್ಳೇಯದು.ಸರ್ವ ಪಕ್ಷ ಬಂದರೆ ರೆಸಾರ್ಟ್ ರಾಜಕಾರಣ, ಕುದುರೆ ವ್ಯಾಪಾರ ನಿಲ್ಲುತ್ತದೆ.ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್, ಜೆಡಿಎಸ್ ಬೈದಾಡಿಕೊಂಡಿದ್ದರು, ಈಗ ಜೊತೆಯಾಗಿದ್ದಾರೆ.ಆದರೆ ಅಷ್ಟು ಬೈದಾಡಿಕೊಂಡವರಿಂದ ಸ್ಥಿರ ಸರ್ಕಾರ ಕೊಡಲು ಸಾಧ್ಯವಿಲ್ಲ ಎಂದು ಹೇಳಿದರು. ವಿರೋಧ ಪಕ್ಷ ಇಲ್ಲದೆ ಇದ್ದರು ಪರವಾಗಿಲ್ಲ, ಸರ್ವ ಪಕ್ಷದ ಸರ್ಕಾರ ಬರಲಿ.ಯಾವುದೇ ಪಕ್ಷಕ್ಕೆ ಬಹುಮತ ಬರದಿದ್ದಾಗ ಸರ್ವಪಕ್ಷ ಆಡಳಿತ ಬರಲಿ ಎಂದು ಆಶಯ ವ್ಯಕ್ತಪಡಿಸಿದರು.

 

 

Please follow and like us:
0
http://bp9news.com/wp-content/uploads/2018/06/Pejawar-Seer-750.jpghttp://bp9news.com/wp-content/uploads/2018/06/Pejawar-Seer-750-150x150.jpgBP9 Bureauತುಮಕೂರುಪ್ರಮುಖರಾಜಕೀಯತುಮಕೂರು : ಉಡುಪಿ ಮಠದಲ್ಲಿ ಕಳೆದ ಬಾರಿ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿತ್ತು ಆದರೆ ಈ ಬಾರಿ ನಾನು ಪ್ರವಾಸದಲ್ಲಿ ಇರೋದ್ರಿಂದ ಅದು ಸಾಧ್ಯವಾಗಲಿಲ್ಲ ಎಂದು ತುಮಕೂರಿನಲ್ಲಿ ಪೇಜಾವರ ಶ್ರೀಗಳು ಹೇಳಿದ್ದಾರೆ. ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಠದಲ್ಲಿ ಇಫ್ತಾರ್ ಕೂಟ ಆಯೋಜನೆಗೆ ಮುಸ್ಲಿಂ ಬಾಂಧವರಲ್ಲಿ ಆಸಕ್ತಿ ಇಲ್ಲ. ಕಳೆದ ಬಾರಿ ಇದ್ದಷ್ಟು ಆಸಕ್ತಿ ಅವರು ತೊರಿಸುತ್ತಿಲ್ಲ. ಕಳೆದ ಬಾರಿ ದೇವರ ಮೂರ್ತಿ ಇರುವ ಕೊಠಡಿಯಲ್ಲಿ ಇಫ್ತಾರ್ ಆಯೋಜನೆ ಮಾಡಿದ್ದಾರೆ ಎಂದ...Kannada News Portal