ತುಮಕೂರು: ನಾನು ಕೂಡ ಕೆ ಪಿ ಸಿ ಸಿ ಅಧ್ಯಕ್ಷ ಆಕಾಂಕ್ಷೀ  ಎಂದು ತುಮಕೂರಿನಲ್ಲಿ ಮಾಜಿ ಸಚಿವ ಟಿ ಬಿ ಜಯಚಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಅತಿ ಚಿಕ್ಕ ವಯಸ್ಸಿನಲ್ಲಿ ನಾನು ಕಾಂಗ್ರೆಸ್​ ಪಕ್ಷ ಸೇರಿದೆ‌.ಕಿರಿಯ ವಯಸ್ಸಿನಲ್ಲಿ ವಿಧಾನ ಸಭೆ ಪ್ರವೇಶಿಸಿದೆ. ಅಂದಿನಿಂದ ಇಂದಿನವರೆಗೂ ನಾನು ಕಾಂಗ್ರೆಸ್ ಪಕ್ಷಕ್ಕೋಸ್ಕರವೇ ದುಡಿದಿದ್ದೇನೆ.ಪಕ್ಷ ಸಂಘಟನೆ ಮಾಡಿದ್ದೇನೆ, ಹಲವು ಬಾರಿ ಸಚಿವನಾಗಿದ್ದೇನೆ ಎಂದರು.

ಸಿದ್ದರಾಮಯ್ಯ ಸರ್ಕಾರದ 5 ವರ್ಷ ಅವಧಿಯಲ್ಲಿ, ಹಲವು ಸಂಕಷ್ಟ ಎದುರಿಸುವ ಸಂದರ್ಭದಲ್ಲಿ ಸರ್ಕಾರದ ಉಳಿವಿಗೆ ಟೊಂಕ ಕಟ್ಟಿ‌ನಿಂತಿದ್ದೇನೆ. ಆ ಹಿನ್ನೆಲೆಯಲ್ಲಿ ನಾನು ಕೂಡ ಕೆ ಪಿ ಸಿ ಸಿ ಅಧ್ಯಕ್ಷ ಆಕಾಂಕ್ಷಿ. ಪಕ್ಷ ನನಗೆ ಜವಾಬ್ದಾರಿ‌‌ ನೀಡಿದ್ರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹಾಲಿ ಕೆಪಿಸಿ‌ಸಿ‌ ಅಧ್ಯಕ್ಷರಾದ ಡಾ ಜಿ‌ ಪರಮೇಶ್ವರ್ ಮತ್ತು ರಾಜ್ಯ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಸಿದ್ದರಾಮಯ್ಯ ನವರು ಸೇರಿದಂತೆ ಎಲ್ಲರ ಬಳಿ ಚರ್ಚಿಸಿದ್ದೆನೆ. ಸೂಕ್ತ ಸಂದರ್ಭದಲ್ಲಿ ‌ಪಕ್ಷದ ವರಿಷ್ಠರು ಸೋನಿಯಾಗಾಂಧಿ ರಾಹುಲ್‌ ಗಾಂಧಿ ಯವರನ್ನ‌ ಭೇಟಿ‌ ಮಾಡುತ್ತೇನೆ ಎಂದರು.

ನೂತನ ಸರ್ಕಾರ ಇಲ್ಲಿಯ ತನಕ ಸರಿಯಾಗಿ‌ ಟೇಕಾಫ್ ಆಗಿರಲಿಲ್ಲ.ಈಗ ಅದು ಸರಿಹೋಗುತ್ತಿದೆ. ಮನಸ್ತಾಪಗಳು ಭಿನ್ನಾಭಿಪ್ರಾಯಗಳು ಶಮನವಾಗುತ್ತಿವೆ. ಮುಖ್ಯಮಂತ್ರಿ ‌ಕುಮಾರಸ್ವಾಮಿಯವರಿಗೆ ನಮ್ಮ ಪಕ್ಷ ಬೇಷರತ್ ಬೆಂಬಲ‌ ನೀಡಿದೆ.ಆದರೆ ಕುಮಾರಸ್ವಾಮಿಯವರು ಯಾವ ಉದ್ದೇಶ ವಿಟ್ಟುಕೊಂಡು ಒಂದು ವರ್ಷ ಅಂತಾ ಹೇಳಿದ್ದಾರೋ ಗೊತ್ತಿಲ್ಲ ಎಂದರು.

ನಾನು ಜಿಲ್ಲೆ ಮತ್ತು ರಾಜ್ಯದಲ್ಲಿ ಸಕ್ರೀಯವಾಗುತ್ತೇನೆ. ಮಗ ಸಂತೋಷ್ ಜಯಚಂದ್ರ ಏಪ್ರಿಲ್ 2019 ತಿಂಗಳಲ್ಲಿ ವಿಧಾನ ಸಭೆ ಚುನಾವಣೆ ನಡೆಯುತ್ತದೆ ಎಂಬ ಮೇಸೆಜ್ ಹಾಕಿದ್ದ ವಿಚಾರವಾಗಿ ಮಾತನಾಡಿದ ಜಯಚಂದ್ರ, ಜೆ ಡಿ ಎಸ್ ಪಕ್ಷದ ಕಾರ್ಯಕರ್ತರ ಮೂಲಗಳಿಂದ ಬಂದ ವಿಷಯ ಅದು ನಾನು ಪ್ರತಿಕ್ರಿಯೆ ನೀಡಲಾರೆ.ಇದಕ್ಕೆ ಕಾಲವೇ ಉತ್ತರ ನೀಡಲಿದೆ ಎಂದರು.

 

 

 

Please follow and like us:
0
http://bp9news.com/wp-content/uploads/2018/06/news-13-1.jpghttp://bp9news.com/wp-content/uploads/2018/06/news-13-1-150x150.jpgBP9 Bureauತುಮಕೂರುಪ್ರಮುಖರಾಜಕೀಯತುಮಕೂರು: ನಾನು ಕೂಡ ಕೆ ಪಿ ಸಿ ಸಿ ಅಧ್ಯಕ್ಷ ಆಕಾಂಕ್ಷೀ  ಎಂದು ತುಮಕೂರಿನಲ್ಲಿ ಮಾಜಿ ಸಚಿವ ಟಿ ಬಿ ಜಯಚಂದ್ರ ಹೇಳಿದ್ದಾರೆ. ತುಮಕೂರಿನಲ್ಲಿ ಮಾತನಾಡಿದ ಅವರು, ನಾನು ಅತಿ ಚಿಕ್ಕ ವಯಸ್ಸಿನಲ್ಲಿ ನಾನು ಕಾಂಗ್ರೆಸ್​ ಪಕ್ಷ ಸೇರಿದೆ‌.ಕಿರಿಯ ವಯಸ್ಸಿನಲ್ಲಿ ವಿಧಾನ ಸಭೆ ಪ್ರವೇಶಿಸಿದೆ. ಅಂದಿನಿಂದ ಇಂದಿನವರೆಗೂ ನಾನು ಕಾಂಗ್ರೆಸ್ ಪಕ್ಷಕ್ಕೋಸ್ಕರವೇ ದುಡಿದಿದ್ದೇನೆ.ಪಕ್ಷ ಸಂಘಟನೆ ಮಾಡಿದ್ದೇನೆ, ಹಲವು ಬಾರಿ ಸಚಿವನಾಗಿದ್ದೇನೆ ಎಂದರು. ಸಿದ್ದರಾಮಯ್ಯ ಸರ್ಕಾರದ 5 ವರ್ಷ ಅವಧಿಯಲ್ಲಿ, ಹಲವು...Kannada News Portal