ತುಮಕೂರು : ಶಾಸಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಮಾತನ್ನ ಸ್ವತಃ ತುಮಕೂರು ನಗರ ನೂತನ ಶಾಸಕರಾದ ಜ್ಯೋತಿಗಣೇಶ್ ಹೇಳಿದ್ದಾರೆ. ಮಾಧ್ಯಮದ ಮುಂದೆ ಅಧಿಕಾರಿಗಳ ಅಸಹಕಾರ ಬಾಯಿಬಿಟ್ಟ ಶಾಸಕ ಜ್ಯೋತಿಗಣೇಶ್,ಕುಡಿಯುವ ನೀರಿನ ಸಮಸ್ಯೆಗೆ ಎಚ್ಚೆತ್ತುಕೊಳ್ಳದ ಮಹಾನಗರದಲ್ಲಿ ಪಾಲಿಕೆ ಆಯುಕ್ತರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ನಗರದಲ್ಲಿ ಕುಡಿಯುವ ನೀರಿಗಾಗಿ ನೂತನ ಕೊಳವೆ ಬಾವಿ ಕೊರೆಯಲು ಎರಡು ಕೋಟಿ ಹಣ ಬಂದಿದೆ.ಇದರಲ್ಲಿ ದುರಸ್ತಿ ಕೂಡ ಸೇರಿದೆ.

ಆದರೆ ಅಧಿಕಾರಿಗಳು ಸರಿ ಇರುವ ಮೋಟಾರ್​​ಗಳನ್ನೇ ದುರಸ್ತಿಯ ನೆಪ ಒಡ್ಡಿ ಬದಲಾಯಿಸುತ್ತಿರುವ ದೂರುಗಳಿವೆ.ಅಧಿಕಾರಿಗಳ ಗಮನಕ್ಕೆ ತಂದರೂ ನೂತನ ಕೊಳವೆ ಬಾವಿ ಕೊರೆಸಲು ಪಾಲಿಕೆ ನೀಲನಕ್ಷೆ ತಯಾರಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಲ್ಲದ ಕಾರಣ ಅಧಿಕಾರಿಗಳು ಜನಪ್ರತಿನಿಧಿಗಳ ಮಾತನ್ನೂ ಕೇಳುತ್ತಿಲ್ಲ.ಆಯುಕ್ತರು ಸ್ವಯಂ ಪ್ರೇರಣೆಯಿಂದ ಸಮಸ್ಯೆ ನಿವಾರಣೆಗೆ ಮುಂದಾಗ ಬೇಕು ಇಲ್ಲವಾದರೆ ಜನ ಹಾಗೂ ಜನಪ್ರತಿನಿಧಿಗಳ ಕೋಪಕ್ಕೆ ಗುರಿಯಾಗಬೇಕಾಗುತ್ತೆ ಎಂಬ  ಎಚ್ಚರಿಕೆ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/WhatsApp-Image-2018-06-12-at-4.52.17-PM-1024x685.jpeghttp://bp9news.com/wp-content/uploads/2018/06/WhatsApp-Image-2018-06-12-at-4.52.17-PM-150x150.jpegBP9 Bureauತುಮಕೂರುಪ್ರಮುಖರಾಜಕೀಯತುಮಕೂರು : ಶಾಸಕರಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎನ್ನುವ ಮಾತನ್ನ ಸ್ವತಃ ತುಮಕೂರು ನಗರ ನೂತನ ಶಾಸಕರಾದ ಜ್ಯೋತಿಗಣೇಶ್ ಹೇಳಿದ್ದಾರೆ. ಮಾಧ್ಯಮದ ಮುಂದೆ ಅಧಿಕಾರಿಗಳ ಅಸಹಕಾರ ಬಾಯಿಬಿಟ್ಟ ಶಾಸಕ ಜ್ಯೋತಿಗಣೇಶ್,ಕುಡಿಯುವ ನೀರಿನ ಸಮಸ್ಯೆಗೆ ಎಚ್ಚೆತ್ತುಕೊಳ್ಳದ ಮಹಾನಗರದಲ್ಲಿ ಪಾಲಿಕೆ ಆಯುಕ್ತರ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.ನಗರದಲ್ಲಿ ಕುಡಿಯುವ ನೀರಿಗಾಗಿ ನೂತನ ಕೊಳವೆ ಬಾವಿ ಕೊರೆಯಲು ಎರಡು ಕೋಟಿ ಹಣ ಬಂದಿದೆ.ಇದರಲ್ಲಿ ದುರಸ್ತಿ ಕೂಡ ಸೇರಿದೆ. var domain = (window.location != window.parent.location)? document.referrer...Kannada News Portal