ತುರುವೇಕೆರೆ: ದೇಶದಲ್ಲಿ ಜ್ಞಾನದ ಕೊರತೆಯಿಲ್ಲ ಆದರೆ ನೈತಿಕತೆಯ ಕೊರತೆ ಕಾಡುತ್ತಿದೆ ಎಂದು ಕಿರುತೆರೆ, ರಂಗಭೂಮಿ ಕಲಾವಿದ ಎಸ್.ಎನ್. ಸೇತುರಾಮ್ ವಿಷಾದಸಿದರು.ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮದ ಶತಕ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ನೈತಿಕತೆಯ ಮಟ್ಟದಲ್ಲಿ ನಾವು ಬಹಳ ಹಿಂದಕ್ಕೆ ಹೋಗಿದ್ದೇವೆಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಗುಣಮಟ್ಟದ ಕೆಲಸಕ್ಕೆ, ಬುದ್ದಿವಂತ ಇಂಜಿನಿಯರ್ ಗೆ ಮಾನ್ಯತೆ ನೀಡಲಾಗುತ್ತಿತ್ತು. ಆದರೆ ಇಂದಿನ ಸರ್ಕಾರಗಳು ಮೇಸ್ತ್ರಿಗೆ ಕೆಲಸ ಕೊಡುತ್ತಿವೆ,  ಇಂಜಿನಿಯರ್ ಗೆ ಕೆಲಸ ಕೊಡ್ತಿಲ್ಲ. ಇದರಿಂದ ಕಿತ್ತು ಹೋಗದ ರಸ್ತೆ, ಸೋರದ ತಾರಸಿ ನಿರ್ಮಾಣ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಲೆಕ್ಕ ಬರೆಯೋದಕ್ಕೆ ಸೀಮಿತವಾಗಿದ್ದರೆ, ಕಾಂಪೌಂಡರ್ ಔಷಧಿ ಕೊಡುತ್ತಾರೆ. ಇದು ನಮ್ಮ ವ್ಯವಸ್ಥೆ ಎಂದು ವ್ಯಂಗ್ಯವಾಡಿದರು.

ಸರ್ಕಾರಿ ಅಧಿಕಾರಿಗಳಿಗೆ ಎಷ್ಟು ನಿಬಂಧನೆಗಳಿರುತ್ತದೆ ಎಂಬುದನ್ನು ನಾನು ಸ್ವತಃ ಅನುಭವಿಸಿದ್ದೇನೆ ಎಂದ ಅವರು, ಅಂದಿನ ಗ್ರಂಥಾಲಯಕ್ಕೂ ಇಂದಿನ ಗ್ರಂಥಾಲಯಕ್ಕೂ ಬಹಳ ವ್ಯತ್ಯಾಸವಿದೆ. ರಾಜಕೀಯ ಪುಡಾರಿಗಳ ಹಂತದಲ್ಲಿ ಗ್ರಂಥಾಲಯಕ್ಕೆ ಪುಸ್ತಕ ಕೊಳ್ಳುವುದು ನಿರ್ಧಾರವಾಗುತ್ತದೆ. ಇದರಿಂದ ಜನರಿಗೆ ಉಪಯುಕ್ತವಾಗುವ ಪುಸ್ತಕಗಳನ್ನು ಕೊಳ್ಳುವ ಅಧಿಕಾರ ಅಧಿಕಾರಿಗಳಿಗಿಲ್ಲದಾಗಿ ಇಂದು ಸರ್ಕಾರಿ ಸ್ವಾಮ್ಯದ ಗ್ರಂಥಾಲಯದಲ್ಲಿ‌ ಸರ್ಕಾರದ ಅನುದಾನದ ಸಹಸ್ರಾರು ಪುಸ್ತಕಗಳಿದ್ದರೂ ಗ್ರಂಥಾಲಯಕ್ಕೆ ಹೋಗುವವರಿಲ್ಲದಂತಾಗಿದೆ. ಈ ಕಾರಣದಿಂದ ಸಾಹಿತ್ಯಾಸಕ್ತರು ಪರ್ಯಾಯ ಗ್ರಂಥಾಲಯದ ಮೊರೆ ಹೋಗುವಂತಾಗಿದೆ ಎಂದರು.

ಇಂದು ಸಮಾಜದಲ್ಲಿ ಸಂಬಂಧಗಳು ಹಾಳಾಗುತ್ತಿವೆ. ದುಡಿಯುವುದೇ ಬದುಕಾಗಿದೆ. ಮಕ್ಕಳು ಪೋಷಕರನ್ನು ಶತ್ರುವಿನ ರೀತಿ ಕಾಣುವಂತಾಗಿದೆ. ಕುಟುಂಬದಲ್ಲಿ ಸಾಮರಸ್ಯ ಇಲ್ಲವಾಗಿದೆ. ರಕ್ತ ಸಂಬಂಧಗಳಲ್ಲಿ ದ್ವೇಷ, ಕ್ಲೀಶೆಗಳು ಹೆಚ್ಚಾಗಿದೆ. ಆದರೆ ಶತಮಾನದಷ್ಟು ಮುಂದೆ ಇದ್ದೇವೆಂಬ ಭ್ರಮೆಯಲ್ಲಿ ಜೀವನ ಸಾವಿಸುತ್ತಿದ್ದೇವೆ. ಬೇರೊಬ್ಬರಿಗೆ ತೊಂದರೆ ಕೊಡುವುದರಲ್ಲಿ ನಾವು ಶತಮಾನದಷ್ಟು ಹಿಂದೆಯೇ ಇದ್ದೇವೆ ಎಂಬುದನ್ನು ಅರಿಯಬೇಕಿದೆ ಎಂದರು.

ಗ್ರಾಮೀಣ ಪ್ರದೇಶದಲ್ಲಿ ಸೌಕರ್ಯದ ಕೊರತೆ, ಉದ್ಯೋಗ ಇನ್ನಿತರ ಸಮಸ್ಯೆಗಳಿಂದ ಯುವ ಸಮೂಹ ಗ್ರಾಮ ಬಿಟ್ಟು ನಗರ ಪ್ರದೇಶಕ್ಕೆ ವಲಸೆ ಹೋಗುತ್ತಿದ್ದು, ಗ್ರಾಮಗಳು ವೃದ್ಧಾಶ್ರಮಗಳಾಗಿ ಬದಲಾಗುತ್ತಿರುವುದು ನೋವಿನ ಸಂಗತಿ ಎಂದರು.

ಭೌತಶಾಸ್ತ್ರ ಹಾಗೂ ಗಣಿತ ವಿಷಯದಲ್ಲಿ ತಲೆಗೆ ಕೆಲಸವಿರುತ್ತದೆ. ಆದರೆ ಹೃದಯ ಕೆಲಸವಿಲ್ಲದೆ ಸತ್ತುಹೋಗುತ್ತದೆ. ಹೃದಯವನ್ನು ಜೀವಂತವಾಗಿಡಲು ಸಾಹಿತ್ಯ ಕ್ಷೇತ್ರಕ್ಕೆ ಬಂದೆ ಎಂದ ಅವರು, ಸಾಹಿತ್ಯವೂ ಒಂದು ಹಸಿವು. ಇಂದಿನ ವಾಹಿನಿಗಳು ರಸ್ತೆ ಗುತ್ತಿಗೆದಾರರಾಗಿದ್ದಾರೆ. ವಾಹಿನಿಗಳಲ್ಲಿ ಬರುವ ಧಾರಾವಾಹಿಯಲ್ಲಿ ದ್ವೇಷ, ಅಸೂಯೆ, ಕ್ರೌರ್ಯ, ಸೇಡು, ವಿಷ ಹಾಕುವುದು ಮುಂತಾದವುಗಳನ್ನೇ ತೋರಿಸಲಾಗುತ್ತಿದೆ. ಇದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಕುಟುಂಬದಲ್ಲಿ ಬಾಂದವ್ಯ, ಸಾಮರಸ್ಯ ಮೂಡಿಸುವ ಸಹಬಾಳ್ವೆಯ ಸಂದೇಶವನ್ನು ನೀಡುವಂತಹ ಧಾರವಾಹಿಗಳ ಅಗತ್ಯತೆಯಿದೆ ಎಂದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾಂಶುಪಾಲ ಗಂಗಾಧರ ದೇವರಮನೆ ಮಾತನಾಡಿ, ರವಿ ಬೆಳೆಗೆರೆ ಕನ್ನಡಾನುವಾದದ ಹಿಮಾಲಯನ್ ಬ್ಲಂಡರ್ ಪುಸ್ತಕದಿಂದ ಪ್ರಾರಂಭವಾದ ತಿಂಗಳಿಗೊಂದು ಪುಸ್ತಕ ಪರಿಚಯ ಕಾರ್ಯಕ್ರಮ ಕೆ.ಎಸ್. ನರಸಿಂಹ ಸ್ವಾಮಿ ಅವರ ಮೈಸೂರು ಮಲ್ಲಿಗೆಯ ಮೂಲಕ ನೂರನೇ ಪುಸ್ತಕವಾಗಿ ಪರಿಚಯವಾಗಿದೆ. ಪುಸ್ತಕ ಪರಿಚಯ ಕಾರ್ಯಕ್ರಮವೂ ಸಹ  ಹಿಮಾಲಯದಂತೆ ಬೆಳೆದು ಸಾಹಿತ್ಯವೆಂಬ ಮಲ್ಲಿಗೆಯ ಕಂಪನ್ನು ಎಲ್ಲೆಡೆ ಹರಿಸುವಲ್ಲಿ ಯಶಸ್ವಿಯಾಗಿದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ರುದ್ರಯ್ಯ ಹಿರೇಮಠ, ಜ್ಞಾನವನ್ನು ಹೆಚ್ಚಿಸಿಕೊಳ್ಳಲು ನಿರಂತರ ಅಧ್ಯಯನ ಅತ್ಯಗತ್ಯ. ಪುಸ್ತಕಗಳನ್ನು ಕೊಂಡು ಕೊಳ್ಳಬಹುದು ಆದರೆ ಜ್ಞಾನವನ್ನು ಕೊಳ್ಳಲಾಗುವುದಿಲ್ಲ.  ಹಣದಿಂದ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕಿದೆ ಎಂದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸನ್ಮಾನಿಸಲಾಯಿತು. ಪಿಯುಸಿ, ಎಸ್.ಎಸ್.ಎಲ್.ಸಿ. ಯಲ್ಲಿ ತಾಲೂಕಿಗೆ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪತ್ರಿಕೆ ಹಂಚುವ ವಿದ್ಯಾರ್ಥಿಗೆ ಶೈಕ್ಷಣಿಕ ಪರಿಕರ ನೀಡಲಾಯಿತು. ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಜಿ.ಸಿದ್ದರಾಮಯ್ಯ, ರೋಟರಿ ನಿಕಟಪೂರ್ವ ಅಧ್ಯಕ್ಷ ಎಸ್.ಕೆ.ಥಾಮಸ್, ಲಯನ್ಸ್ ಕ್ಲಬ್ ಅಧ್ಯಕ್ಷ ಟಿ.ವಿ. ಮಹೇಶ್, ಕಸಾಪ ಅಧ್ಯಕ್ಷ ರಾಜು, ಗ್ರಂಥಾಲಯದ ಸ್ಥಾಪಕ ರಾಮಚಂದ್ರ, ಲಲಿತಾ ರಾಮಚಂದ್ರ, ಶ್ರೀನಿವಾಸ್,  ಉಷಾಶ್ರೀನಿವಾಸ್, ಯೋಗಾನಂದ್ ,ಕೃಷ್ಣ ಚೈತನ್ಯ,  ಸುಷ್ಮಾಚೈತನ್ಯ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/06/WhatsApp-Image-2018-06-10-at-4.44.27-PM-1024x725.jpeghttp://bp9news.com/wp-content/uploads/2018/06/WhatsApp-Image-2018-06-10-at-4.44.27-PM-150x150.jpegBP9 Bureauತುಮಕೂರುತುರುವೇಕೆರೆ: ದೇಶದಲ್ಲಿ ಜ್ಞಾನದ ಕೊರತೆಯಿಲ್ಲ ಆದರೆ ನೈತಿಕತೆಯ ಕೊರತೆ ಕಾಡುತ್ತಿದೆ ಎಂದು ಕಿರುತೆರೆ, ರಂಗಭೂಮಿ ಕಲಾವಿದ ಎಸ್.ಎನ್. ಸೇತುರಾಮ್ ವಿಷಾದಸಿದರು.ಪಟ್ಟಣದ ಶ್ರೀ ಚಿದಂಬರೇಶ್ವರ ಉಚಿತ ಗ್ರಂಥಾಲಯದ ತಿಂಗಳ ಪುಸ್ತಕ ಪರಿಚಯ ಕಾರ್ಯಕ್ರಮದ ಶತಕ ಸಂಭ್ರಮಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದ 70 ವರ್ಷಗಳಲ್ಲಿ ನೈತಿಕತೆಯ ಮಟ್ಟದಲ್ಲಿ ನಾವು ಬಹಳ ಹಿಂದಕ್ಕೆ ಹೋಗಿದ್ದೇವೆಂದರು. ಸ್ವಾತಂತ್ರ್ಯ ಪೂರ್ವದಲ್ಲಿ ಗುಣಮಟ್ಟದ ಕೆಲಸಕ್ಕೆ, ಬುದ್ದಿವಂತ ಇಂಜಿನಿಯರ್ ಗೆ ಮಾನ್ಯತೆ ನೀಡಲಾಗುತ್ತಿತ್ತು. ಆದರೆ ಇಂದಿನ ಸರ್ಕಾರಗಳು ಮೇಸ್ತ್ರಿಗೆ...Kannada News Portal