ತುಮಕೂರು :  ಶಾಸಕರಾಗಿ ಅಧಿಕಾರ ಸ್ವೀಕರಿಸಿ, ಕ್ಷೇತ್ರಕ್ಕೆ  ಬಂದ ಮೊದಲ ದಿನವೇ ತುಮಕೂರು ಗ್ರಾಮಾಂತರ ಕ್ಷೇತ್ರದ ನೂತನ ಶಾಸಕ ಡಿ ಸಿ ಗೌರೀಶಂಕರ್  ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳಿಗೆ ನೀತಿ ಪಾಠ ಹೇಳಿದ್ದಾರೆ.

ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ನಿಂದ ಆಯ್ಕೆ ಯಾಗಿರುವ ಶಾಸಕ ಡಿ.ಸಿ.ಗೌರಿಂಶಂಕರ್ ಇದೇ ಮೊದಲ ಬಾರಿಗೆ ಕ್ಷೇತ್ರದ ಕಡೆ ಮುಖ ಮಾಡಿದರು. ಕ್ಷೇತ್ರದ ಊರುಕೆರೆ ಗ್ರಾಮ ಪಂಚಾಯ್ತಿಯಿಂದ ತಮ್ಮ  ಕ್ಷೇತ್ರ ಪ್ರವಾಸ ಆರಂಭಿಸಿರುವ  ಶಾಸಕರನ್ನ ಕಾರ್ಯರ್ಕತರು ತೆರದ ವಾಹನದಲ್ಲಿ ಮೆರವಣಿಗೆಯಲ್ಲಿ ಕರೆತಂದರು.ಆದರೆ ಶಾಸಕ ಗೌರಿಶಂಕರ್ ಕೆಲವೇ ಕ್ಷಣದಲ್ಲಿ ಮೆರವಣಿಗೆಯ ತೆರದ ವಾಹನದಿಂದ ಇಳಿದು ಜನರ ಬಳಿ ನಡೆದುಕೊಂಡೇ ಹೋದರು. ಸಾಗುವ ಮಾರ್ಗ ಮಧ್ಯೆ  ಗ್ರಾಮಪಂಚಾಯ್ತಿ ಕಚೇರಿಗೆ ದಿಢೀರ್ ಭೇಟಿ ಕೊಟ್ಟರು. ಗ್ರಾಮಪಂಚಾಯ್ತಿ ಕಟ್ಟಡ ಬಾಡಿಗೆಯದ್ದಾಗಿದೆ. ಇದಕ್ಕೆ ಸರ್ಕಾರದಿಂದ ಬಿಡುಗಡೆಯಾದ 20 ಲಕ್ಷ ರೂ.ಗಳನ್ನು  ಕೆಲಸವೇ ಮಾಡದ ಗುತ್ತಿಗೆದಾರನಿಗೆ ಹಣ ನೀಡಲಾಗಿದೆ ಎಂದು ಸ್ಥಳೀಯರು ದೂರನ್ನು ನೀಡಿದ್ದಾರೆ.


ಈ ವಿಷಯ ತಿಳಿಯುತ್ತಿದ್ದಂತೆ  ಕೆರಳಿದ ಗೌರಿಶಂಕರ್,  ಪಿಡಿಓ ಮತ್ತು ಗ್ರಾಮ ಪಂಚಾಯ್ತಿ ಸದಸ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಸಭೆ ನಡೆಸಿ ಕಾಮಗಾರಿ ನಡೆಸದೇ ಹಣ ಪಡೆದಿರುವ ಗುತ್ತಿಗೆದಾರನ ವಿರುದ್ಧ  ದೂರು ದಾಖಲಿಸುವಂತೆ ಆದೇಶಿಸಿದ್ದಾರೆ. ಚುನಾವಣೆಗೂ ಮುನ್ನ ಕೊಟ್ಟ ಮಾತಿನಂತೆ, ಕ್ಷೇತ್ರದ ಜನರನ್ನ ಕಾರಿನಲ್ಲಿ ಬಂದು ಭೇಟಿ ಮಾಡದೆ ದ್ವಿಚಕ್ರವಾಹನದ ಮೂಲಕ ಮನೆ ಮನೆಗೆ ತೆರಳಿ ಜನ ಸಮಸ್ಯೆ ಆಲಿಸಿದರು.

ನಂತರ ಗ್ರಾಮದ ವಿವಿಧ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿದ ಗೌರಿಶಂಕರ್, ತಾವು ಗೆದ್ದರೆ 101 ತೆಂಗಿನ ಕಾಯಿ ಒಡೆಯುದಾಗಿ ಹರಕೆ ಹೊತ್ತಿದ್ದ ಕಾರ್ಯಕರ್ತರ ಜೊತೆಗೂಡಿ ತೆಂಗಿನ ಕಾಯಿ ಒಡೆದು ಹರಕೆ ತೀರಿಸಿದರು. ಇನ್ನೂ ನನಗೆ ಸಚಿವ ಸ್ಥಾನ ಕೈ ತಪ್ಪಿದ್ದಕ್ಕೆ, ನಮ್ಮ ತಂದೆ ಚೆನ್ನಿಗಪ್ಪ ಅವರು ಬೇಸರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಮನಸಿನಲ್ಲಿ ಕೆಟ್ಟ ಭಾವನೆ ಇಲ್ಲಾ. ನೋವಿನಿಂದ ಹೇಳಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಿರೋವರೆಗೂ ನಾವೂ ಕೂಡ ನಮ್ಮ ಕ್ಷೇತ್ರಗಳಲ್ಲಿ ನಾವೇ ಸಿಎಂ ಅಂತಾ ತಮಗೆ ಸಚಿವ ಸ್ಥಾನ ಸಿಗದ ಗೊಂದಲಕ್ಕೆ ತೆರೆ ಎಳೆದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಹಿರೇಹಳ್ಳಿ ಮಹೇಶ್, ಸುವರ್ಣಗಿರಿ ಕುಮಾರ್, ಹಾಲನೂರ್ ಅನಂತ್, ಎ ಪಿ ಎಂ ಸಿ ಉಮೇಶ್, ಅನಿಲ್ ನಾಯಕ್ ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

Please follow and like us:
0
http://bp9news.com/wp-content/uploads/2018/06/Karnatakada-Miditha-31.jpeghttp://bp9news.com/wp-content/uploads/2018/06/Karnatakada-Miditha-31-150x150.jpegBP9 Bureauತುಮಕೂರುರಾಜಕೀಯತುಮಕೂರು :  ಶಾಸಕರಾಗಿ ಅಧಿಕಾರ ಸ್ವೀಕರಿಸಿ, ಕ್ಷೇತ್ರಕ್ಕೆ  ಬಂದ ಮೊದಲ ದಿನವೇ ತುಮಕೂರು ಗ್ರಾಮಾಂತರ ಕ್ಷೇತ್ರದ ನೂತನ ಶಾಸಕ ಡಿ ಸಿ ಗೌರೀಶಂಕರ್  ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಅಧಿಕಾರಿಗಳಿಗೆ ನೀತಿ ಪಾಠ ಹೇಳಿದ್ದಾರೆ. ತುಮಕೂರು ಗ್ರಾಮಾಂತರ ಕ್ಷೇತ್ರದಿಂದ ಜೆಡಿಎಸ್ ನಿಂದ ಆಯ್ಕೆ ಯಾಗಿರುವ ಶಾಸಕ ಡಿ.ಸಿ.ಗೌರಿಂಶಂಕರ್ ಇದೇ ಮೊದಲ ಬಾರಿಗೆ ಕ್ಷೇತ್ರದ ಕಡೆ ಮುಖ ಮಾಡಿದರು. ಕ್ಷೇತ್ರದ ಊರುಕೆರೆ ಗ್ರಾಮ ಪಂಚಾಯ್ತಿಯಿಂದ ತಮ್ಮ  ಕ್ಷೇತ್ರ ಪ್ರವಾಸ ಆರಂಭಿಸಿರುವ...Kannada News Portal