ತುಮಕೂರು : ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರುವ ಸಾಧ್ಯತೆ ಹೆಚ್ಚಿದೆ. ಸಿದ್ದಗಂಗಾ ಶ್ರೀಗಳ ಆಧ್ಯಾತ್ಮಿಕ ಹಾಗೂ ಸಮಾಜ ಸೇವಾಕಾರ್ಯಗಳನ್ನು ಅಂಕಿ ಅಂಶ ಸಮೇತ ಸಿದ್ದಗಂಗಾ ಮಠದ ನಿವೃತ್ತ ಪ್ರಾಂಶುಪಾಲರೊಬ್ಬರು ಸಂಗ್ರಹಿಸಿದ್ದು ಅವುಗಳನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕೆಲವೇ ದಿನಗಳಲ್ಲಿ ಸಲ್ಲಿಸಲಿದ್ದಾರೆ.

ಮಠದಲ್ಲೇ ಹಲವು ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಶ್ರೀಗಳ ಬಗ್ಗೆ ಮಹತ್ವಪೂರ್ಣ ಹಾಗೂ ಆಸಕ್ತಿಕರ ಸಂಗತಿಗಳನ್ನು ಕಲೆ ಹಾಕಿದ್ದು ಗಿನ್ನೆಸ್ ದಾಖಲೆಗೆ ನೀಡಲು ಎಲ್ಲ ರೀತಿಯ ತಯಾರಿ ನಡೆಸಿದ್ದಾರೆ. ಚಂದ್ರಶೇಖರಯ್ಯ ಕಲೆ ಹಾಕಿರುವ ಅಂಕಿ ಅಂಶ ವಿವರ ಹೀಗಿದೆ.

ಮೂರು ಬಾರಿ ಶಿವಪೂಜೆ

ಶ್ರೀಗಳು ದೀಕ್ಷೆ ಪಡೆದು 88 ವರ್ಷಗಳಾಗಿವೆ, ದಿನದಲ್ಲಿ ಮೂರು ಬಾರಿ ತಪ್ಪದೇ ಶಿವಪೂಜೆ ಮಾಡುವ ಅವರು 88 ವರ್ಷಗಳಲ್ಲಿ 96,426 ಕ್ಕೂ ಹೆಚ್ಚು ಬಾರಿ ಶಿವಪೂಜೆ ಮಾಡಿದ್ದಾರೆ.  ಶ್ರೀಗಳಷ್ಟು ಶಿವಾರಾಧನೆ ಮಾಡಿರುವವರು ಸದ್ಯದ ಪರಿಸ್ಥಿತಿಯಲ್ಲಿ ಯಾರು ಇಲ್ಲವೇನೊ ಎನ್ನಲಾಗುತ್ತಿದೆ.

ಶಿವಪೂಜೆ ಮಾಡುತ್ತಿರುವ ಶ್ರೀಗಳು

6 ಗಂಟೆ ಧ್ಯಾನ, ಪೂಜೆ

ಶ್ರೀಗಳು ಪ್ರತಿದಿನ 6 ಗಂಟೆ ಧ್ಯಾನ ಮತ್ತು ಪೂಜೆಯಲ್ಲಿ ತಪ್ಪದೆ ತಮ್ಮನ್ನು ತೊಡಗಿಕೊಳ್ಳುತ್ತಾರೆ. ಅಂದರೆ ಸುಮಾರು 1, 89, 930 ಗಂಟೆಗೂ ಅಧಿಕ ಸಮಯ ಧ್ಯಾನ ಮತ್ತು ಪೂಜೆ ಮಾಡಿದ್ದಾರೆ . 14 ಗಂಟೆ ಸಮಾಜ ಸೇವೆಯಲ್ಲಿ ತೊಡಗುವ ಶ್ರೀಗಳು ಇಲ್ಲಿಯವರೆಗೆ 4,49,680 ಗಂಟೆಗಳ ಕಾಲ ಸಮಾಜ ಸೇವೆಗೈದಿದ್ದಾರೆ.

ಲಕ್ಷಾಂತರ ವಿದ್ಯಾರ್ಥಿಗಳು

ಶಿಕ್ಷಣ ದಾಸೋಹ

ಸಿದ್ದಗಂಗಾ ಮಠದ ಬೃಹತ್ ಶಿಕ್ಷಣ ದಾಸೋಹದ ಅಂಕಿ-ಅಂಶಗಳನ್ನೂ ಚಂದ್ರಶೇಖರಯ್ಯ ಅವರು ಸಂಗ್ರಹಿಸಿದ್ದಾರೆ. 1935 ರಿಂದ 2017ರ ವರೆಗೆ 2,67,545 ವಿದ್ಯಾರ್ಥಿಗಳು ಮಠದಲ್ಲಿ ವ್ಯಾಸಂಗ ಮಾಡಿದ್ದಾರೆ. ಇನ್ನು ಗ್ರಾಮೀಣ ಭಾಗದಲ್ಲಿರುವ ಮಠದ 100 ಕ್ಕೂ ಅಧಿಕ ವಿದ್ಯಾಸಂಸ್ಥೆಗಳಲ್ಲಿ 6,06,312 ಮಂದಿ ವಿದ್ಯಾರ್ಥಿಗಳು ವಿದ್ಯೆ ಕಲಿತಿದ್ದಾರೆ. ಈ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿರುವ ಶಿಕ್ಷಕರ ಸಂಖ್ಯೆ 23,854 ಇದ್ದು, ಬೋದಕೇತರ ಸಿಬ್ಬಂದಿ ಸಂಖ್ಯೆ 23,845 ರಷ್ಟಿದೆ.

ಕೋಟ್ಯಾಂತರ ಭಕ್ತರಿಗೆ ದಾಸೋಹ

ಶ್ರೀ ಮಠಕ್ಕೆ ಈ ವರೆಗೆ ಭೇಟಿ ನೀಡಿರುವ ಭಕ್ತಾದಿಗಳ ಸಂಖ್ಯೆ 6,68,29,200 ಎಂದು ಲೆಕ್ಕಾ ಹಾಕಲಾಗಿದೆ. ಜಾತ್ರಾ ಸಮಯದಲ್ಲಿ ಮಠದಲ್ಲಿ ದಾಸೋಹ ಸ್ವೀಕರಿಸಿರುವ ಭಕ್ತರ ಸಂಖ್ಯೆ 3,62,೦೦,೦೦೦ . ಇನ್ನು ಸಿದ್ದಗಂಗಾ ಶ್ರೀಗಳ ಪಾದ ಸ್ಪರ್ಶಿಸಿದವರ ಸಂಖ್ಯೆ 23,12,64,000 ಅನ್ನೂ ದಾಟಿದೆಯಂತೆ.

ಕೋಟ್ಯಾಂತರ ಭಕ್ತರಿಗೆ ದಾಸೋಹ

ದಾಖಲೆಗೆ ಅರ್ಹವಾದ ಅಂಕಿ ಅಂಶಗಳನ್ನೇ ಚಂದ್ರಶೇಖರಯ್ಯ ಅವರು ಸಂಗ್ರಹಿಸಿದ್ದು, ಸಿದ್ದಗಂಗಾ ಶ್ರೀಗಳ ಸಾಧನೆ ಗೌರವಿಸಿ ಗಿನ್ನೆಸ್ ಬುಕ್ ಆಫ್​​​ ರೆಕಾರ್ಡ್ಸ್​​​​​​​​​​​​​ ಗೆ ಹೆಸರು ಸೇರಿದರೆ ಅದು ಕನ್ನಡಿಗರಿಗೆ ಒಂದು ಹೆಮ್ಮೆ ವಿಷಯವಾಗುತ್ತದೆ. ಇನ್ನು ನಮ್ಮವರೆ ಭಾರತ ರತ್ನ ನೀಡಲು ಹಿಂದೆ ಮುಂದೆ ನೋಡುತ್ತಿರುವುದು ವಿಪರ್ಯಾಸವಾಗಿದೆ.

ಶಿವಪೂಜೆ ಮಾಡುತ್ತಿರುವ ಶ್ರೀಗಳು
ಸಿದ್ದಗಂಗಾ ಮಠ

 

 

Please follow and like us:
0
http://bp9news.com/wp-content/uploads/2018/06/collage-45.jpghttp://bp9news.com/wp-content/uploads/2018/06/collage-45-150x150.jpgBP9 Bureauಆಧ್ಯಾತ್ಮತುಮಕೂರುಪ್ರಮುಖಶ್ರೀ ಸಿದ್ದಗಂಗಾ ಮಠತುಮಕೂರು : ನಡೆದಾಡುವ ದೇವರೆಂದೇ ಖ್ಯಾತರಾದ ಸಿದ್ದಗಂಗಾ ಶ್ರೀಗಳ ಹೆಸರು ಗಿನ್ನೆಸ್ ದಾಖಲೆ ಸೇರುವ ಸಾಧ್ಯತೆ ಹೆಚ್ಚಿದೆ. ಸಿದ್ದಗಂಗಾ ಶ್ರೀಗಳ ಆಧ್ಯಾತ್ಮಿಕ ಹಾಗೂ ಸಮಾಜ ಸೇವಾಕಾರ್ಯಗಳನ್ನು ಅಂಕಿ ಅಂಶ ಸಮೇತ ಸಿದ್ದಗಂಗಾ ಮಠದ ನಿವೃತ್ತ ಪ್ರಾಂಶುಪಾಲರೊಬ್ಬರು ಸಂಗ್ರಹಿಸಿದ್ದು ಅವುಗಳನ್ನು ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ಗೆ ಕೆಲವೇ ದಿನಗಳಲ್ಲಿ ಸಲ್ಲಿಸಲಿದ್ದಾರೆ. ಮಠದಲ್ಲೇ ಹಲವು ವರ್ಷ ಶಿಕ್ಷಕ ವೃತ್ತಿ ಮಾಡಿ ನಿವೃತ್ತ ಪಾಂಶುಪಾಲರಾದ ಚಂದ್ರಶೇಖರಯ್ಯ ಶ್ರೀಗಳ ಬಗ್ಗೆ ಮಹತ್ವಪೂರ್ಣ ಹಾಗೂ ಆಸಕ್ತಿಕರ...Kannada News Portal