ತುರುವೇಕೆರೆ: ಬ್ಯಾಂಕಿನಲ್ಲಿ ನಡೆದಿರುವ ಹಗರಣಗಳಿಂದಾಗಿ ಲಾಭದಲ್ಲಿದ್ದ ಬ್ಯಾಂಕ್ ನಷ್ಟ ಅನುಭವಿಸುವಂತಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣಗಳಿಂದಾಗಿ 2015-16 ನೇ ಸಾಲಿನಲ್ಲಿ 25 ಲಕ್ಷ ರೂ ಲಾಭದಲ್ಲಿದ್ದ 2016-17ರ ವೇಳೆಗೆ  78,46,000ರೂ ನಷ್ಟ ಅನುಭವಿಸಿದೆ. ಲಾಭವನ್ನು ಸೇರಿದರೆ ನಷ್ಟದ ಪ್ರಮಾಣ ಒಂದು ಕೋಟಿಗೂ ಅಧಿಕವಾಗುತ್ತದೆ ಎಂದು ವಿವರಿಸಿದರು.

ಹಗರಣಗಳನ್ನು ತನಿಖೆಗೆ ಒಳಪಡಿಸಿದಾಗ ಬ್ಯಾಂಕ್ ಜವಾಬ್ದಾರಿ ಹೊತ್ತಿದ್ದ ವ್ಯವಸ್ಥಾಪಕರು ಕಾನೂನು ಕ್ರಮಕ್ಕೆ ಒಳಗಾದರು. ಹಗರಣವನ್ನು ತನಿಖೆಗೆ ಒಳಪಡಿಸಿ ಬ್ಯಾಂಕ್ ನ ಅಭಿವೃದ್ಧಿಗೆ ಮುಂದಾಗಿದ್ದೇ ತಪ್ಪೇ? ಎಂದು ಪ್ರಶ್ನಿಸಿದರು.

ಜನತೆ ಕ್ಷಮಿಸುವುದಿಲ್ಲ: ತಕ್ಕ ಪಾಠ ಕಲಿಸುವುದು ನಿಶ್ಚಿತ

ಬ್ಯಾಂಕಿನ ಪ್ರಗತಿಗೆ ಶ್ರಮಿಸುವಂತೆ ಮತ ನೀಡಿ 5 ವರ್ಷ ಪೂರ್ಣಾವಧಿ ಅಧಿಕಾರ ನೀಡಿದ್ದರು. ಆದರೆ ಆಡಳಿತ ಮಂಡಳಿಯ ಕೆಲವು ನಿರ್ದೇಶಕರ ಹಗರಣಗಳನ್ನು ತನಿಖೆಗೆ ಒಳಪಡಿಸಿದ್ದನ್ನು ಸಹಿಸದ ಪ್ರತಿಪಕ್ಷದ 6 ಮಂದಿ ನಿರ್ದೇಶಕರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ‌ನೀಡಿದ್ದಲ್ಲದೆ ಕೋರಂ ಅಭಾವ ಸೃಷ್ಟಿಸಿ ಆಡಳಿತ ಮಂಡಳಿ ರದ್ದಾಗುವಂತೆ ಮಾಡಿ ಮತ್ತೊಮ್ಮೆ ಬ್ಯಾಂಕಿನ ಆಡಳಿತ ಮಂಡಳಿಗೆ ಚುನಾವಣೆ ನಡೆಯುವ ಸಂದಿಗ್ಧ ಪರಿಸ್ಥಿತಿಯನ್ನು ತಂದಿದ್ದು ಜನತೆ ಕ್ಷಮಿಸುವುದಿಲ್ಲ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದರು.

ನಿರ್ದೇಶಕರಿಂದ ಭ್ರಷ್ಟಾಚಾರ, ಹಗರಣದಿಂದ ಬ್ಯಾಂಕ್ ಗೆ ನಷ್ಟ: ಆರೋಪ

ಈ ಸಾಲಿನ ಅವಧಿಯಲ್ಲಿ ಬ್ಯಾಂಕ್ ನಿರ್ದೇಶಕರಾಗಿದ್ದ ಮೂಡಲಗಿರಿಯಪ್ಪ ಅವರನ್ನು ನಿರ್ದೇಶಕ ಸ್ಥಾನದಿಂದ ಅಮಾನತ್ತಾಗಲು ನಾವು ಕಾರಣರಲ್ಲ. ತಮ್ಮ ಮಗನೆಂದು ಬೇರೆಯವರನ್ನು ತೋರಿಸಿ ಬ್ಯಾಂಕಿನಿಂದ ಸಾಲ ಪಡೆದು ದಾಖಲಾತಿಯಲ್ಲಿ ವಂಚಿಸಿದ್ದರು ಎಂದು ಆರೋಪಿಸಿದರು. ಈ ಪ್ರಕರಣ ಜಿಲ್ಲಾ ಸಹಕಾರಿ ನಿರ್ದೇಶಕರು ಹಾಗೂ ಜಂಟಿ ನಿರ್ದೇಶಕರಲ್ಲಿಗೆ ಹೋಗಿತ್ತು. ಸತ್ಯಾಸತ್ಯತೆ ಪರಿಶೀಲನೆ ನಡೆದ ನಂತರ ಮೂಡಲಗಿರಿಯಪ್ಪ ಅವರನ್ನು ಅಮಾನತ್ತುಗೊಳಿಸಲಾಗಿತ್ತು. ಇದಕ್ಕೆ ನಾವು ಕಾರಣ ಎಂದು ದೂರುವುದು ಸರಿಯಲ್ಲ ಎಂದರು.

ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್. ಬೋರೇಗೌಡರು ತಮ್ಮ ಅಧಿಕಾರಾವಧಿಯಲ್ಲಿ ಬಹಳಷ್ಟು ಮಂದಿಗೆ ತಾವೇ ಜಾಮೀನುದಾರರಾಗಿ ಸಾಲ ದೊರಕಿಸಿದ್ದಾರೆ. ಸಾಲ ಪಡೆದವರು ಸಕಾಲದಲ್ಲಿ ‌ಮರುಪಾವತಿಯಾಗದ ಕಾರಣ ಸುಸ್ತಿಯಾಗಿದೆ. ಪಟ್ಟಣ ಪಂಚಾಯಿತಿ ಉದ್ಯಾನವನ ಎಂದು ಘೋಷಿಸಿದ್ದ ನಿವೇಶನಕ್ಕೆ 5 ಲಕ್ಷ ರೂ ಸಾಲ ನೀಡಿದ್ದಾರೆ. ಸಾಲಕ್ಕೆ ಒದಗಿಸಿರುವ ದಾಖಲೆಗಳ ಪ್ರಕಾರ ಅವರು ಬ್ಯಾಂಕಿನ ಷೇರುದಾರರೇ ಅಲ್ಲ. 2016 ರ ಫೆಬ್ರವರಿ 9 ರಂದು ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಒಂದು ತಿಂಗಳ ಅಂತರದಲ್ಲಿ ದಾಖಲೆ ಒದಗಿಸಿದ್ದಾರೆ. ಸಾಲ ನೀಡುವಾಗ ಬ್ಯಾಂಕ್ ನ ಸಮಿತಿ, ಉಪಸಮಿತಿಯ ಗಮನಕ್ಕೆ ಬಾರದೆ ಬ್ಯಾಂಕಿನ ನಿಯಮಾವಳಿಗಳನ್ನು ಉಲ್ಲಂಘಿಸಿ ಸಾಲ ನೀಡಿದ್ದಾರೆಂದು ದೂರಿದರು.

ಬ್ಯಾಂಕ್ ನಿರ್ದೇಶಕ ಕೆಂಪರಾಜು ಅವರು 12 ಲಕ್ಷ ಸಾಲ ಪಡೆದಿದ್ದು ಮಿತಿಯ ಒಳಗೆ ಸಾಲಪಡೆದಿರುವಂತೆ ಶೇ.3 ಬಡ್ಡಿ ಪಾವತಿಸಿದ್ದಾರೆ. ಆದರೆ ಈ ಬಾಬ್ತಿನ ‌ಪ್ರಕಾರ ಶೇ.14 ರ ಬಡ್ಡಿ ಅನ್ವಯವಾಗುತ್ತದೆ.‌ಇದರಿಂದ ಒಂದು ಲಕ್ಷಕ್ಕೂ ಅಧಿಕ ಹಣವನ್ನು ಬ್ಯಾಂಕ್ ಗೆ ವಂಚಿಸಿದ್ದಾರೆಂದು ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಪಿಕಾರ್ಡ್ ಬ್ಯಾಂಕ್ ನ‌ ಮಾಜಿ ನಿರ್ದೇಶಕರಾದ ಟಿ.ಎಸ್. ದಾನೀಗೌಡರು, ಶೇಖರಯ್ಯ, ಗುಡ್ಡೇನಹಳ್ಳಿ ನಂಜುಂಡಪ್ಪ,  ಕಾಂತರಾಜು, ನಾಗೇಶ್ ಇದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/06/WhatsApp-Image-2018-06-12-at-12.04.06-PM-1024x480.jpeghttp://bp9news.com/wp-content/uploads/2018/06/WhatsApp-Image-2018-06-12-at-12.04.06-PM-150x150.jpegBP9 Bureauತುಮಕೂರುತುರುವೇಕೆರೆ: ಬ್ಯಾಂಕಿನಲ್ಲಿ ನಡೆದಿರುವ ಹಗರಣಗಳಿಂದಾಗಿ ಲಾಭದಲ್ಲಿದ್ದ ಬ್ಯಾಂಕ್ ನಷ್ಟ ಅನುಭವಿಸುವಂತಾಗಿದೆ ಎಂದು ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣಗಳಿಂದಾಗಿ 2015-16 ನೇ ಸಾಲಿನಲ್ಲಿ 25 ಲಕ್ಷ ರೂ ಲಾಭದಲ್ಲಿದ್ದ 2016-17ರ ವೇಳೆಗೆ  78,46,000ರೂ ನಷ್ಟ ಅನುಭವಿಸಿದೆ. ಲಾಭವನ್ನು ಸೇರಿದರೆ ನಷ್ಟದ ಪ್ರಮಾಣ ಒಂದು ಕೋಟಿಗೂ ಅಧಿಕವಾಗುತ್ತದೆ ಎಂದು ವಿವರಿಸಿದರು. ಹಗರಣಗಳನ್ನು ತನಿಖೆಗೆ ಒಳಪಡಿಸಿದಾಗ ಬ್ಯಾಂಕ್ ಜವಾಬ್ದಾರಿ ಹೊತ್ತಿದ್ದ ವ್ಯವಸ್ಥಾಪಕರು ಕಾನೂನು ಕ್ರಮಕ್ಕೆ...Kannada News Portal