ತುಮಕೂರು :   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ  ಮೊದಲ ದಿನವೇ ಬಿಎಸ್ ಯಡಿಯೂರಪ್ಪ​ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಅರ್ಶೀವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಯಡಿಯೂರಪ್ಪರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು.

ನಂತರ ಮತನಾಡಿದ ಸಿಎಂ ಬಿಎಸ್​​ವೈ, ನಾನು ಸಿಎಂ‌ ಆದ ಬಳಿಕ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಗಳ ದರ್ಶನ ಪಡೆದಿದ್ದು, ಅವರ  ಆಶಿರ್ವಾದ ದಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ ಎಂದರು.

ಕರ್ನಾಟಕ ವನ್ನ ಮಾದರಿ ರಾಜ್ಯವನ್ನಾಗಿ ಮಾಡಬೇಕು. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಆಗಬೇಕು.ಕಾಂಗ್ರೆಸ್ ಮುಕ್ತ ಭಾರತ ಕ್ಕೆ ಜನ ತಿರ್ಮಾನಿಸಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್  ಅಪವಿತ್ರ ಮೈತ್ರಿಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಇನ್ನೂ 10 -12 ದಿನಗಳಲ್ಲಿ ನಮ್ಮ ಸರ್ಕಾರ ಬಹುಮತ ಸಾಭೀತು ಪಡಿಸಲಿದೆ.ನಾನು ಕೊಟ್ಟ ಮಾತಿನಂತೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ ಸಾಲ ಮನ್ನಾ  ಮಾಡಿದ್ದೇನೆ ಎಂದರು. ಈ ವೇಳೆ ನೂತನ ಶಾಸಕರಾದ ಜಿ ಬಿ ಜ್ಯೋತಿಗಣೇಶ್, ಬಿ.ಸಿ.ನಾಗೇಶ್, ಜೆ.ಸಿ.ಮಾಧುಸ್ವಾಮಿ ಮಾಜಿ ಸಂಸದ ಜಿ.ಎಸ್. ಬಸವರಾಜು ಉಪಸ್ಥಿತರಿದ್ದರು.

 

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-17-at-7.11.24-PM-1-1024x682.jpeghttp://bp9news.com/wp-content/uploads/2018/05/WhatsApp-Image-2018-05-17-at-7.11.24-PM-1-150x150.jpegBP9 Bureauತುಮಕೂರುಪ್ರಮುಖರಾಜಕೀಯ  ತುಮಕೂರು :   ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ  ಮೊದಲ ದಿನವೇ ಬಿಎಸ್ ಯಡಿಯೂರಪ್ಪ​ ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳ ಅರ್ಶೀವಾದ ಪಡೆದರು. ಈ ಸಂದರ್ಭದಲ್ಲಿ ಶ್ರೀಗಳು ಯಡಿಯೂರಪ್ಪರವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಮತನಾಡಿದ ಸಿಎಂ ಬಿಎಸ್​​ವೈ, ನಾನು ಸಿಎಂ‌ ಆದ ಬಳಿಕ ನಡೆದಾಡುವ ದೇವರು ಸಿದ್ದಗಂಗಾ ಶ್ರೀ ಗಳ ದರ್ಶನ ಪಡೆದಿದ್ದು, ಅವರ  ಆಶಿರ್ವಾದ ದಿಂದ ಎಲ್ಲರ ಪ್ರೀತಿ ವಿಶ್ವಾಸ ಗಳಿಸಿ ಸರ್ಕಾರ ರಚಿಸಲು ಸಾಧ್ಯವಾಗುತ್ತದೆ ಎಂದರು. ಕರ್ನಾಟಕ...Kannada News Portal