ತುರುವೇಕೆರೆ: ನಮ್ಮ ಕಷ್ಟಸುಖಗಳನ್ನು ಭಗವಂತನಿಗೆ ಅರ್ಪಿಸಿ ನೆಮ್ಮದಿಯಿಂದ ಬದುಕು ಸಾಗಿಸಲು, ಮನಸ್ಸಿನ ಕಲ್ಮಶಗಳನ್ನು ತೊಳೆಯಲು ದೇವಾಲಯಗಳ ಅಗತ್ಯವಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಹೊಣಕೆರೆ ಗ್ರಾಮದಲ್ಲಿನ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯ ಜೀರ್ಣೋದ್ಧಾರ, ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ, ವಿಮಾನ ಗೋಪುರ, ಕಳಶ ಸ್ಥಾಪನಾ ಮಹೋತ್ಸವದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಸರ್ವಾಂತರ್ಯಾಮಿಯಾದ ಭಗವಂತನಿಗೂ ಒಂದು ಸ್ಥಾನದ ಅಗತ್ಯವಿದ್ದು, ವೇದೋಕ್ತ, ಶಾಸ್ತ್ರೋಕ್ತ, ಮಂತ್ರೋಕ್ತವಾಗಿ ಸ್ವಾಮಿಯನ್ನು ಪ್ರತಿಷ್ಠಾಪಿಸಿ ಶ್ರದ್ದಾ, ಭಕ್ತಿಯ ಕೇಂದ್ರವನ್ನು ಸ್ಥಾಪಿಸುವುದೇ ದೇವಾಲಯಾಗಿದೆ. ದುಃಖದ ನಿವಾರಣೆಗೆ, ಕಷ್ಟಗಳ ಪರಿಹಾರಕ್ಕೆ ದೇವರ ಅನುಗ್ರಹ ಬೇಕಿದೆ‌ ಎಂದರು.

ಭಕ್ತಿಯಿಂದ ದೇವಾಲಯ ಜೀರ್ಣೋದ್ಧಾರ ಮಾಡಿ ಪುನರ್ ಪ್ರತಿಷ್ಠಾಪನೆ ಮಾಡಿರುವುದು ಭಗವಂತನಿಗೆ ತೃಪ್ತಿ ತಂದಿರುವುದರ ಸಾಕ್ಷಿಯಾಗಿ ವರುಣ ವೃಷ್ಟಿಯಾಗಿದೆ. ಶ್ರೀ ರಂಗನಾಥ ಸ್ವಾಮಿಯ ಆಶೀರ್ವಾದ ಮಳೆಯ ರೂಪದಲ್ಲಿ ಭಕ್ತಾದಿಗಳಿಗೆ ದೊರೆತಿದೆ ಎಂದರು‌.

ಎಲ್ಲಾ ಜಾತಿ ಮತ ಪಂಥವಿಲ್ಲದೆ ಎಲ್ಲರೂ ಮಂತ್ರವನ್ನು ಕಲಿಯಬೇಕೆನ್ನುವುದು ಶ್ರೀಗಳ ಆಶಯವಾಗಿತ್ತು. ಸಂಸ್ಕೃತ ಸಂಸ್ಕಾರ, ಸಂಸ್ಕೃತಿಯನ್ನು ಕೊಡುತ್ತದೆ. ಸಂಸ್ಕೃತಿಯನ್ನು ಕೊಡುವಂತಹುದೇ ಸಂಸ್ಕಾರ ಎಂದ ಅವರು, ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕಿದೆ. ಕಷ್ಟಗಳು ಬಾರದಂತಹ ವ್ಯವಸ್ಥೆಯೆಡೆಗೆ ನಾವು ತೆರಳಲು ಇರುವ ಒಂದೇ ಮಾರ್ಗ ಭಗವಂತನ ಅನುಗ್ರಹ ಎಂದರು.

ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಯುವ ಸಮೂಹ ಆಧ್ಯಾತ್ಮಿಕ, ಧಾರ್ಮಿಕ ಚಿಂತನೆಯನ್ನು ಬೆಳೆಸಿಕೊಳ್ಳಬೇಕು, ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸಂಪ್ರದಾಯ, ಆಚರಣೆಗಳನ್ನು ಮುಂದುವರೆಸಿಕೊಂಡು ಹೋಗಬೇಕೆಂದರು.

ಬದರೀಕಾಶ್ರಮದ ಶ್ರೀ ಓಂಕಾರಾನಂದ ಸ್ವಾಮೀಜಿ ಗೋಪುರದ ಕಳಸಾರೋಹಣೆ ಮಾಡಿದರು. ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಕೆ.ಎಲ್. ಮಂಜುನಾಥ್ ಧಾರ್ಮಿಕ ಸಭೆಯನ್ನು ಉದ್ಘಾಟಿಸಿದರು. ದೇವಾಲಯ ಜೀರ್ಣೋದ್ಧಾರಕ್ಕೆ ಅಗತ್ಯ ನೆರವು ನೀಡಿದ ದಾನಿಗಳನ್ನು ಹಾಗೂ ಗಣ್ಯರನ್ನು ಸನ್ಮಾನಿಸಲಾಯಿತು.

ಸಾಹಿತಿ ಕೆ.ಭೈರಪ್ಪ, ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಕರಲಿಂಗೇಗೌಡ, ಉದ್ಯಮಿ ಪಾಪಣ್ಣ, ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಟಿ.ಎಸ್. ಬೋರೇಗೌಡ, ಸಹಕಾರ ಸಂಘಗಳ ಜಂಟಿ ನಿಬಂಧಕ ಕಳಸ್ತಾಚಾರ್, ಗ್ರಾಪಂ ಸದಸ್ಯೆ ರೂಪಾ ಯೋಗೇಶ್,  ಟ್ರಸ್ಟ್ ಅಧ್ಯಕ್ಷ ಲಕ್ಕಣ್ಣಗೌಡ, ಉಪಾಧ್ಯಕ್ಷರಾದ ತಿಮ್ಮಯ್ಯ, ಕಳಸಾಚಾರ್, ಕಾರ್ಯದರ್ಶಿ ಮೂಡಲಗಿರಿಗೌಡ, ಪಿ.ಹೆಚ್. ಧನಪಾಲ್, ಎಂ.ಕೆ.ಕೆಂಪರಾಜ್ ಸೇರಿದಂತೆ ಟ್ರಸ್ಟ್‌ನ ಪದಾಧಿಕಾರಿಗಳು, ಹೊಣಕೆರೆ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

Please follow and like us:
0
http://bp9news.com/wp-content/uploads/2018/07/WhatsApp-Image-2018-07-11-at-3.53.36-PM-1024x610.jpeghttp://bp9news.com/wp-content/uploads/2018/07/WhatsApp-Image-2018-07-11-at-3.53.36-PM-150x150.jpegBP9 Bureauಆಧ್ಯಾತ್ಮತುಮಕೂರುಪ್ರಮುಖತುರುವೇಕೆರೆ: ನಮ್ಮ ಕಷ್ಟಸುಖಗಳನ್ನು ಭಗವಂತನಿಗೆ ಅರ್ಪಿಸಿ ನೆಮ್ಮದಿಯಿಂದ ಬದುಕು ಸಾಗಿಸಲು, ಮನಸ್ಸಿನ ಕಲ್ಮಶಗಳನ್ನು ತೊಳೆಯಲು ದೇವಾಲಯಗಳ ಅಗತ್ಯವಿದೆ ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ತಿಳಿಸಿದರು. ತಾಲೂಕಿನ ಹೊಣಕೆರೆ ಗ್ರಾಮದಲ್ಲಿನ ಪುರಾತನ ಶ್ರೀ ರಂಗನಾಥ ಸ್ವಾಮಿ ದೇವಾಲಯ ಜೀರ್ಣೋದ್ಧಾರ, ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆ, ಮಹಾ ಕುಂಭಾಭಿಷೇಕ, ವಿಮಾನ ಗೋಪುರ, ಕಳಶ ಸ್ಥಾಪನಾ ಮಹೋತ್ಸವದ ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. var domain =...Kannada News Portal