ಇಂದು ನಿನಾಸಂ ಸತೀಶ್​ ಅವರಿಗೆ ಜನ್ಮದಿನದ ಸಂಭ್ರಮ. ಇದೇ ಸಂದರ್ಭದಲ್ಲಿ  ”ಅಯೋಗ್ಯ”  ಸಿನಿಮಾದ ಟೀಸರ್​ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇಡೀ ಚಿತ್ರ ತಂಡ ನಾಕನ ನಟ ನಿನಾಸಂ ಸತೀಶ್​ ಅವರಿಗೆ ಹ್ಯಾಪಿ ಬರ್ತ್​ ಡೇ ವಿಶ್​ ಮಾಡಿದ್ದಾರೆ.


ಅಂದಹಾಗೇ ಸಿನಿಮಾ ಬಿಡುಗಡೆಗೂ ಮುನ್ನವೇ ನಿನಾಸಂ ಸತೀಶ್​ ಒಂದಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಹುಟ್ಟಿದ ಊರಿನಲ್ಲೇ ಒಂದು   ಗ್ರಾಮವನ್ನು  ದತ್ತು ತೆಗೆದುಕೊಂಡು, ಅಲ್ಲಿನ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಮುಂದಾಗಿದ್ದಾರೆ.  ನಿನಾಸಂ ಸತೀಶ್​ ತಲೆಗೆ ಇಂತಹದ್ದೊಂದು ಕೆಲಸ ಮಾಡುವ ಆಲೋಚನೆ ಮೊದಲಿನಿಂದಲೂ ಇತ್ತಂತೆ.  ಆದರೆ  ಅದನ್ನು ತವರೂರುನಿಂದಲೇ ಆರಂಭ ಮಾಡಬೇಕು ಎಂದು  ಸತೀಶ್​ ತೀರ್ಮಾನಿಸಿ  ತವರಿನಲ್ಲೇ  ಇರುವ ಹುಲ್ಲೆಗಾಲ ಗ್ರಾಮವನ್ನು ತೆಗೆದುಕೊಂಡಿದ್ದಾರೆ. ಹೀಗಾಗಲೇ  ಅಲ್ಲಿ  ಕೆಲ ಸದಸ್ಯರು  ಕೆಲಸ ಕಾರ್ಯಗಳನ್ನು ಆರಂಭ ಮಾಡಿದ್ದಾರೆ.

ಅಯೋಗ್ಯ ಸಿನಿಮಾವನ್ನು ಮಹೇಶ್​ ಕುಮಾರ್​ ನಿರ್ದೇಶನ ಮಾಡುತ್ತಿದ್ದು, ಚಂದ್ರಶೇಖರ್​ ಎಂಬುವವರು ಇದಕ್ಕೆ ಬಂಡವಾಳ ಹಾಕಿದ್ದಾರೆ. ಅಯೋಗ್ಯದಲ್ಲಿ ಸಂಪೂರ್ಣ ಹಳ್ಳಿ- ಸೊಗಡು  ತೋರಿಸಿದ್ದು ಸತೀಶ್​ಗೆ ಬುಲ್​ಬುಲ್​ ಕ್ವೀನ್​ ರಚಿತಾ ರಾಂ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಿನ್ನೆ ರಾತ್ರಿಯಿಂದಲೇ ನಿನಾಸಂ ಸತೀಶ್​ ಅವರ  ಅಭಿಮಾನಿಗಳು ಅವರಿಗಾಗಿ ಕೇಕ್​ ಕಟ್​ ಮಾಡಿಸುವುದರ ಮೂಲಕ ಹುಟ್ಟುಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

Please follow and like us:
0
http://bp9news.com/wp-content/uploads/2018/06/Sathish-Ninasam-900x581.jpghttp://bp9news.com/wp-content/uploads/2018/06/Sathish-Ninasam-900x581-150x150.jpgBP9 Bureauಪ್ರಮುಖಸಿನಿಮಾಇಂದು ನಿನಾಸಂ ಸತೀಶ್​ ಅವರಿಗೆ ಜನ್ಮದಿನದ ಸಂಭ್ರಮ. ಇದೇ ಸಂದರ್ಭದಲ್ಲಿ  ''ಅಯೋಗ್ಯ''  ಸಿನಿಮಾದ ಟೀಸರ್​ ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಇಡೀ ಚಿತ್ರ ತಂಡ ನಾಕನ ನಟ ನಿನಾಸಂ ಸತೀಶ್​ ಅವರಿಗೆ ಹ್ಯಾಪಿ ಬರ್ತ್​ ಡೇ ವಿಶ್​ ಮಾಡಿದ್ದಾರೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','2370'); scpt.setAttribute('data-slotId','1'); scpt.setAttribute('data-templateId','15'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_1520180613093742'); document.getElementById('div_1520180613093742').appendChild(scpt);  ಅಂದಹಾಗೇ ಸಿನಿಮಾ ಬಿಡುಗಡೆಗೂ ಮುನ್ನವೇ ನಿನಾಸಂ ಸತೀಶ್​...Kannada News Portal