ಸಿನಿಮಾ ಟಾಕ್​ :  ರಾಜಕೀಯ ಟೆನ್ಶನ್​ ನಡುವೆಯೇ  ನಕ್ಕು ನಗಿಸೋದಿಕ್ಕೆ  ಬರ್ತಿದ್ದಾರೆ  ಕಾಮಿಡಿ ಸ್ಟಾರ್​ ಶರಣ್ ಮತ್ತು ಕಿಲಾಡಿಕಿಂಗ್​ ಚಿಕ್ಕಣ್ಣ​. ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ರ್ಯಾಂಬೋ 2 ಸಿನಿಮಾ ಆಡಿಯೋವಂತೂ ಸಿಕ್ಕಾಪಟ್ಟೆ ಸೌಂಡ್​ ಮಾಡುತ್ತಿವೆ.  ತಿಂಗಳ ಹಿಂದೆಯೇ ರಿಲೀಸ್​ ಆಗಬೇಕಿದ್ದ ಸಿನಿಮಾ  Rambo-2 ಗೆ ಎಲೆಕ್ಷನ್​ ಬಿಸಿ ತಟ್ಟಿತ್ತು. ಕಾರಣಾಂತರದಿಂದ ಮುಂದೋಗುತ್ತಿದ್ದ ಸಿನಿಮಾ ಬಿಡುಗಡೆ ಡೇಟ್​   ಅಂತೂ ಇಂತೂ ರಿಲೀಸ್​ ಆಗೋಕೆ ಶುಭ ದಿನ ಬಂದೇ ಬಿಡ್ತು. ನಗುವಿನ ಹೂರಣ ಕೊಡುವುದಕ್ಕೆ ನಾಳೆ ನಟ ಶರಣ್​  ಥಿಯೇಟರ್​ಗೆ ಬರುತ್ತಿದ್ದಾರೆ.

ಈಗಾಗಲೇ  ಆಡಿಯೋ ಎಲ್ಲೆಡೆ ವೈರಲ್​ ಆಗುತ್ತಿದ್ದು ಅದರಲ್ಲೂ  ಚುಟು ಚುಟು ಸಾಂಗ್​ ಅಂತೂ ಎಲ್ಲರ ಬಾಯಲ್ಲೂ ಗುನುಗುವಷ್ಟು ಮಟ್ಟಿಗೆ  ಫೇಮಸ್ಸ್ ಆಗಿದೆ.  ಬರೀ ಹಾಡುಗಳಿಂದಲೇ ರ್ಯಾಂಬೋ 2 ಸಿನಿಮಾ ಸಿಕ್ಕಾಪಟ್ಟೆ ಕಾಣಿಸಿಕೊಳ್ಳುತ್ತಿದೆ. ಇನ್ನು  ಎಮೋಷನಲ್​ ಫೀಲಿಂಗ್ಸ್​, ಲವ್​, ಕಾಮಿಡಿ, ಎಲ್ಲಾ ಥರ ವರ್ಗದ ಜನರನ್ನು ಸೆಳೆಯುವ ಸಿನಿಮಾ ಇದಾಗಿದೆ ಎಂದು ನಟ ಶರಣ್​ ಹೇಳುತ್ತಾರೆ.  ನಿಮ್ಮನ್ನು ನಗಿಸದೇ ಇರಲಾದೀತೆ ಎಂದು ತಮ್ಮದೇ ಆದ ಸ್ಟೈಲ್​ನಲ್ಲಿ ನಗಿಸೋ ನಮ್ಮ ರ್ಯಾಂಬೋ ಶರಣ್​ ಈ ಸಿನಿಮಾದ ಮತ್ತೊಂದು ವಿಶೇಷ ಗುಟ್ಟು ಬಿಚ್ಚಿಟ್ಟರು.

ಒಂದೇ ಸಿನಿಮಾದಲ್ಲಿ ನಮ್ಮ ಕನ್ನಡದ ಮೂವರು ಬಿಗ್​  ಸ್ಟಾರ್​ ಗಳು ಕಾಣಿಸಿಕೊಂಡಿದ್ದಾರೆ. ಅನಿಲ್​ ಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ  ಗೋಲ್ಡನ್​ ಸ್ಟಾರ್​ ಗಣೇಶ್, ಚಾಲೆಂಜಿಂಗ್​ ಸ್ಟಾರ್​ ದರ್ಶನ್​, ರಾಕಿಂಗ್​ ಸ್ಟಾರ್​ ಯಶ್​ ನಟಿಸಿದ್ದಾರೆ ಎಂದು ರ್ಯಾಂಬೋ  ಸಿನಿಮಾ ಪೋಸ್ಟರ್​ಗಳು ಹೇಳುತ್ತಿವೆ.  ನೀವು ಅವರು ಹೇಗೆ ಸಿನಿಮಾ ಕಾಣಿಸಿಕೊಂಡಿದ್ದಾರೆ ಅಂತಾ ಸಿನಿಮಾ ನೋಡಿಯೇ ಹೇಳಬೇಕು ಎಂದು ಕ್ಲೂ ಕೊಟ್ಟು ಸುಮ್ಮನಾದರು.

. ಇನ್ನು ‘ಮುಗುಳುನಗೆ’ ಚೆಲುವೆ ಆಶಿಕಾ ಶರಣ್​ ಗೆ ಜೋಡಿಯಾಗಿದ್ದು ಸಿಕ್ಕಾಪಟ್ಟೆ  ಅಭಿಮಾನಿಗಳಿಗೆ ಮತ್ತಷ್ಟು ಇಷ್ಟವಾಗೋ  ಪಾತ್ರದಲ್ಲಿ  ಕಾಣಿಸಿಕೊಳ್ತಿದ್ದಾರೆ ಅಂತಾ  ಹೇಳ್ತಾರೆ ನಿರ್ದೇಶಕರು.

ಒಟ್ಟಾರೆ ನಾಳೆ ಸಿನಿಮಾ ರಿಲೀಸ್​ ಆಗುತ್ತಿದೆ. ಇನ್ನು ಸಿನಿ ಪ್ರೇಕ್ಷಕರು ಸಿನಿಮಾ ಮೆಚ್ಚಿ ಯಾವ ಮಾರ್ಕ್ಸ್​ ಕೊಡ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

Please follow and like us:
0
http://bp9news.com/wp-content/uploads/2018/05/maxresdefault-3-2-1024x576.jpghttp://bp9news.com/wp-content/uploads/2018/05/maxresdefault-3-2-150x150.jpgBP9 Bureauಸಿನಿಮಾಸಿನಿಮಾ ಟಾಕ್​ :  ರಾಜಕೀಯ ಟೆನ್ಶನ್​ ನಡುವೆಯೇ  ನಕ್ಕು ನಗಿಸೋದಿಕ್ಕೆ  ಬರ್ತಿದ್ದಾರೆ  ಕಾಮಿಡಿ ಸ್ಟಾರ್​ ಶರಣ್ ಮತ್ತು ಕಿಲಾಡಿಕಿಂಗ್​ ಚಿಕ್ಕಣ್ಣ​. ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ರ್ಯಾಂಬೋ 2 ಸಿನಿಮಾ ಆಡಿಯೋವಂತೂ ಸಿಕ್ಕಾಪಟ್ಟೆ ಸೌಂಡ್​ ಮಾಡುತ್ತಿವೆ.  ತಿಂಗಳ ಹಿಂದೆಯೇ ರಿಲೀಸ್​ ಆಗಬೇಕಿದ್ದ ಸಿನಿಮಾ  Rambo-2 ಗೆ ಎಲೆಕ್ಷನ್​ ಬಿಸಿ ತಟ್ಟಿತ್ತು. ಕಾರಣಾಂತರದಿಂದ ಮುಂದೋಗುತ್ತಿದ್ದ ಸಿನಿಮಾ ಬಿಡುಗಡೆ ಡೇಟ್​   ಅಂತೂ ಇಂತೂ ರಿಲೀಸ್​ ಆಗೋಕೆ ಶುಭ ದಿನ ಬಂದೇ ಬಿಡ್ತು....Kannada News Portal