ಬೆಂಗಳೂರು: ‘ಐ-ಟ್ಯಾಗ್’ ಎನ್ನುವ ಹೆಸರಿನಿಂದ ಒಂದು ಮೊಬೈಲ್ ಸಂಭಂದಿತ ಗ್ಯಾಜೆಟ್ ಬಂದಿದೆ ,ಇದರ ಬೆಲೆಯೂ ಕೂಡ ಅತ್ಯಲ್ಪ ಅಂದರೆ 300 ರೂಪಾಯಿಗಳಿಂದ ಶುರುವಾಗುವ ಈ ಎಲೆಕ್ಟ್ರಾನಿಕ್ ವಸ್ತುವಿನ ಶ್ರೇಣಿಯ ಗರಿಷ್ಠ ಮೊತ್ತ 3000ದ ವರೆಗೂ ಇದೆ.

ನೀವು ಕೊಡುವ ಹಣದ ಮೊತ್ತ ಹೆಚ್ಚಾದಂತೆಲ್ಲಾ ವಸ್ತುವಿನ ಗುಣಮಟ್ಟ ಹೆಚ್ಚಿರುತ್ತದೆ ಎಂಬ ಪುರಾತನ ಮೂಢನಂಬಿಕೆಯಿಂದ ಹೊರಬನ್ನಿ ಏಕೆಂದರೆ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬೆಲೆ ಹೆಚ್ಚಿದಂತೆಲ್ಲಾ ಅದರ ಹೊರನೋಟ ಅಂದರೆ ಬಾಡಿಯ ಗುಣಮಟ್ಟ (ಕಟಿಂಗ್ ಎಡ್ಜ್) ಮಾತ್ರ ಬದಲಾಗುತ್ತದೆಯೇ ಹೊರತು ಆಂತರಿಕ ಆಫೀಸ್ ವರ್ಕಿನ ಕಾಂಪೋನೆಂಟ್ ಗುಣಮಟ್ಟದಲ್ಲಿ ಏನೆಂದರೇನೇನೂ ಬದಲಾಗಿರುವುದಿಲ್ಲ ಹಾಗಾಗಿ 300 ರಲ್ಲೇ ಇರಿ ಸಾಕು.(ಅದು ನಿಮಗಷ್ಟಕ್ಕೇ ಸಿಕ್ಕರೆ!)

ಐ-ಟ್ಯಾಗ್ ಈ ಪುಟಾಣಿ ಡಿವೈಸ್ ಎಲ್ಲಕಡೆ ದೊರಕುವಂತಹಾ 10ರೂ ಬೆಲೆಯ cr ಸಿರೀಸಿನ ಲೀಥಿಯಂ ಕಾಯಿನ್ ಬ್ಯಾಟರಿ ಒಳಗೊಂಡಿರುತ್ತದೆ ಹಾಗಾಗಿ ಮುಂದಿನ ದಿನಗಳ ಮೈಂಟೈನೆನ್ಸ್ ಕೂಡ ಸುಲಭ.

ನಿಮ್ಮ ಮನೆಯಲ್ಲಿ ಶಾಲೆಗೆ ಹೋಗುವ ಪುಟಾಣಿ ಮಕ್ಕಳಿದ್ದರೆ ಈ ಡಿವೈಸನ್ನು ಕೊಂಡುಕೊಳ್ಳಿ ಅದನ್ನು ಮಕ್ಕಳ ಕೈಗೆ ಕೊಡದೆ ಅದನ್ನು ಅವರ ಬ್ಯಾಗಿನಲ್ಲಿ ಕಾಣದಂತೆ ಅಡಗಿಸಿಟ್ಟರೆ ಸಾಕು (ಮಕ್ಕಳ ಕೈಗೆ ಸಿಕ್ಕರೆ ಕಿತ್ತು ಹಾಕುವುದರಿಂದ ಮುಚ್ಚಿಡಬೇಕಾದದ್ದೇ ಸೂಕ್ತ) ಅವರೆಲ್ಲಿ ಇದ್ದಾರೆ ಎಂಬುದನ್ನು ಈ ಟ್ರಾಕರು ನಿರಂತರವಾಗಿ ನಿಮ್ಮ ಮೊಬೈಲಿಗೆ ತಲುಪಿಸುತ್ತಿರುತ್ತದೆ.

ಇದರ ಹೊರತಾದ ವಯಸ್ಕ ಹೆಣ್ಣುಮಕ್ಕಳು ಈ ಡಿವೈಸನ್ನು ತಮ್ಮ ಪರ್ಸಿನ ,ಬ್ಯಾಗಿನ ಕೀ ಬಂಚ್ ನಂತೆಯೂ ಉಪಯೋಗಿಸಬಹುದು ಆಗ ನೀವಿರುವ ಸ್ಥಳದ ಮಾಹಿತಿಯು ನೇರವಾಗಿ ಆ ಡಿವೈಸ್ ಸಂಪರ್ಕದಲ್ಲಿರುವ ನಿಮ್ಮ ಅಪ್ಪನೋ,ಅಣ್ಣನ ಮೊಬೈಲಿಗೋ ನೇರ ಸಂಪರ್ಕದಲ್ಲಿರುತ್ತದೆ ಇಲ್ಲಿ ಇದು ರಕ್ಷಣಾ ಸಾಧನವಾಗಿ ಕೆಲಸ ಮಾಡುತ್ತದೆ ಅದಲ್ಲದೆ ಸಿಂಗಲ್ ಟ್ಯಾಪ್ ನಿಂದಾಗಿ ಯಾವ ಕ್ಷಣದಲ್ಲಿ ಬೇಕಿದ್ದರೂ ವಾಯ್ಸ್ ರೆಕಾರ್ಡ್ ಮಾಡಬಹುದು.

ಇದನ್ನು ನಿಮ್ಮ ಕಾರಿನ ಅಡ್ರೆಸ್ ಗೈಡ್ ಆಗಿಯೂ ಬಳಸಬಹುದು ಮಕ್ಕಳನ್ನು ಮಾರ್ಕೆಟ್ಟಿಗೋ.ಜಾತ್ರೆಗೋ ಕರೆದುಕೊಂಡು ಹೋದಾಗಲೂ ಉಪಯುಕ್ತ.

ಇದನ್ನು ನೀವು ಪರ್ಸಿನಲ್ಲಿ ಹಾಕಿಟ್ಟಿರುವಾಗ ನಿಮ್ಮ ಪರ್ಸ್ ನಿಮ್ಮ ಕೈಗೆ ಸಿಗದೆ ಪರದಾಡಿಸುವಾಗ ನಿಮ್ಮ ಮೊಬೈಲಿನಿಂದ ಈ ಸಾಧನದಲ್ಲಿ ಶಬ್ಧ ಬರುವಂತೆಯೂ ಮಾಡಬಹುದು.

ಇದರ ಹೊರತಾಗಿ ಒಂದು ನಿರ್ದಿಷ್ಟ ಅಳತೆಯನ್ನು ಬಿಟ್ಚು ಹೊರಹೊದರೆ ಸಾಕು ಕೂಗಿಕೊಳ್ಳುವಂತಹಾ ವ್ಯವಸ್ಥೆಯೂ ಇದರಲ್ಲಿದೆ ಈ ಉಪಯೋಗವನ್ನು ಹೇಗೆ ಮಾಡಿಕೊಳ್ಳುತ್ತೀರೋ ಅದು ನಿಮ್ಮ ಇಚ್ಚೆಗೆ ಬಿಟ್ಟದ್ದು.

ಇದೊಂದು ಜಿ.ಪಿ.ಎಸ್ ಟ್ರಾಕರ್ .ಹಾಗೂ ತನ್ನನ್ನ ತಾನು ಮೊಬೈಲಿನಿಂದ ದೂರವಾಗಿಸಿಕೊಂಡಾಗ ಕಿರುಚಿಕೊಳ್ಳುವ ವಸ್ತು ಹಾಗೂ ನಮಗೆ ಬೇಕೆನಿಸಿದಾಗ ಶಬ್ಧ ಮಾಡಿಸಬಹುದಾದ ವಸ್ತು ಹಾಗೂ ಸಮಯ ಬಂದಾಗ ರೆಕಾರ್ಡರ್ ಅಷ್ಟೇ!

 

ಇದನ್ನು ಅಂಡ್ರಾಯ್ಡ್ ಹಾಗೂ ಆಪಲ್ ಎರಡೂ ಕಂಪನಿಯ ಮೊಬೈಲ್ ಬಳಕೆದಾರರು ಬಳಸಬಹುದು ಮೊದಲಿಗೆ ಐ-ಟ್ಯಾಗ್ ಡಿವೈಸ್ ಆನ್ ಮಾಡಿದ ನಂತರ ಮೊಬೈಲಿನಲ್ಲಿ ಬ್ಲೂ-ಟೂತ್ ಸೆಟ್ಟಿಂಗ್ಸ್ ಗೆ ಹೋದರೆ ಸಾಕು ನಂತರ ಈ ಡಿವೈಸ್ ನಿರಂತರವಾಗಿ ನಾನಿರುವ ಸ್ಥಳವನ್ನು ಮೊಬೈಲಿನಲ್ಲಿ ತೊರಿಸುತ್ತಿರುತ್ತದೆ. ಹಾಗೂ ಹೆಚ್ಚಿನ ವಿಚಾರ ಕೆಲಸಕ್ಕಾಗಿ ಇದರ ಜೊತೆಗೆ ಒಂದು ಆಪ್ ಅಡ್ರೆಸ್ ಕೂಡ ಸಿಗುತ್ತದೆ ಡೌನ್ ಲೋಡ್ ಮಾಡಿಕೊಳ್ಳಿ.

ಟೋಟಲಿ ಮನೆಮಕ್ಕಳ ಸುರಕ್ಷತೆಗೆ ಈ ಡಿವೈಸಿನಿಂದ ಅನುಕೂಲವಿದೆ ಅಷ್ಟೇ.ಕೊಳ್ಳುವುದೂ ಬಿಡುವುದೂ ನಿಮಗೆ ಬಿಟ್ಟದ್ದು .ನೀವು ಕೇಳಬಹುದಾದ ಪ್ರಶ್ನೆ ಏನೆಂದರೆ ಮೊಬೈಲ್ ಈ ಕೆಲಸವನ್ನು ಮಾಡುವುದಿಲ್ಲವೇ ಎಂದು .ಹೌದು ಮಾಡುತ್ತದೆ ಆದರೆ ತನಗೆ ಸಂಭಂದಿಸಿದವರ ಜಿಪಿಎಸ್ ನಿಗಾ ಇಡುವ ಕೆಲಸವನ್ನು ಆಪಲ್ ಮೊಬೈಲ್ ಮಾತ್ರ ಮಾಡುತ್ತದೆಯೇ ಹೊರತು ಬೇರಾವುದೇ ಅಂಡ್ರಾಯ್ಡ್ ಮೊಬೈಲ್ ಈ ವಿಚಾರದತ್ತ ಗಮನ ಹರಿಸಿಲ್ಲ ಅದಲ್ಲದೆ ಮೊಬೈಲ್ ಆಫ್ ಮಾಡಿದರೆಂದರೆ ಯಾವ ಜಿಪಿಎಸ್ ಕೂಡ ಕೆಲಸ ಮಾಡುವುದಿಲ್ಲ .ಹಾಗಾಗಿ ಈ ಡಿವೈಸ್ ಅನುಕೂಲಕರ.

ಹಾಗೂ ಸದ್ಯಕ್ಕೆ ಇದನ್ನು ಬ್ಯಾನ್ ಮಾಡಬೇಕೆಂಬ ಹೇಳಿಕೆ ಕೇಳಿಬಂದಿದೆ ಹಾಗಾಗಿ ಮಾರುಕಟ್ಟೆಯಲ್ಲಿ ಇದಕ್ಕೆ ಬದಲಾಗಿ ಬೇರೊಂದು ಸಿಗಬಹುದು.

ಸಂಗ್ರಹ:ವಿವೇಕ್​​ ಕುದರಿಮಠ

 

Please follow and like us:
0
http://bp9news.com/wp-content/uploads/2017/08/20431644_1980622405492691_726095727025961426_n.jpghttp://bp9news.com/wp-content/uploads/2017/08/20431644_1980622405492691_726095727025961426_n-150x150.jpgBP9 Bureauತಂತ್ರಜ್ಞಾನ  ಬೆಂಗಳೂರು: ‘ಐ-ಟ್ಯಾಗ್’ ಎನ್ನುವ ಹೆಸರಿನಿಂದ ಒಂದು ಮೊಬೈಲ್ ಸಂಭಂದಿತ ಗ್ಯಾಜೆಟ್ ಬಂದಿದೆ ,ಇದರ ಬೆಲೆಯೂ ಕೂಡ ಅತ್ಯಲ್ಪ ಅಂದರೆ 300 ರೂಪಾಯಿಗಳಿಂದ ಶುರುವಾಗುವ ಈ ಎಲೆಕ್ಟ್ರಾನಿಕ್ ವಸ್ತುವಿನ ಶ್ರೇಣಿಯ ಗರಿಷ್ಠ ಮೊತ್ತ 3000ದ ವರೆಗೂ ಇದೆ. ನೀವು ಕೊಡುವ ಹಣದ ಮೊತ್ತ ಹೆಚ್ಚಾದಂತೆಲ್ಲಾ ವಸ್ತುವಿನ ಗುಣಮಟ್ಟ ಹೆಚ್ಚಿರುತ್ತದೆ ಎಂಬ ಪುರಾತನ ಮೂಢನಂಬಿಕೆಯಿಂದ ಹೊರಬನ್ನಿ ಏಕೆಂದರೆ ಚಿಕ್ಕ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಬೆಲೆ ಹೆಚ್ಚಿದಂತೆಲ್ಲಾ ಅದರ ಹೊರನೋಟ ಅಂದರೆ ಬಾಡಿಯ ಗುಣಮಟ್ಟ (ಕಟಿಂಗ್...Kannada News Portal