ಬೆಂಗಳೂರು : ರೈಲು ಬೋಗಿಗಳಲ್ಲಿ ನಿಗದಿಗಿಂತಲೂ ಹೆಚ್ಚು ತೂಕದ ಲಗೇಜನ್ನು ಒಯ್ದರೆ, ಲಗೇಜು ಶುಲ್ಕಕ್ಕಿಂತ ಆರು ಪಟ್ಟು ಹೆಚ್ಚು ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಪ್ರಯಾಣಿಕರು ಭಾರಿ ಪ್ರಮಾಣದ ಸರಕುಗಳನ್ನು ಬೋಗಿಗಳಲ್ಲಿ ಸಾಗಿಸುತ್ತಿದ್ದಾರೆ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಈಚೆಗೆ ಹೆಚ್ಚು ಬರುತ್ತಿವೆ ಎಂದು ರೈಲ್ವೆ ಹೇಳಿದೆ. ‘ಬೋಗಿಗಳಲ್ಲಿ ನಿಗದಿಗಿಂತ ಹೆಚ್ಚು ತೂಕದ ಲಗೇಜನ್ನು ಒಯ್ಯಬಾರದು ಎಂಬ ನಿಯಮ 30 ವರ್ಷಗಳಿಂದ ಜಾರಿಯಲ್ಲಿದೆ. ಆದರೆ ಅದನ್ನು ನಾವು ಈಗ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರುತ್ತಿದ್ದೇವೆ’ ಎಂದು ರೈಲ್ವೆ ಮಂಡಳಿಯ ಮಾಹಿತಿ ಮತ್ತು ಪ್ರಚಾರ ನಿರ್ದೇಶಕ ವೇದ ಪ್ರಕಾಶ್ ಹೇಳಿದ್ದಾರೆ.

ವಿವಿಧ ದರ್ಜೆಯ ಬೋಗಿಗಳಲ್ಲಿ ಸಾಗಿಸಬಹುದಾದ ಲಗೇಜಿನ ತೂಕದ ಮಿತಿ ಬೇರೆ–ಬೇರೆಯಾಗಿರುತ್ತದೆ. ಸ್ಲೀಪರ್‌ ಕ್ಲಾಸ್ ಬೋಗಿಯ ಪ್ರಯಾಣಿಕನೊಬ್ಬ ತನ್ನೊಂದಿಗೆ ಬೋಗಿಯಲ್ಲಿ 40 ಕೆ.ಜಿ. ತೂಕದಷ್ಟು ಲಗೇಜನ್ನು ಉಚಿತವಾಗಿ ಸಾಗಿಸಬಹುದು. ಶುಲ್ಕ ಪಾವತಿಸಿ ಹೆಚ್ಚುವರಿ 40 ಕೆ.ಜಿ. ತೂಕದಷ್ಟು ಲಗೇಜು ಸಾಗಿಸಲು ಅವಕಾಶವಿದೆ. ದ್ವಿತೀಯ ದರ್ಜೆ ಬೋಗಿಯ ಪ್ರಯಾಣಿಕರಿಗೆ ಈ ಮಿತಿ ಕ್ರಮವಾಗಿ 35 ಕೆ.ಜಿ. ಮತ್ತು 35 ಕೆ.ಜಿ. ಇದೆ. ಅದಕ್ಕಿಂತಲೂ ಹೆಚ್ಚು ಲಗೇಜು ಇದ್ದರೆ, ಲಗೇಜು ಬೋಗಿಯಲ್ಲಿ ಸಾಗಿಸಬೇಕು.

ಹವಾನಿಯಂತ್ರಿತ ಪ್ರಥಮ ದರ್ಜೆ ಬೋಗಿ ಪ್ರಯಾಣಿಕರು ತಮ್ಮೊಂದಿಗೆ ಉಚಿತವಾಗಿ 70 ಕೆ.ಜಿ.ಯಷ್ಟು ಲಗೇಜು ಸಾಗಿಸಬಹುದು. ಶುಲ್ಕ ಪಾವತಿಸಿ ಇನ್ನೂ 80 ಕೆ.ಜಿ.ಯಷ್ಟು ಲಗೇಜನ್ನು ಸಾಗಿಸಬಹುದು. ಅದಕ್ಕಿಂತ ಹೆಚ್ಚು ಲಗೇಜು ಇದ್ದರೆ ಶುಲ್ಕ ಪಾವತಿಸಿ ಲಗೇಜು ಬೋಗಿಯಲ್ಲಿ ಸಾಗಿಸಬೇಕು. ರೈಲು ಬೋಗಿಗಳಲ್ಲಿ ಸಾಗಿಸಬಹುದಾದ ಟ್ರಂಕ್, ಸೂಟ್‌ಕೇಸ್ ಮತ್ತು ಬಾಕ್ಸ್‌ಗಳ ಗಾತ್ರಕ್ಕೂ ಮಿತಿ ಹೇರಲಾಗಿದೆ. ಅವು ಮಿತಿಗಿಂತ ದೊಡ್ಡದಾಗಿದ್ದರೆ, ಲಗೇಜು ಬೋಗಿಯಲ್ಲಿ ಸಾಗಿಸಬೇಕಾಗುತ್ತದೆ.

‘ವಿಮಾನ ಪ್ರಯಾಣಿಕರೆಲ್ಲರ ಲಗೇಜನ್ನು ಪರಿಶೀಲಿಸುವಂತೆ, ರೈಲು ಪ್ರಯಾಣಿಕರ ಲಗೇಜನ್ನು ಪರಿಶೀಲಿಸುವ ವ್ಯವಸ್ಥೆ ಜಾರಿಯಲ್ಲಿಲ್ಲ. ಬೋಗಿಯೊಳಗೆ ಪರಿಶೀಲನೆ ನಡೆಸಿದಾಗ ಮಿತಿಗಿಂತ ಹೆಚ್ಚು ಲಗೇಜು ಇದ್ದರೆ ದಂಡ ವಿಧಿಸಲಾಗುತ್ತದೆ. ಜೂನ್‌ 1ರಿಂದ 6ವರೆಗೆ ಹಲವೆಡೆ ಕಾರ್ಯಾಚರಣೆ ನಡೆಸಲಾಗಿತ್ತು’ ಎಂದು ವೇದ ಪ್ರಕಾಶ್ ಮಾಹಿತಿ ನೀಡಿದ್ದಾರೆ.

Please follow and like us:
0
http://bp9news.com/wp-content/uploads/2018/06/railways_759-1.jpghttp://bp9news.com/wp-content/uploads/2018/06/railways_759-1-150x150.jpgPolitical Bureauಅಂಕಣಪ್ರಮುಖರಾಷ್ಟ್ರೀಯif you do not obey the penalty !!!,Train passengers awake !!! : The new rule comesಬೆಂಗಳೂರು : ರೈಲು ಬೋಗಿಗಳಲ್ಲಿ ನಿಗದಿಗಿಂತಲೂ ಹೆಚ್ಚು ತೂಕದ ಲಗೇಜನ್ನು ಒಯ್ದರೆ, ಲಗೇಜು ಶುಲ್ಕಕ್ಕಿಂತ ಆರು ಪಟ್ಟು ಹೆಚ್ಚು ಮೊತ್ತದ ದಂಡ ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಪ್ರಯಾಣಿಕರು ಭಾರಿ ಪ್ರಮಾಣದ ಸರಕುಗಳನ್ನು ಬೋಗಿಗಳಲ್ಲಿ ಸಾಗಿಸುತ್ತಿದ್ದಾರೆ. ಇದರಿಂದ ಇತರ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಈಚೆಗೆ ಹೆಚ್ಚು ಬರುತ್ತಿವೆ ಎಂದು ರೈಲ್ವೆ ಹೇಳಿದೆ. ‘ಬೋಗಿಗಳಲ್ಲಿ ನಿಗದಿಗಿಂತ ಹೆಚ್ಚು ತೂಕದ ಲಗೇಜನ್ನು ಒಯ್ಯಬಾರದು ಎಂಬ ನಿಯಮ 30 ವರ್ಷಗಳಿಂದ ಜಾರಿಯಲ್ಲಿದೆ....Kannada News Portal