ಕೋಲ್ಕತ: ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದಿರುವವರು ಎಲ್ಲೂ ಗೆಲುವು ಸಾಧಿಸಿಲ್ಲ. ತೃಣಮೂಲ ಕಾಂಗ್ರೆಸ್​ ಅನ್ನು ಪಶ್ಚಿಮ ಬಂಗಾಳದಿಂದ ಕಿತ್ತೊಗೆಯುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಕೋಲ್ಕತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಪ್ರತಿಭಟನೆಯನ್ನು ಪಶ್ವಿಮ ಬಂಗಾಳದ ಜನತೆ ವೀಕ್ಷಿಸಬಾರದು ಎಂಬ ಉದ್ದೇಶದಿಂದ ಮಾದ್ಯಮಗಳನ್ನು ಹತ್ತಿಕ್ಕುವ ಕೆಲಸ ಬ್ಯಾನರ್ಜಿ ಸರಕಾರ ಮಾಡುತ್ತಿದೆ. ಪ್ರಜಾಪ್ರಭುತ್ವದ ವಿರುದ್ಧ ಸರಕಾರ ನಡೆಯುತ್ತಿದೆ. ಆದರೆ ದೇಶದಲ್ಲಿ ಈವರೆಗೆ ಪ್ರಜಾಪ್ರಭುತ್ವವನ್ನು ಹತ್ತಿಕ್ಕಲು ಯತ್ನಿಸಿದವರು ಯಾರೂ ಗೆಲುವು ಸಾಧಿಸಿಲ್ಲ ಎಂದರು.

ಬಿಜೆಪಿ ಎಂದಿಗೂ ಬಂಗಾಳಿಗಳನ್ನು ವಿರೋಧಿಸಿಲ್ಲ. ಬಿಜೆಪಿ ಬಂಗ್ಲಾ ವಿರೋಧಿಯೂ ಅಲ್ಲ. ಆದರೆ ಬಿಜೆಪಿ ಮಮತಾ ವಿರೋಧಿ. ಬಿಜೆಪಿ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿ ಸ್ವತಃ ಪಶ್ಚಿಮ ಬಂಗಾಳದವರೇ ಆಗಿದ್ದರು. ಹೀಗಿರುವಾಗ ಬಿಜೆಪಿ ಬಂಗಾಳದ ವಿರುದ್ಧ ಎಂಬುದು ಹೇಗಾಗುತ್ತದೆ ಎಂದು ಅಮಿತ್ ಶಾ ಪ್ರಶ್ನಿಸಿದರು.

‘ಯಾವುದೇ ಕಾರಣಕ್ಕೂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್​ಸಿ) ನಿಲ್ಲುವುದಿಲ್ಲ. ಭಾರತಕ್ಕೆ ಅಕ್ರಮವಾಗಿ ನುಸುಳಿದ ಬಾಂಗ್ಲಾದೇಶಿಗರು, ರಾಷ್ಟ್ರೀಯ ಭದ್ರತೆಗೆ ತೊಂದರೆ ಮಾಡುತ್ತಿದ್ದಾರೆ. ಜನರ ಸುರಕ್ಷತೆಯ ಹೊಣೆಗಾರಿಕೆ ಸರಕಾರದ ಮೇಲಿದ್ದು, ಇದಕ್ಕಾಗಿ ಎಷ್ಟೇ ವಿರೋಧ ವ್ಯಕ್ತಪಡಿಸಿದರೂ, ರಾಷ್ಟ್ರೀಯ ಪೌರತ್ವ ನೋಂದಣಿ ನಿಲ್ಲುವುದಿಲ್ಲ. ಮಮತಾ ಬ್ಯಾನರ್ಜಿ ಎನ್ಆರ್​ಸಿಯನ್ನು ವಿರೋಧಿಸಿದ ಮಾತ್ರಕ್ಕೆ ನೋಂದಣಿ ನಿಲ್ಲುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಮಮತಾ ಬ್ಯಾನರ್ಜಿ ಅವರು, ರಾಷ್ಟ್ರೀಯ ಭದ್ರತೆ, ಜನರ ಸುರಕ್ಷತೆ ಮುಖ್ಯವೋ ಅಥವಾ ಮತಬ್ಯಾಂಕ್ಗೆ ಅವರ ಆದ್ಯತೆಯೋ ಎಂಬುದನ್ನು ಸ್ಪಷ್ಟಪಡಿಸಬೇಕಿದೆ ಎಂದು ಟೀಕಿಸಿದರು.

ತೃಣಮೂಲ ಕಾಂಗ್ರೆಸ್ ಬೆಂಬಲಗರು ಬಂಗಾಳದ ನಿರಾಶ್ರಿತರನ್ನೂ ವಾಪಾಸು ಕಳಿಸಲಾಗುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಎನ್ಆರ್​ಸಿಯನ್ನು ನಿರಾಶ್ರಿತರಿಗೆ ಯಾವುದೇ ಸಮಸ್ಯೆಯಾಗದು . ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತದಿಂದ ಮಾತ್ರ ಬಂಗಾಳದ ಅಭಿವೃದ್ಧಿ ಸಾಧ್ಯ. ಈ ಹಿಂದೆ ರವೀಂದ್ರನಾಥ್ ಠಾಗೋರರ ಸಂಗೀತ ಕೇಳುತ್ತಿದ್ದ ಬಂಗಾಳದಲ್ಲಿ ಇದೀಗ ಬಾಂಬ್ ಸಿಡಿಯುವ ಸದ್ದು ಮಾತ್ರ ಕೇಳುತ್ತಿದೆ. ಪಶ್ಚಿಮ ಬಂಗಾಳಕ್ಕೆ ನುಸುಳುಕೋರರನ್ನು ತಡೆಯದೇ ಹೋದಲ್ಲಿ ಭದ್ರತೆ ಕಷ್ಟ ಸಾಧ್ಯ. ಎನ್ಆರ್​ಸಿ ಎಂದರೆ, ನುಸುಳುವಿಕೆಯನ್ನು ತಡೆಯುವುದೇ ಹೊರತು ಬೇರೆಯಲ್ಲ. ಪಾಕಿಸ್ತಾನ, ಅಫಘಾನಿಸ್ತಾನ ಹಾಗ ಬಾಂಗ್ಲಾದೇಶದ ನಿರಾಶ್ರಿತರ ಬಗ್ಗೆ ತೃಣಮೂಲ ಕಾಂಗ್ರೆಸ್ ತಮ್ಮ ಸ್ಪಷ್ಟ ನಿರ್ಧಾರ ತಿಳಿಸಬೇಕು ಎಂದು ಅಮಿತ್ ಶಾ ಆಗ್ರಹಿಸಿದ್ದಾರೆ.

Please follow and like us:
0
http://bp9news.com/wp-content/uploads/2018/08/COLLAGE-FINAL.jpghttp://bp9news.com/wp-content/uploads/2018/08/COLLAGE-FINAL-150x150.jpgPolitical Bureauಪ್ರಮುಖರಾಜಕೀಯರಾಷ್ಟ್ರೀಯTrinamool Congress to break away from West Bengal: Amit Shah !!!ಕೋಲ್ಕತ: ಪ್ರಜಾಪ್ರಭುತ್ವದ ವಿರುದ್ಧವಾಗಿ ನಡೆದಿರುವವರು ಎಲ್ಲೂ ಗೆಲುವು ಸಾಧಿಸಿಲ್ಲ. ತೃಣಮೂಲ ಕಾಂಗ್ರೆಸ್​ ಅನ್ನು ಪಶ್ಚಿಮ ಬಂಗಾಳದಿಂದ ಕಿತ್ತೊಗೆಯುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಕೋಲ್ಕತದಲ್ಲಿ ನಡೆದ ಬಹಿರಂಗ ಸಮಾವೇಶದಲ್ಲಿ ತೃಣಮೂಲ ಕಾಂಗ್ರೆಸ್ ಹಾಗೂ ಪಶ್ಚಿಮ ಬಂಗಾಳಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ನಡೆಸಿದರು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location) ? window.parent.location:...Kannada News Portal