ಬೆಂಗಳೂರು: ಕರ್ನಾಟಕದಿಂದ ತಿರುಪತಿಗೆ ದರ್ಶನಕ್ಕೆಂದು ತೆರಳಿದ್ದ ಟೆಂಪೋ ಟ್ರಾವಲರ್ ( ಕೆ ಎ 45 – 7232) ಅಪಘಾತಕ್ಕೀಡಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ.


ತಿರುಪತಿ ದರ್ಶನಕ್ಕೆ ತೆರಳಿದ್ದ ಸುಮಾರು 15 ಮಂದಿ ಪ್ರಯಾಣಿಕರಿದ್ದ ಟೆಂಪೋ ಹತ್ತುವಾಗ ಆಯತಪ್ಪಿ ನೆಲಕ್ಕೆ ಉರುಳಿದೆ.  ಪರಿಣಾಮ ಒಳಗೆ ಕುಳಿತಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಟೆಂಪೋ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲಾ ಕೆ.ಆರ್. ನಗರದ ಸಮೀಪದವರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಷಯ ತಿಳಿದ ಕೂಡಲೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಇನ್ನು ಟೆಂಪೋದಲ್ಲಿರುವವರ ಹೆಸರು ವಿಳಾಸ ಪತ್ತೆಯಾಗಿಲ್ಲ. ಸದ್ಯ ವಾಹನ ನೋಂದಣಿ ಸಂಖ್ಯೆ ಆಧಾರದ ಮೇಲೆ ಈ ಟಿ ಟಿ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿಗೆ ಸೇರಿದ್ದು ಎಂದು ತಿಳಿದು ಬಂದಿದ್ದು, ಹೆಚ್ಚಿನ ಮಾಹಿತಿಗಾಗಿ ತಿರುಪತಿ ಪೊಲೀಸರು ರಾಜ್ಯದ ಪೊಲೀಸರನ್ನ ಸಂಪರ್ಕಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Please follow and like us:
0
http://bp9news.com/wp-content/uploads/2018/06/TT-accident-in-Carnatic-in-Tirupati-Karnatakada-Miditha.jpeghttp://bp9news.com/wp-content/uploads/2018/06/TT-accident-in-Carnatic-in-Tirupati-Karnatakada-Miditha-150x150.jpegBP9 Bureauಪ್ರಮುಖಮೈಸೂರುರಾಷ್ಟ್ರೀಯTT accident in Carnatic in Tirupatiಬೆಂಗಳೂರು: ಕರ್ನಾಟಕದಿಂದ ತಿರುಪತಿಗೆ ದರ್ಶನಕ್ಕೆಂದು ತೆರಳಿದ್ದ ಟೆಂಪೋ ಟ್ರಾವಲರ್ ( ಕೆ ಎ 45 - 7232) ಅಪಘಾತಕ್ಕೀಡಾಗಿರುವ ಘಟನೆ ಶುಕ್ರವಾರ ಸಂಭವಿಸಿದೆ.  ತಿರುಪತಿ ದರ್ಶನಕ್ಕೆ ತೆರಳಿದ್ದ ಸುಮಾರು 15 ಮಂದಿ ಪ್ರಯಾಣಿಕರಿದ್ದ ಟೆಂಪೋ ಹತ್ತುವಾಗ ಆಯತಪ್ಪಿ ನೆಲಕ್ಕೆ ಉರುಳಿದೆ.  ಪರಿಣಾಮ ಒಳಗೆ ಕುಳಿತಿದ್ದ ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಟೆಂಪೋ ರಸ್ತೆಯಲ್ಲೇ ಪಲ್ಟಿಯಾಗಿದೆ. ಈ ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲಾ ಕೆ.ಆರ್. ನಗರದ ಸಮೀಪದವರು ಎಂದು ಪೊಲೀಸರು ತಿಳಿಸಿದ್ದಾರೆ. var...Kannada News Portal