ಬೆಂಗಳೂರು : ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ, ಹೈದ್ರಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ಮುಖಂಡ ಎಂ ಬಿ ಪಾಟೀಲ ಮನೆಗೆ ಇಂದು ಬಿಜೆಪಿಯ ಇಬ್ಬರು ಶಾಸಕರ ಭೇಟಿ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.

ಶಾಸಕರಾದ ಪ್ರಕಾಶ್ ಹುಕ್ಕೇರಿ, ಶಿವರಾಜ್ ಪಾಟೀಲ ಎಂ ಬಿ ಪಾಟೀಲರ ಮನೆಗೆ ಭೇಟಿ ನೀಡಿ ಅವರ ಬಳಿ ಹಲವು ವಿಷಯಗಳನ್ನು ಚರ್ಚಿಸಿದ್ದಾರೆ. ಮಾತು ಕತೆ ಬಳಿಕ ಸುದ್ದಿಗಾರರ ಜೊತೆ ಮಾತನಮಾಡಿದ ಇಬ್ಬರು, ನಾವು ಯಾವುದೇ ರಾಜಕೀಯ ವಿಷಯಗಳನ್ನ ಚರ್ಚೆ ಮಾಡಿಲ್ಲ. ನಮ್ಮ ಈ ಭೇಟಿ ಕಾಂಗ್ರೆಸ್ ಮುಖಂಡನ ಭೇಟಿ ಅಲ್ಲಾ, ಬದಲಿಗೆ ನಮ್ಮ ಸಮಾಜದ ಮುಖಂಡರನ ಉಭಯ ಕುಶಲೋಪರಿಯ ಭೇಟಿ. ಇದರಲ್ಲಿ ರಾಜಕೀಯ ಬೆರಸುವುದು ಬೇಡ ಎಂದರು.

ಆದರೆ ಮೇಲು ನೋಟಕ್ಕೆ ಮಾಧ್ಯಮದ ಮತ್ತು ರಾಜ್ಯದ ಜನರಲ್ಲಿ ಕುತೂಹಲ ಕೆರಳಿಸಿದೆ. ಈ ಮಧ್ಯೆ ಭಿನ್ನಮತ ಸ್ಫೋಟದ ನಡುವೆಯೂ ಸಿದ್ದರಾಮಯ್ಯ ಬದಾಮಿಯಲ್ಲಿ ಬೀಡು ಬಿಟ್ಟಿರುವುದು ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಮತ್ತಷ್ಟು ಪುಷ್ಠಿನೀಡುತ್ತಿದೆ. ಎಂ ಬಿ ಪಾಟೀಲರ ಜೊತೆ 18 ಮಂದಿ ಶಾಸಕರು ಇದ್ದಾರೆ ಎಂಬ ಮಾತನ್ನು ಸ್ವತಃ ಪಾಟೀಲರೇ ಮಾಧ್ಯಮಗಳ ಮುಂದೆ ಹೇಳಿರುವುದಕ್ಕೂ ಮತ್ತೆ ಬಿಜೆಪಿಯ ಈ ಇಬ್ಬರು ಶಾಸಕರ ಭೇಟಿ ಎರಡನ್ನೂ ತೂಗಿ ನೋಡಿದರೇ ಕಾಂಗ್ರೆಸ್ನಲ್ಲಿ ಅತೃಪ್ತರಾಗಿರುವ ಗುಂಪನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಅದಕ್ಕೆ ಬೇಕಾದ ರಣತಂತ್ರವನ್ನು ರೂಪಿಸುತ್ತಿದೆ ಎಂಬ ಅನುಮಾನಗಳು ಕಾಡತೊಡಗಿವೆ.

ಈ ಪ್ರಯತ್ನ ತಕ್ಷಣಕ್ಕೆ ಫಲ ಕೊಡದೇ ಇದ್ದರೂ ಮುಂದೊಂದು ದಿನ ಅಂದ್ರೆ ಲೋಕಸಭೆ ಚುನಾವಣೆ ಮುಗಿದ ತಕ್ಷಣ ಸಮ್ಮಿಶ್ರ ಸರ್ಕಾರಕ್ಕೆ ಗಂಡಾಂತರ ಕಾದಿದೆಯೇ ಎಂಬ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇವೆಲ್ಲಕ್ಕೂ ಬ್ರೇಕ್ ಹಾಕಲು, ಕಾಂಗ್ರೆಸ್ ಎಂ ಬಿ ಪಾಟೀಲರು ಹಾಗೂ ಇತರರನ್ನು 2 ನೇ ಬಾರಿಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಸ್ಥಾನ ನೀಡಿ, ಉಳಿದವರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡಿ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿರುವ ಮುಳ್ಳುಗಳನ್ನು ಕಿತ್ತೊಗೆಯ ಬೇಕಾದ ಅನಿವಾರ್ಯತೆ ರಾಹುಲ್ ಗಾಂಧಿ ಮುಂದಿದೆ ಎಂದು ವಿಶ್ಲೇಷಿಸಲಾಗಿದೆ.

Please follow and like us:
0
http://bp9news.com/wp-content/uploads/2017/09/download-534.jpghttp://bp9news.com/wp-content/uploads/2017/09/download-534-150x150.jpgPolitical Bureauಪ್ರಮುಖರಾಜಕೀಯTwo BJP MLAs visit MB B Patil's house Lama is basing to climb to the throne!?!var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಬೆಂಗಳೂರು : ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಗಾರ, ಹೈದ್ರಬಾದ್ ಕರ್ನಾಟಕ ಭಾಗದ ಕಾಂಗ್ರೆಸ್ ಮುಖಂಡ ಎಂ ಬಿ ಪಾಟೀಲ ಮನೆಗೆ ಇಂದು ಬಿಜೆಪಿಯ ಇಬ್ಬರು ಶಾಸಕರ ಭೇಟಿ ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ. ಶಾಸಕರಾದ ಪ್ರಕಾಶ್ ಹುಕ್ಕೇರಿ, ಶಿವರಾಜ್ ಪಾಟೀಲ ಎಂ ಬಿ ಪಾಟೀಲರ ಮನೆಗೆ...Kannada News Portal