ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಲಪ್ಪನವರಿಗೆ ಟಿಕೆಟ್​​ ನೀಡಿದ ನಂತರದ ಬೆಳವಣಿಗೆಗಳು ಕುತೂಹಲ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಬೇಳೂರು ಬೆಂಬಲಿಗರು ಅಚಾನಕ್​​ಆಗಿ ಹಾಲಪ್ಪನವರೊಂದಿಗೆ ಗುರುತಿಸಿಕೊಂಡಿರುವುದೇ ಇದಕ್ಕೆಲ್ಲ ಕಾರಣವಾಗಿದೆ.ಇದರಿಂದಾಗಿ ಬೇಳೂರು ಬಲ ಕುಸಿದಂತಾಗಿದ್ದು, ಈಗಾಗಲೇ ಕಾಂಗ್ರೆಸ್’ನ ಹಿರಿಯ ನಾಯಕರ ಜೊತೆ ಬೇಳೂರು ಮಾತನಾಡಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆಗಳಿಂದ ಬೇಳೂರು ಕಾಂಗ್ರೆಸ್​​ ಸೇರಿ ಕಾಗೋಡು ಗೆಲುವಿಗೆ ಸಹಕರಿಸುತ್ತಾರೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ರಾಜಕೀಯವಲಯದಲ್ಲಿ ಕೇಳಿ ಬರುತ್ತಿವೆ.

ಹಾಲಪ್ಪಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೇ ಟಿಕೆಟ್ ಆಕಾಂಕ್ಷಿಯಾಗಿದ್ದ ಬೇಳೂರು ಗೋಪಾಲಕೃಷ್ಣ ಸಹಜವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಬೇಳೂರು ಬೆಂಬಲಿಗರು ಬಿಜೆಪಿಯ ಪ್ರಚಾರ ವಾಹನದ ಮೇಲೆ ಕಲ್ಲುತೂರಾಟ ನಡೆಸಿ, ಸಾಗರದಲ್ಲಿ ಪ್ರತಿಭಟನೆ ನಡೆಸಿದ್ದರು. ಹಾಲಪ್ಪ ಬೆಂಬಲಿಗರ ಮೇಲೆ ಹಲ್ಲೆಯೂ ನಡೆದಿತ್ತು.

ನಂತರ ಮಂಗಳವಾರದಂದು ಸಾಗರದಲ್ಲಿ ಬೇಳೂರು ಬೆಂಬಲಿಗರ ಸಭೆಯೂ ನಡೆಯಿತು. ಸಾಕಷ್ಟು ಜನ ಬಿಜೆಪಿ ಪದಾಧಿಕಾರಿಗಳೂ ಸಭೆಯಲ್ಲಿ ಭಾಗವಹಿಸಿದ್ದರು. ನಂತರ ಬೇಳೂರು ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಘೋಷಿಸಿದ್ದರು.

ಇತ್ತ ಶುಕ್ರವಾರ ಹೆಚ್.ಹಾಲಪ್ಪ ಸಾವಿರಾರು ಬೆಂಬಲಿಗರೊಂದಿಗೆ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಸಲ್ಲಿಕೆ ಸಮಯದಲ್ಲಿ, ಹಿಂದೆ  ಬೇಳೂರು ಜೊತೆ ಗುರುತಿಸಿಕೊಂಡಿದ್ದ ಬಿಜೆಪಿ ನಗರಾಧ್ಯಕ್ಚ ಆರ್.ಶ್ರೀನಿವಾಸ್ ಹಾಲಪ್ಪ ಅವರ ಜೊತೆ ಇದ್ದದ್ದು ವಿಶೇಷವಾಗಿತ್ತು.

ನಂತರ, ಸಂಜೆ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ, ಬೇಳೂರು ಜೊತೆ ಗುರುತಿಸಿಕೊಂಡು ಅಸಮಾಧಾನ ಹೊರಹಾಕಿದ್ದ ಪಕ್ಷದ ಪದಾಧಿಕಾರಿಗಳು  ಹಾಲಪ್ಪನವರ ಜೊತೆ ಮಾತನಾಡಿ, ಪಕ್ಷಕ್ಕಾಗಿ ಹಾಲಪ್ಪನವರ ಗೆಲುವಿಗೆ ಕೆಲಸ ಮಾಡುವುದಾಗಿ,ಹಾಲಪ್ಪ ಕಡೆ ವಾಲಿದ್ದಾರೆ. ಬೇಳೂರುಗೆ ಟಿಕೆಟ್ ಸಿಗಲಿಲ್ಲವೆಂಬ ಅಸಮಾಧಾನದಿಂದ ಹಾಲಪ್ಪ ಬೆಂಬಲಿಗ ವಿನಾಯಕ್ ಮೇಲೆ ಹಲ್ಲೆ ನಡೆಸಿದ್ದ ಆರೋಪ ಹೊತ್ತಿದ್ದ ಮುಖಂಡ ಮೋಹನ್ ಈಗ ನ್ಯಾಯಾಲಯದಿಂದ  ಜಾಮೀನು ಪಡಿದಿದ್ದಾರೆ. ಅವರು ಕೂಡಾ ಹಾಲಪ್ಪ ಜೊತೆ ಮಾತುಕತೆ ನಡೆಸಿದ್ದಾರೆಂಬುದು ಆಶ್ಚರ್ಯಕರವಾಗಿದೆ.

ಗುರುವಾರದಂದು ಪತ್ರಿಕಾಗೋಷ್ಠಿ ನಡೆಸಿದ್ದ ಬೇಳೂರು ಗೋಪಾಲಕೃಷ್ಣ, ಯಾಡಿಯೂರಪ್ಪನರ ವಿರುದ್ಧ ಗರಂ ಆಗಿ ಮಾತನಾಡಿದ್ದರು. ಯಾಡಿಯೂರಪ್ಪನವರು ಮತ್ತು ಶೋಭಾ ಕರೆಂದ್ಲಾಜೆ ಅವರು ಸೂಟ್’ಕೇಸ್ ಪಡೆದು ಹಾಲಪ್ಪಗೆ ಟಿಕೆಟ್ ನೀಡಿದ್ದಾರೆ, ಸಿಡಿ ತೋರಿಸಿ ಟಿಕೆಟ್​​​ ಪಡೆದಿದ್ದಾರೆ ಎಂಬ ಆರೋಪಗಳನ್ನು ಮಾಡಿದ್ದರು.

ಇದರಿಂದ ನೊಂದ ಬೇಳೂರು ಬೆಂಬಲಿಗರೂ  ಆಗಿದ್ದ ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರವೀಶ, ಶರಾವತೀ, ಕಸ್ತೂರಿ,  ನಾಗರತ್ನ, ನಾಗರಾಜ, ನಗರಸಭಾ ಸದಸ್ಯ ಸಂತೋಷ ಶೇಠ್, ಅರವಿಂದ ಸೇರಿದಂತೆ ಪಕ್ಷದ ಹಲವಾರು ಪದಾಧಿಕಾರಿಗಳು  ಹಾಲಪ್ಪ ಜೊತೆ ಸೇರಿ ಬಿಜೆಪಿ ಪಕ್ಷದ ಪಡಸಾಲೆಗೆ ಮರಳಿದ್ದಾರೆ.

Please follow and like us:
0
http://bp9news.com/wp-content/uploads/2018/04/collage-36.jpghttp://bp9news.com/wp-content/uploads/2018/04/collage-36-150x150.jpgBP9 Bureauಪ್ರಮುಖರಾಜಕೀಯಶಿವಮೊಗ್ಗ  ಶಿವಮೊಗ್ಗ: ಸಾಗರ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಹಾಲಪ್ಪನವರಿಗೆ ಟಿಕೆಟ್​​ ನೀಡಿದ ನಂತರದ ಬೆಳವಣಿಗೆಗಳು ಕುತೂಹಲ ಬದಲಾವಣೆಗಳಿಗೆ ಸಾಕ್ಷಿಯಾಗಿದೆ. ಬೇಳೂರು ಬೆಂಬಲಿಗರು ಅಚಾನಕ್​​ಆಗಿ ಹಾಲಪ್ಪನವರೊಂದಿಗೆ ಗುರುತಿಸಿಕೊಂಡಿರುವುದೇ ಇದಕ್ಕೆಲ್ಲ ಕಾರಣವಾಗಿದೆ.ಇದರಿಂದಾಗಿ ಬೇಳೂರು ಬಲ ಕುಸಿದಂತಾಗಿದ್ದು, ಈಗಾಗಲೇ ಕಾಂಗ್ರೆಸ್'ನ ಹಿರಿಯ ನಾಯಕರ ಜೊತೆ ಬೇಳೂರು ಮಾತನಾಡಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ಬೇಳೂರು ಕಾಂಗ್ರೆಸ್​​ ಸೇರಿ ಕಾಗೋಡು ಗೆಲುವಿಗೆ ಸಹಕರಿಸುತ್ತಾರೆ ಅಥವಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ ಎನ್ನುವ ಮಾತುಗಳು ರಾಜಕೀಯವಲಯದಲ್ಲಿ ಕೇಳಿ ಬರುತ್ತಿವೆ. ಹಾಲಪ್ಪಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೇ...Kannada News Portal