ಬೆಂಗಳೂರು :  ಒಂದು ಸಣ್ಣ ಬೈಕ್ ಶೆಡ್​​ನಿಂದ ಹಿಡಿದು ಬಂಗಲೆಯವರೆಗೆ ನಿರ್ಮಾಣ ಮಾಡಬೇಕು ಎಂದಾಕ್ಷಣ ನಾವು ಬುದ್ದಿವಂತಿಕೆ ಉಳ್ಳ, ಸಾಮರ್ಥ್ಯ ಹೊಂದಿದ ಹಾಗೂ ಜಾಣ್ಮೆಗೊಂಡವರನ್ನು  ಹುಡುಕಿಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳುತ್ತೇವೆ. ಏಕೆಂದರೆ ಒಮ್ಮೆ ನಿರ್ಮಾಣ ಮಾಡಿದ ನಮ್ಮ ಕಟ್ಟಡಗಳು ಅತಿ ಹೆಚ್ಚು ಕಾಲಗಳ ವರೆಗೆ ಬಾಳಿಕೆ ಬರಬೇಕು ಎಂಬ ಮಹದಾಸೆ ನಮ್ಮದು.

ಈ ನಿರ್ಮಾಣ ಎಂಬ ಪದಕ್ಕೂ ಸೆಪ್ಟೆಂಬರ್ 15 ದಕ್ಕೂ ಒಂದು ಅವಿನಾಭಾವ ಸಂಬಂಧ ಇದೆ. ಕಾರಣ, ಕೃಷ್ಣರಾಜ ಸಾಗರ ಅಣೆಕಟ್ಟು, ಭದ್ರಾವತಿಯಲ್ಲಿ ಕಬ್ಬಣ ಮತ್ತು ಉಕ್ಕಿನ ಕಾರ್ಖಾನೆ, ಮೈಸೂರು ಸೊಪಿನ ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಭಾರತೀಯ ಮೈಸೂರು ಬ್ಯಾಂಕ್ (SBM), ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಾರ್ವಜನಿಕ ಗ್ರಂಥಾಯಗಳು,  ಮೈಸೂರು ವಾಣಿಜ್ಯ ಉದ್ಯಮ, ಕನ್ನಡ ಸಾಹಿತ್ಯ ಪರಿಷತ್ ನಿರ್ಮಾಣ, ಹೆಬ್ಬಾಳ ಕೃಷಿ ಶಾಲೆ ಇಂದು ಅದು ಕೃಷಿ ಹಾಗೂ ವಿಜ್ಞಾನ ವಿಶ್ವವಿದ್ಯಾನಿಲಯ. ಹೀಗೆ ಸಾವಿರ-ಸಾವಿರ  ಹೊಸ ಆಯಾಮುಗಳನ್ನು ನಿರ್ಮಾಣ ಮಾಡಿದ ಹಿರಿಮೆ  ಜಗತ್ತು ಕಂಡ ಅತ್ಯಂತ ಬುದ್ಧಿವಂತ ಎಂಜಿನಿಯರ್ ಸನ್ಮಾನ್ಯ ಶ್ರೀ ಸರ್ ಮೋಕ್ಷಗುಂಡಮ್ ವಿಶ್ವೇಶ್ವರಯ್ಯನವರು.  ಈ  ಭಾರತ ಮಾತೆಯ ಹೆಮ್ಮೆಯ ಪುತ್ರ ಜನಿಸಿ ಇಂದಿಗೆ(15-09-2018) 157ವರ್ಷ ತುಂಬಿದೆ.

ಬಾಲ್ಯ, ಶಿಕ್ಷಣ ಮತ್ತು ಆರಂಭದ ಹೆಜ್ಜೆಗುರುತುಗಳು

ಶ್ರೀ ಮೊಕ್ಷಗುಂಡಮ್ ಶ್ರೀನಿವಾಸ ಶಾಸ್ತ್ರಿ ಹಾಗೂ ಶ್ರೀಮತಿ ವೆಂಕಟಲಕ್ಷ್ಮಮ್ಮ ಎಂಬ ದಂಪತಿಗಳ ಮಗನಾಗಿ ಕರ್ನಾಟಕದ ಕೋಲಾರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿ ಗ್ರಾಮದಲ್ಲಿ [ ಈಗ ಮುದ್ದೇನಹಳ್ಳಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದೆ] ಸ್ಮಾರ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮನೆಯಲ್ಲಿ 1861 ಸೆ.15 ರಂದು ಅರಳಿದ ಕುಡಿ. ತಮ್ಮ ಬಾಲ್ಯದ ಆರಂಭದ ಶಿಕ್ಷಣವನ್ನೂ ಚಿಕ್ಕಬಳ್ಳಾಪುರದಲ್ಲಿ ಮುಗಿಸಿ, ನಂತರ BA ಪದವಿಯನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ 1881ರಂದು ಪಡೆದುಕೊಂಡು, ಆನಂತರ ಪೂನಾಕ್ಕೆ ಹೋಗಿ ಅಲ್ಲಿ LCE (Licenciate in civil Engineering) ಪದವಿಯನ್ನು ಮುಂಬಯಿ ವಿಶ್ವವಿದ್ಯಾನಿಲಯದಿಂದ ಪಡೆದುಕೊಂಡರು. ಈ LCE ಪದವಿಯು ಈಗಿನ DCE (Deploma in civil Engineering) ಪದವಿಗೆ ಸರಿ ಸಮನಾಗಿದೆ.

ಮೈಸೂರಿನ 19ನೇ ದಿವಾನರಾಗಿ 1912 ರಿಂದ 1918 ವರೆಗೆ ಸೇವೆಯನ್ನು ನಾಲ್ಕನೇ ಕೃಷ್ಣರಾಜ ವಡೆಯರ್ ಕಾಲದಲ್ಲಿ ಸಲ್ಲಿಸಿದ್ದಾರೆ.ಸಾಧನೆಯ ಉನ್ನತ ಶೃಂಗವನ್ನು ತಲುಪಿದ ಶ್ರೀಯುತರು 1962 ಏಪ್ರೀಲ್ 12 ರಂದು ತಮ್ಮ ಹಾಗೂ ಭಾರತಾಂಬೆಯೊಂದಿಗಿನ ಬಾಹ್ಯ ಸಂಬಂಧವನ್ನು ಸಂಪನ್ನಗೊಳಿಸಿಕೊಂಡು ಇಹಲೋಕದ ಪ್ರವಾಸ ಮುಗಿಸಿದಾಗ ಇವರಿಗೆ ಪ್ರಾಯ 100 ವರ್ಷ.

ಓದಿನ ನಂತರ ಮುಂಬಯಿ ಸರ್ಕಾರವು ಇವರಿಗೆ PWD ಇಲಾಖೆಗೆ ನೇಮಕ ಮಾಡಿತು. ಅಲ್ಲಿಂದ ಇವರು ಸರ್ಕಾರದ ಇತರ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಮತ್ತು ಇವರ ಸಂಪೂರ್ಣ ಸೇವಾ ಅವಧಿಯಲ್ಲಿ ಮಾಡಿದ್ದೇಲ್ಲಾ ಕಾರ್ಯಗಳು ಹೊಸ-ಹೊಸ ಸಾಧನಗಳ ಪಟ್ಟಿ ಸೇರಿವೆ. ಇವರ ಸಾಧನೆಯನ್ನ ಗುರುತಿಸಿ ಭಾರತ ಸರ್ಕಾರ ‘ಭಾರತರತ್ನ’ನೀಡಿಗೌರವಿಸಿದೆ.

ಸ್ವಾತಂತ್ರ್ಯ ಪೂರ್ವದಲ್ಲಿ ಅಷ್ಟೇಲ್ಲಾ ಪರಕೀಯರ ದರ್ಬಾರಿನ ಮಧ್ಯೆಯೇ ತನ್ನ ಶಿಕ್ಷಣಕ್ಕೆ ಕೊರತೆಯಾಗದಂತೆ ಶ್ರಮ ಪಟ್ಟು ಓದಿದ ವಿಚಾರ ನಿಜಕ್ಕೂ ಈಗಿನ ವಿದ್ಯಾರ್ಥಿಗಳು ಕಲಿತುಕೊಳ್ಳಬೇಕಾದಂತದ್ದೂ , ಏಕೆಂದರೆ ಈಗಿನ ಈ ಆಧುನಿಕ ಜಗತ್ತಿನಲ್ಲಿ ಸುಸರ್ಜಿತವಾಗಿ ಎಲ್ಲವೂ ವ್ಯವಸ್ಥೆ ಇದ್ದು ಅದರಲ್ಲೂ ನಮ್ಮ ಮಕ್ಕಳಿಗೆ ತೊಂದರೆ ಆಗದಿರಲಿ ಎಂದು ಸುಲಲಿತವಾಗಿ ವ್ಯವಸ್ಥೆ ಮಾಡಿಕೊಡಬಲ್ಲ ತಂದೆ-ತಾಯಂದಿರು ಇದ್ದರೂ ನಾವು ಒಂದಿಲ್ಲೊಂದು ಸಮಸ್ಯೆಯನ್ನು ದಿನವೂ ಎದುರು ನೋಡುತ್ತಲೇ ಬದುಕುತ್ತೇವೆ.

ಇನ್ನು ವಿಶ್ವೇಶ್ವರಯ್ಯನವರ ಸಾಧನೆ, ಇಟ್ಟು ಹೋಗಿರುವ ಅಚ್ಚಳಿಯದ ಹೆಜ್ಜೆ ಗುರುತು ಹಾಗೂ ದೇಶಕ್ಕೆ ನೀಡಿದ ಕೊಡುಗೆ ಇದನ್ನೆಲ್ಲಾ ಗಮನಿಸಿದರೆ ನಾವು ಹುಟ್ಟಿ ಸಾಯುವ ಮುನ್ನ ಇವರು ಸಾಧಿಸಿದ್ದರಲ್ಲಿ ಒಂದು ಪ್ರತಿಷತದಷ್ಟಾದರೂ ಏನಾದರೂ ಮಾಡಬೇಕು ಎಂಬ ಹುಮ್ಮಸ್ಸು ಪ್ರತಿಯೊಬ್ಬನಿಗೂ ಬರದೇ ಇರಲಾರದು. ಇಂತಹ ಯಶಸ್ಸಿನ ಆದರ್ಶ ಪುರುಷ,ಭಾರತರತ್ನ ವಿಶ್ವೇಶ್ವರಯ್ಯನವರು ಎಲ್ಲರಿಗೂ ಸ್ಫೂರ್ತಿಯಾಗಲಿ ಎಂದು ಆಶಿಸುತ್ತಾ,  ತುಂಬು ಜೀವನ ನಡೆಸಿದ “ಮಹಾನ್ ಚೇತನಕ್ಕೆ ಶತಕೋಟಿ ಪ್ರಣಾಮಗಳು”.

ಅಜಿತ್ ನಾಡಿಗ್,ಶಿರಸಿ
ಅಜಿತ್ ನಾಡಿಗ್,ಶಿರಸಿ

 

 

Please follow and like us:
0
http://bp9news.com/wp-content/uploads/2018/09/Engineers-Day-2016-in-India-Quotes-Wishes-Messages-Theme-Greetings.pnghttp://bp9news.com/wp-content/uploads/2018/09/Engineers-Day-2016-in-India-Quotes-Wishes-Messages-Theme-Greetings-150x150.pngBP9 Bureauಅಂಕಣಪ್ರಮುಖಬೆಂಗಳೂರು :  ಒಂದು ಸಣ್ಣ ಬೈಕ್ ಶೆಡ್​​ನಿಂದ ಹಿಡಿದು ಬಂಗಲೆಯವರೆಗೆ ನಿರ್ಮಾಣ ಮಾಡಬೇಕು ಎಂದಾಕ್ಷಣ ನಾವು ಬುದ್ದಿವಂತಿಕೆ ಉಳ್ಳ, ಸಾಮರ್ಥ್ಯ ಹೊಂದಿದ ಹಾಗೂ ಜಾಣ್ಮೆಗೊಂಡವರನ್ನು  ಹುಡುಕಿಕೊಂಡು ಹೋಗಿ ಕೆಲಸ ಮಾಡಿಸಿಕೊಳ್ಳುತ್ತೇವೆ. ಏಕೆಂದರೆ ಒಮ್ಮೆ ನಿರ್ಮಾಣ ಮಾಡಿದ ನಮ್ಮ ಕಟ್ಟಡಗಳು ಅತಿ ಹೆಚ್ಚು ಕಾಲಗಳ ವರೆಗೆ ಬಾಳಿಕೆ ಬರಬೇಕು ಎಂಬ ಮಹದಾಸೆ ನಮ್ಮದು. var domain = (window.location != window.parent.location)? document.referrer : document.location.href; if(domain==''){domain = (window.location != window.parent.location)...Kannada News Portal