ಉತ್ತರ ಕನ್ನಡ : ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಆದರೆ ಬಿಜೆಪಿಯದು ರಾಜಕೀಯಕ್ಕಾಗಿ ಹಿಂದುತ್ವ ಮಾಡುತ್ತಾರೆ ಎಂದು ಶಿರಸಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ.

ಶಿರಸಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ನಾವು ಶಿವಸೇನೆ ಜೊತೆಗೆ ರಾಜ್ಯ ಚುನಾವಣಾ ಕಣಕ್ಕಿಳಿದಿದ್ದೇವೆ.ಹಿಂದೂ ಕೇಸರಿ ಪಡೆ ಎನ್ನುವ ಸಂಯುಕ್ತ ಪಡೆಯೊಂದಿಗೆ 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಬಿಜೆಪಿ ನಾಟಕ ಮಾಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಕೂಡ ರಾಮಮಂದಿರದ ಬಗ್ಗೆ ಮಾತೇ ಇಲ್ಲ. ದತ್ತಪೀಠದಿಂದ ಗೆದ್ದು ಬಂದು ದತ್ತಪೀಠವನ್ನೇ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನೀತಿ ಬಾಹಿರವಾಗಿ 10 ಪಾಯಿಂಟ್ಸ್ ಮುಸ್ಲೀಂ ಪರವಾಗಿ ಹಾಕಿದೆ. ಇದರ ವಿರುದ್ಧ ನಾನು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲಿಸಿದ್ದೇನೆ. ಹಿಂದುತ್ವದ ವಿರುದ್ಧ ಇರುವ ಎಂಆಯ್​​ಎಂ ನಂತ ದೇಶದ್ರೋಹಿ ಸಂಘಟನೆ ಜೊತೆ ಜೆಡಿಎಸ್ ಕೈಜೋಡಿಸಿದೆ. ಜೆಡಿಎಸ್ ಕೂಡ ದೇಶದ್ರೋಹಿ ಪಕ್ಷ ಎಂದು ಆರೋಪಿಸಿದರು.ನಾವು ಕನ್ನಡಕ್ಕೆ ದ್ರೋಹ ಬಗೆಯುವುದಿಲ್ಲ. ಆದ್ರೆ ಕರ್ನಾಟಕದಲ್ಲಿ ಮಾತ್ರ ಹಿಂದುತ್ವಕ್ಕಾಗಿ ನಾವು ಶಿವಸೇನೆ ಜೊತೆ ಕೈಜೋಡಿಸಿದ್ದೇವೆ. ಬಿಜೆಪಿ ಕಾಂಗ್ರೆಸ್ ಒಳ ರಾಜಕಾರಣದ ಮೂಲಕ ಬೆಳಗಾವಿಯಲ್ಲಿ ಆಟವಾಡುತ್ತಿವೆ ಎಂದರು.

ನೂರಕ್ಕೆ ನೂರು ಅನಂತಕುಮಾರ್ ಹೆಗಡೆ ನಕಲಿ ಹಿಂದುವಾದಿ. ಹಿಂದೂ ಸಂಘಟನೆ ಮೂಲಕ ಬಂದ ಅನಂತಕುಮಾರ್ ಹೆಗಡೆ ಹಿಂದೂ ಸಂಘಟನೆಗಳನ್ನ ಮುಳುಗಿಸಿದ್ದಾರೆ ಎಂದು ನೇರ ವಾಗ್ದಾಳಿ ನಡೆಸಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-09-at-5.34.09-PM-1-1024x768.jpeghttp://bp9news.com/wp-content/uploads/2018/05/WhatsApp-Image-2018-05-09-at-5.34.09-PM-1-150x150.jpegBP9 Bureauಉತ್ತರ ಕನ್ನಡಪ್ರಮುಖರಾಜಕೀಯಉತ್ತರ ಕನ್ನಡ : ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಆದರೆ ಬಿಜೆಪಿಯದು ರಾಜಕೀಯಕ್ಕಾಗಿ ಹಿಂದುತ್ವ ಮಾಡುತ್ತಾರೆ ಎಂದು ಶಿರಸಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಶಿರಸಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ನಾವು ಶಿವಸೇನೆ ಜೊತೆಗೆ ರಾಜ್ಯ ಚುನಾವಣಾ ಕಣಕ್ಕಿಳಿದಿದ್ದೇವೆ.ಹಿಂದೂ ಕೇಸರಿ ಪಡೆ ಎನ್ನುವ ಸಂಯುಕ್ತ ಪಡೆಯೊಂದಿಗೆ 100 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಬಿಜೆಪಿ ನಾಟಕ ಮಾಡುತ್ತಿದೆ. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಕೂಡ ರಾಮಮಂದಿರದ ಬಗ್ಗೆ ಮಾತೇ...Kannada News Portal