ಉತ್ತರ ಕನ್ನಡ : ಬಿಜೆಪಿಯಿಂದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಇಂದು ಸಿದ್ಧಾಪುರದಲ್ಲಿ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ್​​, ಯಲ್ಲಾಪುರ ಕ್ಷೇತ್ರದಲ್ಲಿ ನಮ್ಮವರಿಂದಾನೆ ನಾವು ಸೋತಿದ್ದೇವೆ.ಹಳಿಯಾಳದಲ್ಲಿ ದೇಶಪಾಂಡೆ ದುಡ್ಡಿನ ಬಲದಲ್ಲಿ ಗೆದ್ದಿದ್ದು. ಇಲ್ಲದಿದ್ದರೆ ನಾವು ಆರಕ್ಕೆ 6 ಕ್ಷೇತ್ರಗಳನ್ನು ಗೆಲ್ತಿದ್ವಿ ಎಂದರು.

ಕೆಲವೇ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಹಣ, ಹೆಂಡ ಬಲದ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಗೆಲ್ಲಿಸಿದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ನಂತರ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ , ಇದು ಕಾಗೇರಿಯ ಗೆಲುವಲ್ಲ, ಕಾರ್ಯಕರ್ತರ ಗೆಲುವು.ವಿಶೇಷವಾಗಿ ಯುವಕರು ಹಾಗೂ ಮಹಿಳೆಯರ ಗೆಲುವಿನ ಹಠದಿಂದ ಬಿಜೆಪಿ ಗೆದ್ದಿದೆ ಎಂದರು.ಗೆಲುವಿನ ವಾತಾವರಣಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ.ಮೋದಿ, ಅಮಿತ್ ಷಾ, ಯೋಗಿಯವರ ನಿರಂತರ ಸಭೆಗಳು ಗೆಲುವಿಗೆ ಕಾರಣ ಎಂದು ಆಶಯ ವ್ಯಕ್ತಪಡಿಸಿದರು. ಸಂಘಟನಾತ್ಮಕವಾಗಿ ನಮ್ಮನ್ನು ಸಿದ್ಧಗೊಳಿಸಿದ್ದು ಸಂಘಟನೆಯ ಹಿರಿಯರು. ಸಮಾಜದ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮಗೊಳಿಸಲು ಪ್ರಯತ್ನಿಸೋಣ.ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಕೊಟ್ಟು ಮೋದಿಯವರನ್ನ ಮತ್ತೊಮ್ಮೆ ಗೆಲ್ಲಿಸೋಣ ಎಂದು ಮನವಿ ಮಾಡಿದರು.ಪತ್ರಿಕಾರಂಗದವರು ಈ 3 ತಿಂಗಳ ವರದಿಯ ಆತ್ಮಾವಲೋಕನ ಮಾಡಿಕೊಂಡು ಅದರ ವರದಿಯನ್ನು ಬಹಿರಂಗಪಡಿಸಲಿ ಎಂದರು.ಕಾರ್ಯಕ್ರಮದಲ್ಲಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

 

Please follow and like us:
0
http://bp9news.com/wp-content/uploads/2018/05/WhatsApp-Image-2018-05-29-at-6.01.56-PM-1024x768.jpeghttp://bp9news.com/wp-content/uploads/2018/05/WhatsApp-Image-2018-05-29-at-6.01.56-PM-150x150.jpegBP9 Bureauಉತ್ತರ ಕನ್ನಡರಾಜಕೀಯಉತ್ತರ ಕನ್ನಡ : ಬಿಜೆಪಿಯಿಂದ ಮತದಾರರಿಗೆ ಹಾಗೂ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭ ಇಂದು ಸಿದ್ಧಾಪುರದಲ್ಲಿ ನಡೆಯಿತು. ಸಮಾರಂಭದಲ್ಲಿ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಕೆ ಜಿ ನಾಯ್ಕ್​​, ಯಲ್ಲಾಪುರ ಕ್ಷೇತ್ರದಲ್ಲಿ ನಮ್ಮವರಿಂದಾನೆ ನಾವು ಸೋತಿದ್ದೇವೆ.ಹಳಿಯಾಳದಲ್ಲಿ ದೇಶಪಾಂಡೆ ದುಡ್ಡಿನ ಬಲದಲ್ಲಿ ಗೆದ್ದಿದ್ದು. ಇಲ್ಲದಿದ್ದರೆ ನಾವು ಆರಕ್ಕೆ 6 ಕ್ಷೇತ್ರಗಳನ್ನು ಗೆಲ್ತಿದ್ವಿ ಎಂದರು. ಕೆಲವೇ ದಿನಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಹಣ, ಹೆಂಡ ಬಲದ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಗೆಲ್ಲಿಸಿದ ಕಾರ್ಯಕರ್ತರಿಗೆ ಅಭಿನಂದನೆ...Kannada News Portal