ಉತ್ತರ ಕನ್ನಡ : ಉತ್ತರ ಕನ್ನಡದ ಆರು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕೇಸರಿ ಪಾಳಯ ಗೆದ್ದು ಬೀಗಿದರೆ, ಕಾಂಗ್ರೆಸ್​ ಎರಡಕ್ಕೆ ತೃಪ್ತಿಪಟ್ಟಿದೆ. ಇತ್ತ ಜೆಡಿಎಸ್​ ಒಂದು ಸ್ಥಾನವನ್ನು  ಗೆಲ್ಲಲಾಗದೇ  ಸೋತು ಸುಣ್ಣವಾಗಿದೆ.

ಕುತೂಹಲ ಕ್ಷೇತ್ರ ಶಿರಸಿಯಲ್ಲಿ ಕಾಗೇರಿ ಗೆಲುವನ್ನು ದಾಖಲೆ  ಬೀರಿದ್ದಾರೆ. ಇನ್ನು ಪಕ್ಕದ ಯಲ್ಲಾಪುರದಲ್ಲಿ  ಕಾಂಗ್ರೆಸ್​ನ ಶಿವರಾಂ ಹೆಬ್ಬಾರ್​ ಕಷ್ಟ ಪಟ್ಟು ಕೂದಲೆಳೆಯಲ್ಲಿ ಗೆಲುವು ಸಾಧಿಸಿದ್ದಾರೆ.  ಇನ್ನು ಹಾಲಿ ಸಚಿವ ದೇಶಪಾಂಡೆ ಕ್ಷೇತ್ರ ಹಲಿಯಾಳದಲ್ಲಿ ಬಿಜೆಪಿ ಅಭ್ಯರ್ಥಿ  ಸುನೀಲ್​ ಹೆಗಡೆ ತುರುಸಿನ ಸ್ಪರ್ಧೆ ಕೊಟ್ಟು  ಕೊನೆಗೂ ಕಡಿಮೆ ಅಂತರದ ಸೋಲು ಕಂಡು,  ದೇಶಪಾಂಡೆ ಭರ್ಜರಿ ಗೆಲುವಿನ ನಗೆ ಬೀರಿದ್ದಾರೆ.

ಜಿಲ್ಲಾ ಕೇಂದ್ರ  ಕಾರವಾರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಕೊನೆಗೂ ಬಿಜೆಪಿಯ ಮಹಿಳಾ ಅಭ್ಯರ್ಥಿ ರೂಪಾಲಿ ನಾಯ್ಕ ಕೇಸರಿ ಪಾಳಕ್ಕೆ ಗೆಲುವಿನ ರೂಪ ಕೊಟ್ಟಿದ್ದಾರೆ.

ಇನ್ನು  ರಾಜ್ಯದ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಭಟ್ಕಳದಲ್ಲಿ ಬಿಜೆಪಿಯ ಸುನೀಲ್​ ನಾಯ್ಕ  ಕೇಸರಿ ಬಾವುಟ ಹಾರಿಸಿದ್ದಾರೆ. ಶತಾಯಗತಾಯ  ಗೆಲ್ಲಲೇ ಬೇಕೆಂಬ ಪಣ ತೊಟ್ಟಿದ್ದ ಕಾಂಗ್ರೆಸ್​ ಮಂಕಾಳ್​ ವೈದ್ಯನಿಗೆ ಜನಾರ್ಶೀವಾದ ಸಿಗದೇ  ಸೋಲನೊಪ್ಪಿದ್ದಾರೆ.

ಕುಮುಟಾ : ಬಿಜೆಪಿಗೆ ಬಂಡಾಯಗಾರರ ಸ್ಪರ್ಧೆ, ಕಾಂಗ್ರೆಸ್​ನ ಪ್ರಬಲ ನಾಯಕಿಯ ಸ್ಪರ್ಧೆ  ಅದರ ಮಧ್ಯೆದಲ್ಲಿ ಬಿಜೆಪಿಯ ವಲಸಿಗ ಅಭ್ಯರ್ಥಿಗೆ ವಿಜಯಲಕ್ಷ್ಮಿ ಒಲಿದಿದ್ದಾಳೆ.  ಕುಮಟಾ ಕ್ಷೇತ್ರದ ಬಿಜೆಪಿಯಲ್ಲಿ ಟಿಕೆಟ್​ಗೆ ಭಾರೀ ಪೈಪೋಟಿಯ ನಡುವೆ ಬಿಜೆಪಿ ಹೈಕಮಾಂಡ್​ ಜೆಡಿಎಸ್​ ನಿಂದ ಬಂದ ದಿನಕರ್​ ಶೆಟ್ಟಿ ಗೆ ಟಿಕೆಟ್​ ನೀಡಿ, ಮೂಲ ಬಿಜೆಪಿಗರಿಗೆ  ಟಾಂಗ್​ ಕೊಟ್ಟಿತು. ಆದರೆ ಅ ಟಾಂಗ್​ ಈಗ ಸಕ್ಸ್ಸ್​​ಸ್​ ಆಗಿದ್ದು ಬಿಜೆಪಿ ಗೆಲುವಿನ ಬಾವುಟ ನೆಟ್ಟಿದೆ.

ಒಟ್ಟಾರೆ ಉತ್ತರ ಕನ್ನಡದಲ್ಲಿ ಹಿಂದಿನ ಬಾರಿ ಒಂದೇ ಒಂದು ಸ್ಥಾನದಲ್ಲಿ ಬಿಜೆಪಿ ಈಗ ಮೂರು ಸ್ಥಾನವನ್ನು ಹೆಚ್ಚಿಸಿಕೊಂಡ, ನಾಲ್ಕು ಕ್ಷೇತ್ರಗಳಲ್ಲಿ  ವಿಜಯೋತ್ಸವ ಆಚರಿಸಿದೆ. ಕಾಂಗ್ರೆಸ್​ 5 ಸ್ಥಾನದಿಂದ 2 ಸ್ಥಾನಕ್ಕೆ ಕುಸಿದಿದೆ. ಇನ್ನು  ಪ್ರಾದೇಶಿಕ  ಪಕ್ಷ ಜೆಡಿಎಸ್​ ಖಾತೆ ತೆರೆಯುವಲ್ಲಿ ವಿಫಲವಾಗಿದೆ.

 

 

 

 

Please follow and like us:
0
http://bp9news.com/wp-content/uploads/2018/05/collage-35.jpghttp://bp9news.com/wp-content/uploads/2018/05/collage-35-150x150.jpgBP9 Bureauಉತ್ತರ ಕನ್ನಡಪ್ರಮುಖರಾಜಕೀಯಉತ್ತರ ಕನ್ನಡ : ಉತ್ತರ ಕನ್ನಡದ ಆರು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕೇಸರಿ ಪಾಳಯ ಗೆದ್ದು ಬೀಗಿದರೆ, ಕಾಂಗ್ರೆಸ್​ ಎರಡಕ್ಕೆ ತೃಪ್ತಿಪಟ್ಟಿದೆ. ಇತ್ತ ಜೆಡಿಎಸ್​ ಒಂದು ಸ್ಥಾನವನ್ನು  ಗೆಲ್ಲಲಾಗದೇ  ಸೋತು ಸುಣ್ಣವಾಗಿದೆ. ಕುತೂಹಲ ಕ್ಷೇತ್ರ ಶಿರಸಿಯಲ್ಲಿ ಕಾಗೇರಿ ಗೆಲುವನ್ನು ದಾಖಲೆ  ಬೀರಿದ್ದಾರೆ. ಇನ್ನು ಪಕ್ಕದ ಯಲ್ಲಾಪುರದಲ್ಲಿ  ಕಾಂಗ್ರೆಸ್​ನ ಶಿವರಾಂ ಹೆಬ್ಬಾರ್​ ಕಷ್ಟ ಪಟ್ಟು ಕೂದಲೆಳೆಯಲ್ಲಿ ಗೆಲುವು ಸಾಧಿಸಿದ್ದಾರೆ.  ಇನ್ನು ಹಾಲಿ ಸಚಿವ ದೇಶಪಾಂಡೆ ಕ್ಷೇತ್ರ ಹಲಿಯಾಳದಲ್ಲಿ ಬಿಜೆಪಿ...Kannada News Portal