ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  250ನೇ ದಿನದ  ಕಾರ್ಯಕ್ರಮದಲ್ಲಿ ಪ ಪೂ ಶ್ರೀ ಶ್ರೀ ಸ್ವಾಮಿ ದೇವಾನಂದಗಿರಿ, ಸಿದ್ಧಾರೂಢಮಠ , ಕೊಡಗು  ಇವರು ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ನಿವೃತ್ತ ಪ್ರಾಚಾರ್ಯರು , ಪ್ರಸಿದ್ಧ ಕೊಳಲುವಾದಕರು , ರಾಮಚಂದ್ರಾಪುರ ಮಠದ  ಹೇಮಲಂಬಿ  ಸಂವತ್ಸರದ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತ  ವಿದ್ವಾನ್ ಶಂಭು ಭಟ್ ಕಡತೋಕ ಇವರು  ಇವರು ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು.  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಲಕ್ಷ್ಮೀನಾರಾಯಣ ಜಂಭೆ ಇವರು  ಪೂಜಾ ಕೈಂಕರ್ಯ ನೆರವೇರಿಸಿದರು .

ಪ್ರತಿದಿನ ವಿವಿಧ ಮಠಾಧೀಶರು ಪಾಲ್ಗೊಳ್ಳುವ ‘ಗೋಕರ್ಣ ಗೌರವ’ಕಾರ್ಯಕ್ರಮವು ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ್ವರ  ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಶ್ರೀರಾಮಚಂದ್ರಾಪುರ ಮಠ ಇವರ ದಿವ್ಯ ಮಾರ್ಗದರ್ಶನದಲ್ಲಿ ಕ್ಷೇತ್ರ ಗೋಕರ್ಣ ಉಪಾಧಿವಂತ ಮಂಡಳದ ಸಹಯೋಗದೊಂದಿಗೆ , ಸಂತಸೇವಕ ಸಮಿತಿಯ ಸಂಘಟನೆಯಲ್ಲಿ ನಿರಂತರವಾಗಿ ನಡೆಯುತ್ತಿದ್ದು  ಇಂದಿಗೆ  250 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ .

ಆಗಮಿಸಿದ ಎಲ್ಲ ಸಂತರು ತಮ್ಮ ಶಿಷ್ಯ ಜನತೆಯ ಒಳಿತನ್ನು ಹಾಗೂ ಲೋಕಕಲ್ಯಾಣವನ್ನು ಸಂಕಲ್ಪಿಸಿ  ಆತ್ಮಲಿಂಗಕ್ಕೆ  ವಿಶೇಷ ಪೂಜೆ ಸಲ್ಲಿಸಿ  ಕಾರ್ಯಕ್ರಮದ ಬಗ್ಗೆ  ತಮ್ಮ ಅತಿ ಸಂತಸವನ್ನು ವ್ಯಕ್ತಪಡಿಸಿ ಆಶೀರ್ವದಿಸುತ್ತಿದ್ದಾರೆ.  ಪೂಜೆಯ ನಂತರ ಪ್ರತಿದಿನದ ಗೌರವ ಸಮರ್ಪಣೆ ಕಾರ್ಯಕ್ರಮವನ್ನು ಎಲ್ಲ ಸಮಾಜದ ಪ್ರಮುಖರಿಂದ ನಡೆಸಿಕೊಂಡು ಬರಲಾಗಿದೆ.

ವರದಿ:ಶ್ರೀಧರ ಹೆಗಡೆ

Please follow and like us:
0
http://bp9news.com/wp-content/uploads/2017/09/WhatsApp-Image-2017-09-15-at-10.41.34-AM-678x1024.jpeghttp://bp9news.com/wp-content/uploads/2017/09/WhatsApp-Image-2017-09-15-at-10.41.34-AM-150x150.jpegBP9 Bureauಆಧ್ಯಾತ್ಮಉತ್ತರ ಕನ್ನಡಶ್ರೀ ರಾಮಚಂದ್ರಾಪುರ ಮಠಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  'ಗೋಕರ್ಣ ಗೌರವ'  250ನೇ ದಿನದ  ಕಾರ್ಯಕ್ರಮದಲ್ಲಿ ಪ ಪೂ ಶ್ರೀ ಶ್ರೀ ಸ್ವಾಮಿ ದೇವಾನಂದಗಿರಿ, ಸಿದ್ಧಾರೂಢಮಠ , ಕೊಡಗು  ಇವರು ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು . ನಿವೃತ್ತ ಪ್ರಾಚಾರ್ಯರು , ಪ್ರಸಿದ್ಧ ಕೊಳಲುವಾದಕರು , ರಾಮಚಂದ್ರಾಪುರ ಮಠದ  ಹೇಮಲಂಬಿ  ಸಂವತ್ಸರದ ಚಾತುರ್ಮಾಸ್ಯ ಪ್ರಶಸ್ತಿ ಪುರಸ್ಕೃತ  ವಿದ್ವಾನ್ ಶಂಭು ಭಟ್ ಕಡತೋಕ...Kannada News Portal