ಶಿವಮೊಗ್ಗ : ಸಾಗರದ ಬಿಜೆಪಿ ಟಿಕೆಟ್​​ ಕೈ ತಪ್ಪಿದ್ದಕ್ಕೆ ಗೋಪಾಲಕೃಷ್ಣ ಬೇಳೂರು ಅಸಮಧಾನಗೊಂಡು ನಾಳೆ ಕಾಂಗ್ರೆಸ್​​​ ಸೇರಲಿದ್ದು,ಇದರೊಂದಿಗೆ ಎಲ್ಲಾ ಕುತೂಹಕ್ಕೆ ತೆರೆ ಬಿದ್ದಿದೆ.

ಸಾಗರದ ಬಿಜೆಪಿ ಟಿಕೆಟ್​​ ಆಕಾಂಕ್ಷಿ ಆಗಿದ್ದ ಗೋಪಾಲಕೃಷ್ಣ ಬೇಳೂರುಗೆ ಟಿಕೆಟ್​​​ ಕೈ ತಪ್ಪಿದ್ದಕ್ಕೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದ್ದರು. ಆದರೆ ತದನಂತರ ಕಾಂಗ್ರೆಸ್​​​ ಸೇರಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.

ಇಂದು ಬೆಳಿಗ್ಗೆ ಗೋಪಾಲಕೃಷ್ಣ ಬೇಳೂರು ಕಾಂಗ್ರೆಸ್​​​ ಉಸ್ತುವಾರಿ ಬಿ.ಕೆ ಹರಿಪ್ರಸಾದ್​​​ ಅವರನ್ನು ಭೇಟಿ ಮಾಡಿ ಮಾತನಾಡಿದ್ದು, ನಂತರ ಸಿಎಂ ಸಿದ್ದರಾಯ್ಯಅವರ ಜೊತೆಗೂ ಮಾತುಕತೆ ನಡೆಸಿ ಕಾಂಗ್ರೆಸ್​​​ ಪಕ್ಷ ಸೇರುವುದಾಗಿ ಘೋಷಣೆ ಮಾಡಿದ್ದಾರೆ.

ನಾಳೆ ಕಾಂಗ್ರೆಸನ್ನು ಅಧಿಕೃತವಾಗಿ ಸೇರಲಿದ್ದು, ಯಾವೂದೇ ಆಸೆ, ಆಕಾಂಕ್ಷೆ ಇಲ್ಲದೆ ಕಾಗೋಡು ತಿಮ್ಮಪ್ಪ ಅವರ ಗೆಲುವಿಗೆ ಶ್ರಮಿಸಲಾಗುವುದು ಎಂದು ​​ಹೇಳಿದ್ದಾರೆ.

 

Please follow and like us:
0
http://bp9news.com/wp-content/uploads/2018/04/collage-2-29.jpghttp://bp9news.com/wp-content/uploads/2018/04/collage-2-29-150x150.jpgBP9 Bureauಪ್ರಮುಖಶಿವಮೊಗ್ಗಶಿವಮೊಗ್ಗ : ಸಾಗರದ ಬಿಜೆಪಿ ಟಿಕೆಟ್​​ ಕೈ ತಪ್ಪಿದ್ದಕ್ಕೆ ಗೋಪಾಲಕೃಷ್ಣ ಬೇಳೂರು ಅಸಮಧಾನಗೊಂಡು ನಾಳೆ ಕಾಂಗ್ರೆಸ್​​​ ಸೇರಲಿದ್ದು,ಇದರೊಂದಿಗೆ ಎಲ್ಲಾ ಕುತೂಹಕ್ಕೆ ತೆರೆ ಬಿದ್ದಿದೆ. ಸಾಗರದ ಬಿಜೆಪಿ ಟಿಕೆಟ್​​ ಆಕಾಂಕ್ಷಿ ಆಗಿದ್ದ ಗೋಪಾಲಕೃಷ್ಣ ಬೇಳೂರುಗೆ ಟಿಕೆಟ್​​​ ಕೈ ತಪ್ಪಿದ್ದಕ್ಕೆ ಬಿಜೆಪಿ ವಿರುದ್ಧ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದು ಹೇಳಿದ್ದರು. ಆದರೆ ತದನಂತರ ಕಾಂಗ್ರೆಸ್​​​ ಸೇರಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಇಂದು ಬೆಳಿಗ್ಗೆ ಗೋಪಾಲಕೃಷ್ಣ ಬೇಳೂರು ಕಾಂಗ್ರೆಸ್​​​ ಉಸ್ತುವಾರಿ ಬಿ.ಕೆ ಹರಿಪ್ರಸಾದ್​​​...Kannada News Portal