ಉತ್ತರಕನ್ನಡ: ಕಳೆದ ಮೂರು ದಿನದ ಹಿಂದೆ ಶಾಲೆಗೆ ಹೋದ ವಿದ್ಯಾರ್ಥಿಯೋರ್ವ ಪುನಃ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದು, ಇಂದು ಆತನ ಮೃತದೇಹ ಹತ್ತಿರದ ನೆಲಬಾವಿಯಲ್ಲಿ ದೊರೆತ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ವ್ಯಾಪ್ತಿಯಲ್ಲಿನ ಬಾಲಕ ಗಣೆಶ್​​ ಮಂಜುನಾಥ್​​​ ಮುಕ್ರಿ ಎನ್ನುವವನೇ ಅನುಮಾನಾಸ್ಪದವಾಗಿ ಸಾವು ಕಂಡ ಬಾಲಕನಾಗಿದ್ದಾನೆ. ಈತ ಕಳೆದ ಎರಡು ದಿನದ ಹಿಂದೆ ಶಾಲೆಯಿಂದ ಪುನಃ ಮನೆಗೆ ಬಂದಿರಲಿಲ್ಲ. ಸರ್ಕಾರಿ ಹಿರಿಯ  ಪ್ರಾಥಮಿಕ ಶಾಲೆ ಹೆಗಡೆಯಲ್ಲಿ 6ನೇ ತರಗತಿ ಓದುತ್ತಿದ್ದ ಈತನಿಗೆ 12 ವರ್ಷ ವಯಸ್ಸಾಗಿತ್ತು. ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿ ಹೋದ ಪೋಲಿಸರು ಬಾಲಕನಿಗಾಗಿ ಹುಡುಕಾಟ ನಡೆಸಿದ್ದರು.  ಇಂದು ಇದೇ ಗ್ರಾಮದಲ್ಲಿದ್ದ ನೆಲಬಾವಿಯಲ್ಲಿ ಬಾಲಕ ಗೌರೀಶ್ ಮುಕ್ರಿಯ ಮೃತದೇಹ ಪತ್ತೆಯಾಗಿದೆ. ಮೃತದೇಹ ನೋಡಿದ ಸ್ಥಳಿಯರು ಪೋಲಿಸರಿಗೆ ತಿಳಿಸಿದ್ದಾರೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

 

Please follow and like us:
0
http://bp9news.com/wp-content/uploads/2018/06/collage-3-4.jpghttp://bp9news.com/wp-content/uploads/2018/06/collage-3-4-150x150.jpgBP9 Bureauಉತ್ತರ ಕನ್ನಡಪ್ರಮುಖ  ಉತ್ತರಕನ್ನಡ: ಕಳೆದ ಮೂರು ದಿನದ ಹಿಂದೆ ಶಾಲೆಗೆ ಹೋದ ವಿದ್ಯಾರ್ಥಿಯೋರ್ವ ಪುನಃ ಮನೆಗೆ ಹಿಂದಿರುಗದೆ ನಾಪತ್ತೆಯಾಗಿದ್ದು, ಇಂದು ಆತನ ಮೃತದೇಹ ಹತ್ತಿರದ ನೆಲಬಾವಿಯಲ್ಲಿ ದೊರೆತ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದಿದೆ. var domain = (window.location != window.parent.location)? document.referrer : document.location.href; var scpt=document.createElement('script'); var GetAttribute = 'afpftpPixel_'+(Math.floor((Math.random() * 500) + 1))+'_'+Date.now() ; scpt.src='//adgebra.co.in/afpf/GetAfpftpJs?parentAttribute='+GetAttribute; scpt.id=GetAttribute; scpt.setAttribute('data-pubid','1656'); scpt.setAttribute('data-slotId','1'); scpt.setAttribute('data-templateId','12'); scpt.setAttribute('data-accessMode','1'); scpt.setAttribute('data-domain',domain); scpt.setAttribute('data-divId','div_122018069124720'); document.getElementById('div_122018069124720').appendChild(scpt); ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೆಗಡೆ ಗ್ರಾಮದ ವ್ಯಾಪ್ತಿಯಲ್ಲಿನ ಬಾಲಕ...Kannada News Portal