ಉತ್ತರ ಕನ್ನಡ : ಕಾಗೇರಿ ಪುಣ್ಯಕೋಟಿ ಇದ್ದಂತೆ, ನಿಮಗೆ  ಪುಣ್ಯಕೋಟಿ ಬೇಕಾ ಅಥವಾ ಹೆಬ್ಬುಲಿ ಬೇಕಾ?. ಈ ಮಾಫಿಯಾಗಳನ್ನು ಮಟ್ಟ ಹಾಕಲು ಕಾಗೇರಿಯವರಿಗೆ ಮತ್ತೊಮ್ಮೆ ಅಧಿಕಾರ ನೀಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಮನವಿ ಮಾಡಿದರು.

ಇಂದು ಶಿರಸಿಯಲ್ಲಿ ಕಾಗೇರಿ ಪರ  ನಡೆದ ರೋಡ್​​ ಶೋ ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಕಟ್ಟಿರುವ ವಾಚ್​​ಗೆ ಕಸ್ಟಮ್ ಡ್ಯೂಟಿ ಕಟ್ಟಿದ್ದೀರಾ..? ಪಾವತಿಸಿದ್ರೆ ಅದಕ್ಕೆ ಸಂಬಂಧಿಸಿದ ದಾಖಲೆನೀಡಿ. ಈ ಬಗ್ಗೆ 24 ಗಂಟೆಯೊಳಗೆ ಸಿದ್ದರಾಮಯ್ಯ ಉತ್ತರಿಸಬೇಕು.ಉತ್ತರಿಸದೇ ಇದ್ದಲ್ಲಿ ತಾವು ಸುಳ್ಳು ಪ್ರಚಾರ ಮಾಡುತ್ತಿದ್ದೇವೆ ಎಂದು ಕಣದಿಂದ ಹಿಂದೆ ಸರಿಯಲಿ ಎಂದು ಸಿದ್ದರಾಮಯ್ಯ ಅವರಿಗೆ ​​ ಸವಾಲ್​​ ಹಾಕಿದ್ದಾರೆ.



ಬೆಳಿಗ್ಗೆ ಸಿದ್ಧರಾಮಯ್ಯ ಟ್ವೀಟ್, ಮಧ್ಯಾಹ್ನ ರಾಹುಲ್ ಟ್ವೀಟ್, ಸಂಜೆ ರಮ್ಯಾ ಟ್ವೀಟ್ ಕಾಂಗ್ರೆಸ್​​ದು ಬರೀ ಟ್ವೀಟ್ ಪ್ರಚಾರವೇ ಆಗಿದೆ. ಏಕಂದ್ರೆ ರಾಹುಲ್ ಏಳೋದೇ ಮಧ್ಯಾಹ್ನ ಎಂದು ವ್ಯಂಗ್ಯವಾಡಿದರು. ಕುಮಾರ್ ಸ್ವಾಮಿ ಮತ್ತು ಅಮಿತ್ ಷಾ ಒಂದೇ ಪ್ಲೈಟ್ ನಲ್ಲಿ ದೆಹಲಿಗೆ ಹೋದ್ರು ಎನ್ನುವುದಕ್ಕೆ ಸಾಕ್ಷಿಯನ್ನು ರಾಜ್ಯದ ಜನತೆ ಎದುರು ಬಿಡುಗಡೆ ಮಾಡಲಿ ಎಂದು ಹೇಳಿದರು. ಇದು ಕೇವಲ ಒಂದು ಕ್ಷೇತ್ರದ ಭವಿಷ್ಯವಲ್ಲ, ಇಡೀ ರಾಜ್ಯದ ಭವಿಷ್ಯ ನಿರ್ಧರಿಸುವ ಚುನಾವಣೆ ಆದ್ದರಿಂದ ನೀವು ಒಳ್ಳೆಯ ನಿರ್ಧಾರ ಮಾಡಿ ಮತ ಚಲಾಯಿಸಿ ಎಂದು ಮನವಿ ಮಾಡಿದರು.

Please follow and like us:
0
http://bp9news.com/wp-content/uploads/2018/05/WhatsApp-Image-2018-05-09-at-5.34.23-PM-1024x768.jpeghttp://bp9news.com/wp-content/uploads/2018/05/WhatsApp-Image-2018-05-09-at-5.34.23-PM-150x150.jpegBP9 Bureauಉತ್ತರ ಕನ್ನಡಪ್ರಮುಖರಾಜಕೀಯಉತ್ತರ ಕನ್ನಡ : ಕಾಗೇರಿ ಪುಣ್ಯಕೋಟಿ ಇದ್ದಂತೆ, ನಿಮಗೆ  ಪುಣ್ಯಕೋಟಿ ಬೇಕಾ ಅಥವಾ ಹೆಬ್ಬುಲಿ ಬೇಕಾ?. ಈ ಮಾಫಿಯಾಗಳನ್ನು ಮಟ್ಟ ಹಾಕಲು ಕಾಗೇರಿಯವರಿಗೆ ಮತ್ತೊಮ್ಮೆ ಅಧಿಕಾರ ನೀಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಮನವಿ ಮಾಡಿದರು. ಇಂದು ಶಿರಸಿಯಲ್ಲಿ ಕಾಗೇರಿ ಪರ  ನಡೆದ ರೋಡ್​​ ಶೋ ನಂತರ ಮಾತನಾಡಿದ ಅವರು, ಮುಖ್ಯಮಂತ್ರಿ ಕಟ್ಟಿರುವ ವಾಚ್​​ಗೆ ಕಸ್ಟಮ್ ಡ್ಯೂಟಿ ಕಟ್ಟಿದ್ದೀರಾ..? ಪಾವತಿಸಿದ್ರೆ ಅದಕ್ಕೆ ಸಂಬಂಧಿಸಿದ ದಾಖಲೆನೀಡಿ. ಈ ಬಗ್ಗೆ 24 ಗಂಟೆಯೊಳಗೆ...Kannada News Portal