ಉತ್ತರಕನ್ನಡ : ದೇಶದ ಅತಿ ದೊಡ್ಡ ಪಕ್ಷ ಕಾಂಗ್ರೆಸ್‍ಗೆ ಇಂದು ರಾಜ್ಯದ ಪುಟಗೋಸಿ ಪಾರ್ಟಿಗೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಇಂದು ಬಿಜೆಪಿ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಶಿರಸಿ ಸಿದ್ದಾಪುರ, ಕುಮಟಾ ಹೊನ್ನಾವರ, ಕಾರವಾರ ಅಂಕೋಲ ಹಾಗೂ ಭಟ್ಕಳ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ ನೂತನ ಶಾಸಕರಿಗೆ  ಬಿಜೆಪಿ ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಸೇರಿ ಅಭಿನಂದನೆ ಸಲ್ಲಿಸಿದರು.

ಇದೇ ವೇಳೆ ಮಾತನಾಡಿದ  ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸದ್ಯ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ, ಮುಂದಿನ ದಿನದಲ್ಲಿ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಅನಂತಕುಮಾರ ಹೆಗಡೆ ಭವಿಷ್ಯ ನುಡಿದರು. ದೇಶದಲ್ಲೆ ದೊಡ್ಡ ಪಕ್ಷವಾದ  ಕಾಂಗ್ರೆಸ್ ಗೆ ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡಿಯುವಂತ ಪರಿಸ್ಥಿತಿ ಇಂದು ಒದಗಿ ಬಂದಿದೆ. ಇದು ಈಗಿನ ಕಾಂಗ್ರೆಸ್ ಪಕ್ಷದ ಸ್ಥಿತಿಗತಿ ಎಂದು ಕಾಂಗ್ರೆಸ್ ನಾಯಕರನ್ನು ಟೀಕೆ ಮಾಡಿದರು.

ರಾಜಕೀಯ ಪುಟಗೋಸಿಗಳು ಬಿಜೆಪಿಯವರಲ್ಲ, ರಾಜಕೀಯ ಏನು ಅನ್ನೋದನ್ನ ತಿಳಿದವರು ಬಿಜೆಪಿಯವರು. ಹಳಿಯಾಳದಲ್ಲಿ ಬಿಜೆಪಿ ಬಾವುಟ ಹಾರಿಸಿಯೇ ಹಾರಿಸುತ್ತೇನೆ ಇದು ನಿಜ, ಅಲ್ಲಿವರೆಗೂ ನಾನು ರಾಜಕೀಯ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಜೆಪಿ ಸೇರ್ತಾರೋ ಅಥವಾ ನಮ್ಮ ಪಕ್ಷದ ಹೊಸ ಅಭ್ಯರ್ಥಿ ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರೋವರೆಗೂ ನಾನು ರಾಜಕೀಯ ನಿವೃತ್ತಿ ಪಡೆಯಲ್ಲ ಅಂತಾ ಅನಂತಕುಮಾರ್ ಹೆಗಡೆ ಶಪಥ ಮಾಡಿದರು.

 

Please follow and like us:
0
http://bp9news.com/wp-content/uploads/2018/06/Karnatakada-Miditha-7.jpeghttp://bp9news.com/wp-content/uploads/2018/06/Karnatakada-Miditha-7-150x150.jpegBP9 Bureauಉತ್ತರ ಕನ್ನಡಪ್ರಮುಖರಾಜಕೀಯಉತ್ತರಕನ್ನಡ : ದೇಶದ ಅತಿ ದೊಡ್ಡ ಪಕ್ಷ ಕಾಂಗ್ರೆಸ್‍ಗೆ ಇಂದು ರಾಜ್ಯದ ಪುಟಗೋಸಿ ಪಾರ್ಟಿಗೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಇಂದು ಬಿಜೆಪಿ ಅಭಿನಂದನಾ ಸಮಾರಂಭ ಏರ್ಪಡಿಸಿತ್ತು. ಶಿರಸಿ ಸಿದ್ದಾಪುರ, ಕುಮಟಾ ಹೊನ್ನಾವರ, ಕಾರವಾರ ಅಂಕೋಲ ಹಾಗೂ ಭಟ್ಕಳ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷದಿಂದ ಗೆಲುವು ಸಾಧಿಸಿದ ನೂತನ ಶಾಸಕರಿಗೆ ...Kannada News Portal