ಉತ್ತರಕನ್ನಡ :  ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಕಾರವಾರದ ರೂಪಾಲಿ ನಾಯ್ಕ್ ಅವರಿಗೆ ಗೆಲುವಿನ ಜೊತೆಗೆ  ದೇವರು ಮೈ ಮೇಲೆ ಬಂತೆ ಎನ್ನುವ ಅನುಮಾನ ಕಾಡುತ್ತಿದೆ.ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ದ 14 ಸಾವಿರ ಮತಗಳ ಅಂತರದಲ್ಲಿ ಗೆಲುವನ್ನ ಪಡೆದಿದ್ದ ರೂಪಾಲಿ ನಾಯ್ಕ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಗೆಲುವಿನ ನಂತರ ಅಂಕೋಲಾ ತಾಲೂಕಿನ ಶಾಂತದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ ರೂಪಾಲಿ ನಾಯ್ಕ್ ಮೈ ಮೇಲೆ ದೇವರು ಬಂದಿದೆ ಎನ್ನುವ ವಿಡಿಯೋ ಈಗ ವೈರಲ್​​ ಆಗುತ್ತಿದೆ. ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವ ಸಂದರ್ಭದಲ್ಲಿ  ರೂಪಾಲಿ ನಾಯ್ಕ್​​ ಉದ್ರೇಕಗೊಂಡಿದ್ದು, ಕೈಯಲ್ಲಿ ಹಣ್ಣುಕಾಯಿ ತಟ್ಟೆ ಹಿಡಿದು ಅಮ್ಮಾ..ಅಮ್ಮಾ.. ಎಂದು ಕೂಗಿದ್ದಾರೆ. ಈ ಘಟನೆಯಿಂದಾ ರೂಪಾಲಿ ನಾಯ್ಕ್ ಅವರ ಮೇಲೆ ದೇವರು ಬಂದಿತ್ತಾ ಎನ್ನು ಪ್ರಶ್ನೆ ಹರಿದಾಡುತ್ತಿದೆ.

 

 

 

Please follow and like us:
0
http://bp9news.com/wp-content/uploads/2018/05/vairal-Karnatakada-Miditha.jpeghttp://bp9news.com/wp-content/uploads/2018/05/vairal-Karnatakada-Miditha-150x150.jpegBP9 Bureauಉತ್ತರ ಕನ್ನಡಪ್ರಮುಖಉತ್ತರಕನ್ನಡ :  ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಕಾರವಾರದ ರೂಪಾಲಿ ನಾಯ್ಕ್ ಅವರಿಗೆ ಗೆಲುವಿನ ಜೊತೆಗೆ  ದೇವರು ಮೈ ಮೇಲೆ ಬಂತೆ ಎನ್ನುವ ಅನುಮಾನ ಕಾಡುತ್ತಿದೆ.ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ದ 14 ಸಾವಿರ ಮತಗಳ ಅಂತರದಲ್ಲಿ ಗೆಲುವನ್ನ ಪಡೆದಿದ್ದ ರೂಪಾಲಿ ನಾಯ್ಕ್ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಗೆಲುವಿನ ನಂತರ ಅಂಕೋಲಾ ತಾಲೂಕಿನ ಶಾಂತದುರ್ಗಾ ದೇವಸ್ಥಾನಕ್ಕೆ ಭೇಟಿ ನೀಡಿದ ರೂಪಾಲಿ ನಾಯ್ಕ್ ಮೈ ಮೇಲೆ ದೇವರು ಬಂದಿದೆ ಎನ್ನುವ ವಿಡಿಯೋ ಈಗ...Kannada News Portal