ಬೆಂಗಳೂರು: ಹವ್ಯಕ ಸಮಾಜ ಪುಟ್ಟ ಸಮಾಜ, ಆದರೆ ವಿದ್ಯಾರಣ್ಯಾಚಾರ್ಯರಂತಹ ಮಹಾನ್ ದಾರ್ಶನಿಕರು  ಉದಿಸಿದ ಸಂಸ್ಕಾರಯುತ ಸಮಾಜ ಎಂಬ ಹೆಮ್ಮೆ ನಮ್ಮದು. ಇತಿಹಾಸವನ್ನು ಅವಲೋಕಿಸಿದರೆ ನಮ್ಮ ಸಮಾಜದ ಅನೇಕ ಮಹಾನ್ ಕವಿಗಳು – ವಿದ್ವಾಂಸರು – ನಾಯಕರು ಹಾಗೂ ದಾರ್ಶನಿಕರು ಕೀರ್ತಿಶೇಷರಾಗಿದ್ದಾರೆ ಎಂದು ಶ್ರೀಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು.

ಮಲ್ಲೇಶ್ವರಂ ದಲ್ಲಿರುವ  ಅಖಿಲ ಹವ್ಯಕ ಮಹಾಸಭಾದ ನೂತನ ಕಟ್ಟಡಕ್ಕೆ ಪ್ರಥಮ ಬಾರಿಗೆ ಚಿತ್ತೈಸಿದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಮಹಾಸಭೆಯ ಗೌರವವನ್ನು ಸ್ವೀಕರಿಸಿ, ಭವನ ತುಂಬ ಸುಂದರವಾಗಿದೆ. ಹವ್ಯಕರ ಅಂತಸ್ತು ಮೇಲೇರಿದೆ ಎಂಬುದು ದೃಢವಾಗುತ್ತಿದೆ ಎಂದು ಮಾತನಾಡಿ,  ನೂತನ ಸಂಸ್ಕಾರವು ಆನುವಂಶೀಯವಾಗಿ ಬರುತ್ತವೆ. ಇವುಗಳನ್ನು ಅದೃಷ್ಟ ಸಂಸ್ಕಾರ ಎನಿಸುತ್ತವೆ. ನಮಗರಿವಿಲ್ಲದಂತೆ ನಮ್ಮನ್ನು ಬೇಡದ್ದರಲ್ಲಿ ತೊಡಗಿಸವ ವಾಸನೆಯನ್ನೇ ಅವಿದ್ಯೆ ಎಂದು ಕರೆದಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ಸಂಸ್ಕಾರವನ್ನು ಬಲವಾಗಿ ನೀಡಿದರೆ ಅದೃಷ್ಟಸಂಸ್ಕಾರವನ್ನೂ ಮೀರಿಸಬಹುದು. ಸಂಸ್ಕಾರದ ಪ್ರಕ್ರಿಯೆ ಸೂಕ್ಷ್ಮ ಮತ್ತು ನಿಧಾನ, ಕಮಂಡಲವನ್ನು ಪ್ರತಿದಿನ ತೊಳೆಯದಿದ್ದಲ್ಲಿ ಒಳಗೆ ಪಾಚಿಕಟ್ಟಲು ಮೊದಲಾಗುತ್ತದೆ. ನಾವೂ ನಮ್ಮ ಒಳಗಿನ ಕೊಳೆತೊಳೆಬೇಕು, ಆ ಕೆಲಸವನ್ನು ಸಂಸ್ಕಾರ ಮಾಡುತ್ತದೆ. ಸುಪ್ತಮನಸ್ಸಿನ ಒಳಗೆ ಸೇರಿದ ಒಳ್ಳೆಯ ಅಂಶಗಳು ಸಂಸ್ಕಾರವೆನಿಸುತ್ತದೆ. ಮಹಾಸಭೆಯಲ್ಲಿ ಸಂಸ್ಕಾರ ಎಂಬ ಮಾತು ಈಗೀಗ ಜಾಸ್ತಿ ಕೇಳಿ ಬರುತ್ತಿದೆ. ಮಹಾಸಭೆಯಿಂದ ಸಂಸ್ಕಾರೋತ್ಸವವನ್ನು ನಡೆಸಿರುವದು ಅಭಿನಂದನೀಯ ಎಂದು ಮಹಾಸಭೆಯನ್ನು ಶ್ಲಾಘಿಸಿದರು.

ಹವ್ಯಕರ ಮನೆಗಳಲ್ಲಿ ಪಂಚ ಯಜ್ಞಗಳು ನಡೆಯುತ್ತಿದ್ದವು. ಈಗ ಪೂಜೆ ಮತ್ತು ಸಂಧ್ಯೋಪಾಸನೆ ಉಳಿದಿದೆ.ಕನಿಷ್ಟಪಕ್ಷ ಗೀತಾಧ್ಯಯನ ಮತ್ತು ಪ್ರಾಣಾಯಾಮಗಳನ್ನಾದರೂ ತಪಸ್ಸಿನಂತೆ ಮಾಡಬೇಕು. ಗೀತಾಪಾರಾಯಣ ಕೇಂದ್ರವು ನಿರಂತರವಾಗಿ ಮಹಾಸಭೆಯಲ್ಲಿ ನಡೆಸಿದರೆ ಸಂತೋಷವಾಗುತ್ತದೆ ಎಂದರು.

ಹವ್ಯಕರು ಕೇವಲ ಒಂದೇ ಸಂತಾನವನ್ನು ಹೊಂದಿದರೆ. ಕೆಲವು ಅನ್ಯ ಸಮಾಜದಂತೆ  ಕ್ರಮೇಣ ಸಮಾಜವೇ  ನಷ್ಟವಾಗುವ ಸಾಧ್ಯತೆ ಇದೆ. ಅಂತರ್ಜಾತೀಯ ವಿವಾಹವೂ ಸಹ ಕುಟುಂಬ ವಿಘಟನೆಗೆ ಕಾರಣವಾಗುತ್ತದೆ.  ಇವೆಲ್ಲವನ್ನು ಹತೋಟಿಗೆ ತರಬೇಕಾದುದು ಸಂಘಟನೆಗಳ ಕರ್ತವ್ಯವಾಗಿದ್ದು, ಮಹಾಸಭೆ ಈದಿಶೆಯಲ್ಲಿ ಕಾರ್ಯಪ್ರವೃಉತ್ತವಾಗಿದ್ದು, ಇನ್ನೂ ಹೆಚ್ಚಿನ ರೀತಿಯಲ್ಲಿ ಕಾರ್ಯಪ್ರವೃತ್ತವಾಗಲಿ ಎಂದು ಆಶಿಸಿದರು.

ಹವ್ಯಕ ಮಹಾಸಭಾದ ಅಧ್ಯಕ್ಷರಾದ ಡಾ. ಗಿರಿಧರ್ ಕಜೆಯವರು ಪ್ರಾಸಾವಿಕ ಮಾತನಾಡಿ,  ನಮ್ಮ ಸಮಾಜಕ್ಕೆ ಕುಲಗುರುಗಳೆಂಬ ಎರಡು ಅನರ್ಘ್ಯ ರತ್ನಗಳಿವೆ, ಸಸ್ಯ ಮತ್ತು ಗೀತೆ ಜಗತ್ತಿಗೆ ಅನಿವಾರ್ಯ ಅಂಶಗಳು. ಅದರ ರಕ್ಷಣೆಯ ಅಭಿಯಾನವನ್ನು ಮುನ್ನಡೆಸುತ್ತಿರುವ ಪರಮಪೂಜ್ಯ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಇಂದು ಸಮಸ್ತ ಹವ್ಯಕ ಸಮಾಜದ ಈ ಮನೆಗೆ ಬಂದಿದ್ದಾರೆ, ಇದು ನಮ್ಮೆಲ್ಲರ  ಭಾಗ್ಯ ಎಂದ ಅವರು, ಮಹಾಸಭೆಯಲ್ಲಿ ಈಗ ನಡೆಯುತ್ತಿರುವ ಸಂಸ್ಕಾರ ಮಾಲಿಕೆಯ ಕಾರ್ಯಕ್ರಮಗಳ ಕುರಿತು ಮತ್ತು ಉದ್ದೇಶಿತ ಹವ್ಯಕ ವಿಶ್ವಸಮ್ಮೇಳನಗಳ ಕುರಿತು ಮಾಹಿತಿ ನೀಡಿದರು. ಪರಮಪೂಜ್ಯರು ಸಮಾಜೋತ್ಥಾನದ ಕಾರ್ಯಗಳಿಗೆ ಮಾರ್ಗದರ್ಶನವನ್ನೂ ಹಾಗೂ ಆಶಿರ್ವಾದವನ್ನೂ ಅನುಗ್ರಹಿಸಬೇಕು ಎಂದು ಪ್ರಾರ್ಥಿಸಿದರು.

ಮಹಾಸಭೆಗೆ ಆಗಮಿಸಿದ ಶ್ರೀಗಳನ್ನು ವಾದ್ಯಘೋಷ ಹಾಗೂ ಪೂರ್ಣಕುಂಬದೋಂದಿಗೆ  ಸ್ವಾಗತಿಸಲಾಯಿತು, ಗೌರವ ಪ್ರಧಾನ ಕಾರ್ಯದರ್ಶಿಗಳಾದ ವೇಣುವಿಘ್ನೇಶ ದಂಪತಿಗಳು ಸ್ವಾಗತ ಧೂಲೀಪಾದುಕಾಪೂಜೆ ನೆರವೇರಿಸಿದರು, ಮಹಾಸಭೆಯ ಪರವಾಗಿ ಫಲಕಾಣಿಕೆ ಸಮರ್ಪಿಸಲಾಯಿತು. ಸಭೆಗೂ ಮೊದಲು ಅನಸೂಯಾ ಮಳಲಗದ್ದೆ ಪ್ರಾರ್ಥನೆ ಮಾಡಿದರು, ಶ್ರೀರಾಮ ಭಟ್ಟ ಕಾರ್ಯಕ್ರಮ ನಿರೂಪಿಸಿದರು. ಹವ್ಯಕ ಮಹಾಸಭೆಯ ಪದಾಧಿಕಾರಿಗಳು, ಸಂಚಾಲಕರು, ಸದಸ್ಯರು ಉಪಸ್ಥಿತರಿದ್ದರು.

 

 

Please follow and like us:
0
http://bp9news.com/wp-content/uploads/2017/12/DSC_2885.jpghttp://bp9news.com/wp-content/uploads/2017/12/DSC_2885-150x150.jpgBP9 Bureauಆಧ್ಯಾತ್ಮಉತ್ತರ ಕನ್ನಡಬೆಂಗಳೂರು: ಹವ್ಯಕ ಸಮಾಜ ಪುಟ್ಟ ಸಮಾಜ, ಆದರೆ ವಿದ್ಯಾರಣ್ಯಾಚಾರ್ಯರಂತಹ ಮಹಾನ್ ದಾರ್ಶನಿಕರು  ಉದಿಸಿದ ಸಂಸ್ಕಾರಯುತ ಸಮಾಜ ಎಂಬ ಹೆಮ್ಮೆ ನಮ್ಮದು. ಇತಿಹಾಸವನ್ನು ಅವಲೋಕಿಸಿದರೆ ನಮ್ಮ ಸಮಾಜದ ಅನೇಕ ಮಹಾನ್ ಕವಿಗಳು - ವಿದ್ವಾಂಸರು - ನಾಯಕರು ಹಾಗೂ ದಾರ್ಶನಿಕರು ಕೀರ್ತಿಶೇಷರಾಗಿದ್ದಾರೆ ಎಂದು ಶ್ರೀಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಹೇಳಿದರು. ಮಲ್ಲೇಶ್ವರಂ ದಲ್ಲಿರುವ  ಅಖಿಲ ಹವ್ಯಕ ಮಹಾಸಭಾದ ನೂತನ ಕಟ್ಟಡಕ್ಕೆ ಪ್ರಥಮ ಬಾರಿಗೆ ಚಿತ್ತೈಸಿದ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು, ಮಹಾಸಭೆಯ ಗೌರವವನ್ನು ಸ್ವೀಕರಿಸಿ, ಭವನ...Kannada News Portal