ಉತ್ತರಕನ್ನಡ : ಜಿಲ್ಲೆಯಲ್ಲಿ ಚುನಾವಣೆ ಉತ್ಸಾಹದಿಂದಲೇ ಆರಂಭವಾಗಿದ್ದು ಇಲ್ಲಿಯವರೆಗೆ 28%  ಮತದಾನವಾಗಿದೆ. ಇನ್ನು ಜಿಲ್ಲೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಈಗಾಗಲೇ ಮತಚಲಾಯಿಸಿದ್ದಾರೆ.

ಹಳಿಯಾಳದ ಕಾಂಗ್ರೆಸ್​​ ಅಭ್ಯರ್ಥಿ, ಸಚಿವ  ಆರ್ ವಿ ದೇಶಪಾಂಡೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಹಳಿಯಾಳದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ್ದು, ಪತ್ನಿ ರಾಧಾ ದೇಶಪಾಂಡೆ,ಪುತ್ರರಾದ ಪ್ರಸಾದ ದೇಶಪಾಂಡೆ, ಪ್ರಶಾಂತ ದೇಶಪಾಂಡೆ, ಸೊಸೆಯಂದಿರಾದ ಅವನಿ ಪ್ರಸಾದ, ಮೇಘನಾ ಪ್ರಶಾಂತ ರೊಂದಿಗೆ ಮತದಾನ ಮಾಡಿದ ಸಚಿವ ಆರ್ ವಿ ದೇಶಪಾಂಡೆ .




ಯಲ್ಲಾಪುರ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಶಿವರಾಮ ಹೆಬ್ಬಾರ್ ತಮ್ಮ ಪತ್ನಿ ಹಾಗು ಮಗ, ಮಗಳು, ಸೊಸೆ ಜೊತೆಗೂಡಿ ಬಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಅರಬೈಲ್ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನು ಚಲಾಯಿಸಿದರು.

ಇನ್ನು ಶಿರಸಿಯಲ್ಲಿ ಕಾಗೇರಿ, ಭೀಮಣ್ಣ ನಾಯ್ಕ್​​​, ಅನಂತಕುಮಾರ್​​ ಹೆಗಡೆ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಇನ್ನು ಉಳಿದ ಕ್ಷೇತ್ರದಲ್ಲಿ ಕೂಡಾ ಎಲ್ಲ ಪಕ್ಷಗಳ ಅಭ್ಯರ್ಥಿಗಳು ತಮ್ಮ ಹಕ್ಕನ್ನ ಚಾಲಾಯಿಸಿದ್ದು, ಉತ್ಸಾಹದಿಂದ  ಜಿಲ್ಲೆಯಲ್ಲಿ ಮತದಾನದ ಪ್ರಕ್ರಿಯೆ ನಡೆಯುತ್ತಿದೆ.

Please follow and like us:
0
http://bp9news.com/wp-content/uploads/2018/05/districtuttarakannada_1.jpghttp://bp9news.com/wp-content/uploads/2018/05/districtuttarakannada_1-150x150.jpgBP9 Bureauಉತ್ತರ ಕನ್ನಡರಾಜಕೀಯಉತ್ತರಕನ್ನಡ : ಜಿಲ್ಲೆಯಲ್ಲಿ ಚುನಾವಣೆ ಉತ್ಸಾಹದಿಂದಲೇ ಆರಂಭವಾಗಿದ್ದು ಇಲ್ಲಿಯವರೆಗೆ 28%  ಮತದಾನವಾಗಿದೆ. ಇನ್ನು ಜಿಲ್ಲೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಈಗಾಗಲೇ ಮತಚಲಾಯಿಸಿದ್ದಾರೆ. ಹಳಿಯಾಳದ ಕಾಂಗ್ರೆಸ್​​ ಅಭ್ಯರ್ಥಿ, ಸಚಿವ  ಆರ್ ವಿ ದೇಶಪಾಂಡೆ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ. ಹಳಿಯಾಳದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತ ಚಲಾವಣೆ ಮಾಡಿದ್ದು, ಪತ್ನಿ ರಾಧಾ ದೇಶಪಾಂಡೆ,ಪುತ್ರರಾದ ಪ್ರಸಾದ ದೇಶಪಾಂಡೆ, ಪ್ರಶಾಂತ ದೇಶಪಾಂಡೆ, ಸೊಸೆಯಂದಿರಾದ ಅವನಿ ಪ್ರಸಾದ, ಮೇಘನಾ ಪ್ರಶಾಂತ ರೊಂದಿಗೆ...Kannada News Portal