ಉತ್ತರ ಕನ್ನಡ : ವಿಧಾನಸಭೆ ಚುನಾವಣಾ ಮತದಾನದ ಹಿನ್ನೆಲೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತದಾನ ಮಾಡಿದ್ದಾರೆ. ಶಿರಸಿಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದ ಕೇಂದ್ರ ಸಚಿವ ಪತ್ನಿ ರೂಪಾ ಜೊತೆ ಮತಗಟ್ಟೆಗೆ ಆಗಮಿಸಿದ್ದರು.



ಶಿರಸಿಯ ಕೆಎಸ್ಆರ್ಟಿಸಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಹೆಗಡೆ, ಮತದಾನ ವ್ಯಕ್ತಿಯ ಸ್ವಾಭಿಮಾನದ ಸಂಕೇತ, ಸಂವಿಧಾನ ನೀಡಿರುವ ಅಮೂಲ್ಯ ಅವಕಾಶ ಇದಾಗಿದೆ ಎಂದರು. ರಾಜ್ಯದಲ್ಲಿ ಜನಪರ ಆಡಳಿತದ ಸರ್ಕಾರ ಬರಲಿದೆ, ಹೊಸ ವ್ಯವಸ್ಥೆ ರಚಿಸಲು ಈ ಸಂದರ್ಭ ಕೂಡಿ ಬಂದಿದೆ. ಮತದಾನದಲ್ಲಿ ಉತ್ಸಾಹದಲ್ಲಿ ಜನರು ಭಾಗಿಯಾಗುತ್ತಿದ್ದಾರೆ ಎಂದು ಅನಂತಕುಮಾರ ಹೆಗಡೆ ಹೇಳಿದ್ದಾರೆ.

Please follow and like us:
0
http://bp9news.com/wp-content/uploads/2018/05/Karnatakada-Miditha-51.jpeghttp://bp9news.com/wp-content/uploads/2018/05/Karnatakada-Miditha-51-150x150.jpegBP9 Bureauಉತ್ತರ ಕನ್ನಡರಾಜಕೀಯಉತ್ತರ ಕನ್ನಡ : ವಿಧಾನಸಭೆ ಚುನಾವಣಾ ಮತದಾನದ ಹಿನ್ನೆಲೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತದಾನ ಮಾಡಿದ್ದಾರೆ. ಶಿರಸಿಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದ ಕೇಂದ್ರ ಸಚಿವ ಪತ್ನಿ ರೂಪಾ ಜೊತೆ ಮತಗಟ್ಟೆಗೆ ಆಗಮಿಸಿದ್ದರು. ಶಿರಸಿಯ ಕೆಎಸ್ಆರ್ಟಿಸಿ ಮತಗಟ್ಟೆಯಲ್ಲಿ ಮತದಾನ ಮಾಡಿದ ಹೆಗಡೆ, ಮತದಾನ ವ್ಯಕ್ತಿಯ ಸ್ವಾಭಿಮಾನದ ಸಂಕೇತ, ಸಂವಿಧಾನ ನೀಡಿರುವ ಅಮೂಲ್ಯ ಅವಕಾಶ ಇದಾಗಿದೆ ಎಂದರು. ರಾಜ್ಯದಲ್ಲಿ ಜನಪರ ಆಡಳಿತದ ಸರ್ಕಾರ ಬರಲಿದೆ, ಹೊಸ ವ್ಯವಸ್ಥೆ ರಚಿಸಲು ಈ...Kannada News Portal