ಉತ್ತರಕನ್ನಡ : ನನ್ನನ್ನು ಸ್ವೀಕಾರ ಮಾಡದ ರಾಜಕೀಯ ನನಗೆ ಬೇಡ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶಿರಸಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಶಶಿಭೂಷಣ ಹೆಗಡೆ ಹೇಳಿದ್ದಾರೆ.

ಸಿದ್ಧಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಶಿಭೂಷಣ,  ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವ ಎಲ್ಲಾ ಲಕ್ಷಣಗಳಿತ್ತು. ಆದರೆ ಅದು ಆಗಲಿಲ್ಲ. ನನ್ನನ್ನು ಸ್ವೀಕಾರ ಮಾಡದ ರಾಜಕೀಯ ನನಗೆ ಬೇಡ, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಪಕ್ಷವನ್ನು ಇನ್ನೂ ಬಲಪಡಿಸಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ.
ನಂತರ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಬಿ ಆರ್ ನಾಯ್ಕ್​​​ , ಜಿಲ್ಲೆಯಲ್ಲಿ ಜೆಡಿಎಸ್ ನ ಸೋಲು ನಂಬಲು ಸಾಧ್ಯವಿಲ್ಲ. ಕೆಲವು ಕುತಂತ್ರಗಳಿಂದಾಗಿ ಜೆಡಿಎಸ್ ಸೋತಿದೆ. EVM ಮಿಷನ್ ನ ಪ್ರಭಾವದಿಂದಾಗಿ ಬಿಜೆಪಿ ಗೆದ್ದಿದೆ.ಈ ಬಗ್ಗೆ ನಾವು ಚುನಾವಣಾ ಆಯೋಗಕ್ಕೆ ದೂರನ್ನು ನೀಡಲು ಯೋಚಿಸಿದ್ದೇವೆ ಎಂದಿದ್ದಾರೆ.

 

 

Please follow and like us:
0
http://bp9news.com/wp-content/uploads/2018/05/Karnatakada-Miditha-56.jpeghttp://bp9news.com/wp-content/uploads/2018/05/Karnatakada-Miditha-56-150x150.jpegBP9 Bureauಉತ್ತರ ಕನ್ನಡಪ್ರಮುಖರಾಜಕೀಯಉತ್ತರಕನ್ನಡ : ನನ್ನನ್ನು ಸ್ವೀಕಾರ ಮಾಡದ ರಾಜಕೀಯ ನನಗೆ ಬೇಡ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶಿರಸಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಶಶಿಭೂಷಣ ಹೆಗಡೆ ಹೇಳಿದ್ದಾರೆ. ಸಿದ್ಧಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಶಿಭೂಷಣ,  ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲುವ ಎಲ್ಲಾ ಲಕ್ಷಣಗಳಿತ್ತು. ಆದರೆ ಅದು ಆಗಲಿಲ್ಲ. ನನ್ನನ್ನು ಸ್ವೀಕಾರ ಮಾಡದ ರಾಜಕೀಯ ನನಗೆ ಬೇಡ, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಿಸುತ್ತೇನೆ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ....Kannada News Portal