ಬೆಂಗಳೂರು : ತೈಲ ಬೆಲೆ ಹಾಗೂ ಮೂರನೇ ಪಾರ್ಟಿ ವಿಮೆಯ ಮೊತ್ತ ಹೆಚ್ಚಳ ಖಂಡಿಸಿ ಇಂದಿನಿಂದ ದೇಶಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಲಾರಿ ಮುಷ್ಕರದಿಂದ ರಾಜ್ಯದಾದ್ಯಂತ ಸರಕು ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯವಾಗಿದ .

ಹಾಲು ಮತ್ತು ತರಕಾರಿ ಲಾರಿಗಳು ಹೊರತು ಪಡಿಸಿ ಮರಳು ಹಾಗೂ ಇತರೆ ಸರಕು ಸಾಗಣೆ ಲಾರಿ ಮಾಲೀಕರು ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಇದರಿಂದ ದೈನಂದಿನ ವಹಿವಾಟಿನಲ್ಲಿ ಅಡಚಣೆ ಉಂಟಾಗಿದೆ.

ಪೆಟ್ರೋಲ್, ಡಿಸೇಲ್, ಟೋಲ್ ಶುಲ್ಕ ಹಾಗೂ ಇನ್ಸೂರೇಷನ್ ಪ್ರಿಮಿಯಂ ದರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಲಾರಿ ಮಾಲೀಕರು ಮತ್ತು ಚಾಲಕರು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದರು.ಬೆಲೆ ಹೆಚ್ಚಳದಿಂದ ಮಾಲೀಕರು ಹೈರಾಣಾಗಿ ಹೋಗಿದ್ದಾರೆ. ಹಲವು ಬಾರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಅನ್ಯ ಮಾರ್ಗವಿಲ್ಲದೆ ಪ್ರತಿಭಟನೆಯ ಹಾದಿ ಹಿಡಿಯಬೇಕಾಗಿದೆ. ಸರಕು ಸರಬರಾಜಿನಲ್ಲಿ ತುಸು ಏರುಪೇರಾಗಿದ್ದು , ಸಾರ್ವಜನಿಕರು ಸ್ಪಂದಿಸಬೇಕೆಂದು ಲಾರಿ ಮಾಲೀಕರೊಬ್ಬರು ಕೇಳಿಕೊಂಡಿದ್ದಾರೆ .

Please follow and like us:
0
http://bp9news.com/wp-content/uploads/2018/06/WhatsApp-Image-2018-06-18-at-10.50.53-AM-1024x768-1.jpeghttp://bp9news.com/wp-content/uploads/2018/06/WhatsApp-Image-2018-06-18-at-10.50.53-AM-1024x768-1-150x150.jpegPolitical Bureauಪ್ರಮುಖರಾಜಕೀಯರಾಷ್ಟ್ರೀಯUncertainty of the Lorry strike begins at the Center !!!: Complete variation in freight transport !!!ಬೆಂಗಳೂರು : ತೈಲ ಬೆಲೆ ಹಾಗೂ ಮೂರನೇ ಪಾರ್ಟಿ ವಿಮೆಯ ಮೊತ್ತ ಹೆಚ್ಚಳ ಖಂಡಿಸಿ ಇಂದಿನಿಂದ ದೇಶಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಟಾವಧಿ ಲಾರಿ ಮುಷ್ಕರದಿಂದ ರಾಜ್ಯದಾದ್ಯಂತ ಸರಕು ಸಾಗಣೆಯಲ್ಲಿ ಸಂಪೂರ್ಣ ವ್ಯತ್ಯಯವಾಗಿದ . ಹಾಲು ಮತ್ತು ತರಕಾರಿ ಲಾರಿಗಳು ಹೊರತು ಪಡಿಸಿ ಮರಳು ಹಾಗೂ ಇತರೆ ಸರಕು ಸಾಗಣೆ ಲಾರಿ ಮಾಲೀಕರು ಸಂಚಾರವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಇದರಿಂದ ದೈನಂದಿನ ವಹಿವಾಟಿನಲ್ಲಿ ಅಡಚಣೆ ಉಂಟಾಗಿದೆ. var domain = (window.location != window.parent.location)? document.referrer...Kannada News Portal