ಬೆಂಗಳೂರು : ಒಂದು ವೇಳೆ 2019 ರಲ್ಲಿ ಕಾಂಗ್ರೇಸ್ ಗೆದ್ದರೆ ತಾವು ಪ್ರಧಾನಿ ಆಗುವುದಾಗಿ ರಾಹುಲ್ ಗಾಂಧಿ ಹೇಳುತ್ತಾರೆ. ಹಾಗಾದರೇ ಅವರಿಗೆ ತಮ್ಮ ಮೇಲೆ ನಂಬಿಕೆಯಿಲ್ಲವೇ? ಅವರ ಭವಿಷ್ಯದ ಬಗ್ಗೆ ಗೊತ್ತಿಲ್ಲದವರಿಂದ ದೇಶದ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವೇ ಎಂದು ಇರಾನಿ ಟೀಕಿಸಿದರು.

ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಹಿಂದೊಮ್ಮೆ ಮನಮೋಹನ್ ಸಿಂಗ್ ನೇತೃತ್ವದಲ್ಲಿ ರಿಮೋಟ್ ಕಂಟ್ರೋಲ್ ಸರಕಾರವಿತ್ತು ಆದರೆ ನಾವು ಬಂದ ಮೇಲೆ ರಿಮೋಟ್ ಕಂಟ್ರೋಲ್ ಸರಕಾರ ಹೋಗಿದೆ.ಯಾದಗಿರಿಯಲ್ಲಿಯೂ ಕೂಡಾ ಹಾಗೆ ರಿಮೋಟ್ ಕಂಟ್ರೋಲ್ ಶಾಸಕರಿದ್ದು ಆಯ್ಕೆಯಾದವರು ಒಬ್ಬರು ಅಧಿಕಾರ ಚಲಾಯಿಸುವವರು ಒಬ್ಬರು ಇದು ಇದೇ 12 ರಂದು ಬಿಜೆಪಿ ಪರ ಮತ ನೀಡುವ ಮೂಲಕ ಕೊನೆಗಾಣಿಸಿ ಎಂದು ಮತದಾರರಿಗೆ ಮನವಿ ಮಾಡಿದರು.

ರಾಜ್ಯ ಸರ್ಕಾರ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸೀದಾ ರೂಪಯ್ಯ ಸರಕಾರ ಅಧಿಕಾರ ನಡೆಸಿದೆ, ಅವರ ಭ್ರಷ್ಟಾಚಾರದ  ವಿರುದ್ದ ಹೋರಾಟ ನಡೆಸಿದ ಬಿಜೆಪಿ ಗೆಲುವು ಪ್ರತಿ ಕಾರ್ಯಕರ್ತರ ಗೆಲುವಾಗಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆ ಮಾಡಲಿದೆ ಎಂದ ಕೇಂದ್ರ ಸಚಿವರು, ಯಡಿಯೂರಪ್ಪ ಮುಖ್ಯಮಂತ್ರಿ ಯಾದ ಮೊದಲ ಸಂಪುಟ ಸಭೆಯಲ್ಲಿಯೇ ರೈತರ ರೂ 1 ಲಕ್ಷದವರೆಗಿನ ಸಾಲ ಮನ್ನಾ ಮಾಡಲಾಗುವುದು.8500 ಕೋಟಿ ವೆಚ್ಚದಲ್ಲಿ ದಲಿತರಿಗೆ ಹಾಗೂ ರೂ 7500 ಕೋಟಿ ವೆಚ್ಚದಲ್ಲಿ OBC ಯವರಿಗೆ ಮನೆ ಕಟ್ಟಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಮಹಿಳಾ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದ ಇರಾನಿ, ರೂ 10000 ಕೋಟಿ ಖರ್ಚು ಮಾಡಿ ಮಹಿಳೆಯರಿಗೆ ಕಾರ್ಯಕ್ರಮ ಜಾರಿಗೊಳಿಸುತ್ತೇವೆ ಎಂದು ಮಹಿಳೆಯರ ಕರತಾಡನದ ನಡುವೆ ಘೋಷಿಸಿದರು.

ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಮಾತನಾಡಿ, ತಾವು ಶಾಸಕರಾದ ಕುಡಿಯುವ ನೀರು, ನೀರಾವರಿ ಯೋಜನೆಗೆ ಒತ್ತು ನೀಡುವುದಾಗಿ ಹೇಳಿದರು. ಕಾಂಗ್ರೇಸ್ ಅಭ್ಯರ್ಥಿ ಎ.ಬಿ.ಮಾಲಕರೆಡ್ಡಿ ಇದು ನನ್ನ ಕೊನೆ ಚುನಾವಣೆ ಎಂದು ಪ್ರತಿಬಾರಿ ಹೇಳುತ್ತಲೇ ಚುನಾವಣೆಗೆ ನಿಲ್ಲುತ್ತಾರೆ ಅವರ ಮಾತ‌ನ್ನು ಜನರು ನಂಬಬಾರದು ಎಂದರು.

Please follow and like us:
0
http://bp9news.com/wp-content/uploads/2018/05/rahul-smriti.jpghttp://bp9news.com/wp-content/uploads/2018/05/rahul-smriti-150x150.jpgPolitical Bureauಗದಗಪ್ರಮುಖರಾಜಕೀಯUnion Minister Smriti Irani criticizes Rahul for NEXT PMಬೆಂಗಳೂರು : ಒಂದು ವೇಳೆ 2019 ರಲ್ಲಿ ಕಾಂಗ್ರೇಸ್ ಗೆದ್ದರೆ ತಾವು ಪ್ರಧಾನಿ ಆಗುವುದಾಗಿ ರಾಹುಲ್ ಗಾಂಧಿ ಹೇಳುತ್ತಾರೆ. ಹಾಗಾದರೇ ಅವರಿಗೆ ತಮ್ಮ ಮೇಲೆ ನಂಬಿಕೆಯಿಲ್ಲವೇ? ಅವರ ಭವಿಷ್ಯದ ಬಗ್ಗೆ ಗೊತ್ತಿಲ್ಲದವರಿಂದ ದೇಶದ ಭವಿಷ್ಯ ಉಜ್ವಲಗೊಳ್ಳಲು ಸಾಧ್ಯವೇ ಎಂದು ಇರಾನಿ ಟೀಕಿಸಿದರು. ಅಭ್ಯರ್ಥಿ ವೆಂಕಟರೆಡ್ಡಿ ಮುದ್ನಾಳ್ ಪರ ಮತಯಾಚಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಹಿಂದೊಮ್ಮೆ ಮನಮೋಹನ್ ಸಿಂಗ್ ನೇತೃತ್ವದಲ್ಲಿ ರಿಮೋಟ್ ಕಂಟ್ರೋಲ್ ಸರಕಾರವಿತ್ತು ಆದರೆ ನಾವು ಬಂದ ಮೇಲೆ ರಿಮೋಟ್...Kannada News Portal