ಲಕ್ನೋ :  ನಿರ್ಮಾಣ ಹಂತದಲ್ಲಿದ್ದ  ಮೇಲು ಸೇತುವೆ  ಕುಸಿದಿರುವ ಘಟನೆ ಉತ್ತರ ಪ್ರದೇಶದ ಭಸ್ತಿ ಜಿಲ್ಲಿಯಲ್ಲಿ  ಇಂದು ಬೆಳಗಿನ ಜಾವದಲ್ಲಿ ಸಂಭವಿಸಿದೆ.
ಈ ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನು ಸದ್ಯ ಚಿಕತ್ಸೆಗೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಒಬ್ಬರು  ತಿಳಿಸಿದ್ದಾರೆ. ಮೇಲುಸೇತುವೆಗೆ ಹಾಕಲಾಗಿದ್ದ ಕಬ್ಬಿಣದ ಕಂಬಿಗಳು ಅಲುಗಾಡುತ್ತಲೆ ನೆಲಕ್ಕೆ ಅಪ್ಪಳಿಸಿದವು, ಇದರಿಂದಾಗಿ ಸೇತುವೆ ಕುಸಿದಿದೆ ಎಂದು ಹೇಳಿದರು. ಎರಡು ವಾರ ನಿರಂತರ ಮಳೆ ಸುರಿಯುತ್ತಿರುವುದರಿಂದ ತೇವಾಂಶದಿಂದಾಗಿ ಸೇತುವೆ ಅರ್ಧಭಾಗ ಕುಸಿದಿದೆ.

ಈ ಸಂಬಂಧ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿರುವ ಯೋಗಿ ಆಧಿತ್ಯನಾಥ್  ಅವರು ಸ್ಥಳೀಯ ಅಧಿಕಾರಿಗೆಳಿಗೆ ಮೇಲುಸೇತುವೆಯ ಅವಶೇಷಗಳನ್ನು ಕೂಡಲೆ ತರೆವುಮಾಡಬೇಕು ಮತ್ತು ರಾಷ್ಟ್ರೀಯ ಹೆದ್ದಾರಿಗೆ ಯಾವುದೆ ರೀತಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಕ್ರಮಕೈಗೊಳ್ಳಬೇಕೆಂದು ಆದೇಶ ನೀಡಿದ್ದಾರೆ.  ಈ ಸೇತುವೆಯ ನಿರ್ಮಾಣದ  ಗುತ್ತಿಗೆಯು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಮಂತ್ರಾಲಯಕ್ಕೆ ಸೇರುತ್ತದೆ ಎಂದು ತಿಳಿದುಬಂದಿದೆ.

ಇನ್ನು ಸ್ಥಳೀಯ ನಿವಾಸಿಗಳು ಈ ಘಟನೆಯೆ ಬೆಳವಣಿಗೆಯನ್ನು ನೋಡಿ ಕೆಳದವಾರವಷ್ಠೆಯೆ ಇಲ್ಲಿಯ ಸ್ಥಳೀಯ ಅಧಿಕಾರಿಗಳು ಸೇತುವೆಯ ನಿರ್ಮಾಣವನ್ನು ವೀಕ್ಷಿಸಿದ್ದರು.
ಇತ್ತ ಜಿಲ್ಲೆ ಮ್ಯಾಜಿಸ್ಟ್ರೇಟ್ ರಾಜ್ ಶೇಖರವರು ಹೇಳಿಕೆ ಒಂದರಲ್ಲಿ  ಜಿಲ್ಲಾ ಅಧಿಕಾರಿಗಳು ರಾಷ್ಟ್ರೀಯಾ ಹೆದ್ದಾರಿ ಪ್ರಾಧಿಕಾರಕ್ಕೆ ಈ ಮೇಲು ಸೇತುವೆ ಯ ನಿರ್ಮಾಣದ ಬಗ್ಗೆ ಅನುಮಾನಗಳನ್ನು ವ್ಯಕ್ತಪಡೆಸಿದ್ದರು. ಹಾಗೂ ಸೂಕ್ತಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು

ಕಳೆದವಾರವಷ್ಟೆ ಆಗ್ರ-ಲಕ್ನೋ ಸಂಪರ್ಕರಸ್ತೆಯು ಭಾರಿ ಮಳೆಗೆ  ಕುಸಿದ ಘಟನೆ ಸಂಭವಿಸಿತ್ತು ಇದರಿಂದಾಗಿ ಕಾರಿನಲ್ಲಿದ್ದ 4 ಜನರು ಅವಘಡದಲ್ಲಿ ಸಾವಿಗೀಡಾಗಿದ್ದರು.

Please follow and like us:
0
http://bp9news.com/wp-content/uploads/2018/08/up-flyover-collapse.jpghttp://bp9news.com/wp-content/uploads/2018/08/up-flyover-collapse-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯಲಕ್ನೋ :  ನಿರ್ಮಾಣ ಹಂತದಲ್ಲಿದ್ದ  ಮೇಲು ಸೇತುವೆ  ಕುಸಿದಿರುವ ಘಟನೆ ಉತ್ತರ ಪ್ರದೇಶದ ಭಸ್ತಿ ಜಿಲ್ಲಿಯಲ್ಲಿ  ಇಂದು ಬೆಳಗಿನ ಜಾವದಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರಗಾಯವಾಗಿದ್ದು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನು ಸದ್ಯ ಚಿಕತ್ಸೆಗೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ. ಇನ್ನು ಘಟನೆಯನ್ನು ನೋಡಿದ ಪ್ರತ್ಯಕ್ಷದರ್ಶಿಒಬ್ಬರು  ತಿಳಿಸಿದ್ದಾರೆ. ಮೇಲುಸೇತುವೆಗೆ ಹಾಕಲಾಗಿದ್ದ ಕಬ್ಬಿಣದ ಕಂಬಿಗಳು ಅಲುಗಾಡುತ್ತಲೆ ನೆಲಕ್ಕೆ ಅಪ್ಪಳಿಸಿದವು, ಇದರಿಂದಾಗಿ ಸೇತುವೆ ಕುಸಿದಿದೆ ಎಂದು ಹೇಳಿದರು. ಎರಡು ವಾರ ನಿರಂತರ...Kannada News Portal