ಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಈ ಕುಂಭದ್ರೋಣ ಮಳೆ ಇಂದೂ ಕೂಡ ಮುಂದುವರೆದಿದ್ದು, ಸ್ಥಳೀಯ ಶಾಲಾ-ಕಾಲೇಜುಗಳು, ನಗರ ಸಾರಿಗೆ, ರೈಲು ಸಂಚಾರ, ಟ್ಯಾಕ್ಸಿ, ಗೂಡ್ಸ್, ಆಟೋ ಸೇರಿದಂತೆ ಇಡೀ ನಗರ ವರುಣನ ಆರ್ಭಟಕ್ಕೆ ತತ್ತರಿಸಿದೆ.

ಎಲ್ಲೆಡೆ ಮಳೆ ಸುರಿಯುತ್ತಿರುವ ಪರಿಣಾಮ ಜನರು ಹೊರಬರದೆ ಪರದಾಡುತ್ತಿದ್ದಾರೆ. ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ತರಕಾರಿ, ಔಷಧಿ, ದಿನಪತ್ರಿಕೆಗಳನ್ನು ಸಹ ಕೊಳ್ಳಲು ಜನರು ಪರದಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜನತೆ ಮನೆ ಬಿಟ್ಟು ಹೊರಬರಬಾರದು. ಕೆಲವು ಕಡೆ ಪ್ರವಾಹ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ನಾಗರಿಕರು ಸುರಕ್ಷಿತ ಸ್ಥಳಗಳನ್ನು ಬಿಟ್ಟು ತೆರಳದಂತೆ ಮುಂಬೈ ಮಹಾನಗರ ಪಾಲಿಕೆ ಸಲಹೆ ನೀಡಿದೆ.

ಮುಂದಿನ 24 ಗಂಟೆಗಳ ಕಾಲ ಇನ್ನೂ ವ್ಯಾಪಕ ಮಳೆ ಸುರಿಯಬಹುದೆಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರಿಂದ ದೇಶದ ವಾಣಿಜ್ಯ ನಗರಿ ಅಕ್ಷರಶಃ ತತ್ತರಿಸಿಹೋಗಿದೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಖಾಸಗಿ ಕಚೇರಿಗಳಿಗೂ ಸಹ ರಜೆ ಘೋಷಿಸಲಾಗಿದೆ. ಕಳೆದ ಮೂರು ದಿನಗಳಿಂದ 200 ಮಿಲಿ ಮೀಟರ್ ಮಳೆಯಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದು ದಾಖಲೆಯ ಮಳೆ ಎಂದು ಹೇಳಲಾಗುತ್ತಿದೆ.

ಆಟೋ, ಟ್ಯಾಕ್ಸಿ ಸೇವೆಯೂ ಸಹ ಇದೀಗ ಸ್ಥಗಿತಗೊಂಡಿದೆ. ಎಂಥದ್ದೇ ಸಂದರ್ಭದಲ್ಲೂ ತಮ್ಮ ಸೇವೆಯನ್ನು ಮುಂದುವರಿಸುತ್ತಿದ್ದ ಡಬ್ಬಾವಾಲಗಳು ಕೂಡ ಇಂದು ಮಳೆ ಕಾರಣ ತಮ್ಮ ಸೇವೆಯನ್ನು ನಿಲ್ಲಿಸಿದ್ದಾರೆ. ಮುಂದಿನ ನಾಲ್ಕು ದಿನ ಭಾರೀ ಮಳೆಯಾಗುತ್ತಿರುವ ಕಾರಣ ನಾಗರಿಕರು ಸುರಕ್ಷತೆಯಿಂದಿರಬೇಕು. ಸಾಧ್ಯವಾದಷ್ಟು ಮಟ್ಟಿಗೆ ಮನೆಯಲ್ಲೇ ಇರುವುದು ಒಳಿತು ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮನವಿ ಮಾಡಿದ್ದಾರೆ.

ಇನ್ನು ಪ್ರತಿದಿನ ಮುಂಬೈ ಮಹಾನಗರ ಜನತೆಗೆ ಸಾರಿಗೆ ಸೇವೆ ಒದಗಿಸುವ ಸ್ಥಳೀಯ ರೈಲು ಸಂಚಾರವು ಸ್ತಬ್ಧಗೊಂಡಿದೆ. ಪರಿಣಾಮ ದಿನನಿತ್ಯದ ಕೆಲಸಗಳಿಗೆ ತೆರಳಲು ಸಾಧ್ಯವಾಗದೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ರೈಲ್ವೆ ಹಳಿಗಳ ಮೇಲೆ ಸುಮಾರು ಅಡಿಗಳಷ್ಟು ನೀರು ಹರಿಯುತ್ತಿರುವುದರಿಂದ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಇನ್ನು ನಗರ ಸಾರಿಗೆ ಸಂಚಾರವು ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಕಳೆದ ಎರಡು ದಿನಗಳಿಂದ ಬಸ್ ನಿಲ್ದಾಣಗಳನ್ನು ಬಿಟ್ಟು ಬಸ್ಸುಗಳು ಕದಲಿಲ್ಲ.

Please follow and like us:
0
http://bp9news.com/wp-content/uploads/2018/07/ಮುಂಬೈ.jpghttp://bp9news.com/wp-content/uploads/2018/07/ಮುಂಬೈ-150x150.jpgBP9 Bureauಪ್ರಮುಖರಾಷ್ಟ್ರೀಯVarun's annoyance in commerce Rainforest to shine for 24 hoursಬೆಂಗಳೂರು : ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರೀ ವರ್ಷಧಾರೆಯಾಗುತ್ತಿದೆ. ಈ ಕುಂಭದ್ರೋಣ ಮಳೆ ಇಂದೂ ಕೂಡ ಮುಂದುವರೆದಿದ್ದು, ಸ್ಥಳೀಯ ಶಾಲಾ-ಕಾಲೇಜುಗಳು, ನಗರ ಸಾರಿಗೆ, ರೈಲು ಸಂಚಾರ, ಟ್ಯಾಕ್ಸಿ, ಗೂಡ್ಸ್, ಆಟೋ ಸೇರಿದಂತೆ ಇಡೀ ನಗರ ವರುಣನ ಆರ್ಭಟಕ್ಕೆ ತತ್ತರಿಸಿದೆ. ಎಲ್ಲೆಡೆ ಮಳೆ ಸುರಿಯುತ್ತಿರುವ ಪರಿಣಾಮ ಜನರು ಹೊರಬರದೆ ಪರದಾಡುತ್ತಿದ್ದಾರೆ. ದಿನನಿತ್ಯದ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ತರಕಾರಿ, ಔಷಧಿ, ದಿನಪತ್ರಿಕೆಗಳನ್ನು ಸಹ...Kannada News Portal