ಬಾಗಲಕೋಟ: ಬಾದಾಮಿ ತಾಲೂಕಿನ ಹಾನಗಲ್ಲ ಕುಮಾರ ಶ್ರೀಗಳ 150 ನೇ ಜಯಂತ್ಯೊತ್ಸವ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಾಗಿ ನಡೆದ ಗುರುವಿರಕ್ತರ ಹಾಗೂ ಸದ್ಬಕ್ತರ ಸದ್ಬಾವನಾ ಸಮಾವೇಶ ಸೋಮವಾರ ಶಿವಯೋಗ ಮಂದಿರದಲ್ಲಿ ನಡೆಯಿತು.

ಸಮಾವೇಶದಲ್ಲಿ ವೀರಶೈವ ಲಿಂಗಾಯತ ಧರ್ಮ ಒಂದೇ ಇದು ಚಿದ್ರವಾಗದಂತೆ ರಕ್ಷಿಸುವುದು ಗುರುವಿರಕ್ತ ಮಠಾಧೀಶರ ಹಾಗೂ ಎಲ್ಲ ಭಕ್ತರಿಂದ ಕರ್ಥವ್ಯವಾಗಿದೆ ಎಂಬ ಅಬಿಪ್ರಾಯ ವ್ಯಕ್ತವಾಯಿತು. ಕರ್ನಾಟಕ, ಆಂದ್ರ ತೆಲಂಗಾಣ ಸೇರಿದಂತೆ ವಿವಿದೆಡೆಗಳಿಂದ ಸುಮಾರು 1400 ಕ್ಕೂ ಹೆಚ್ಚು ಗುರು ವಿರಕ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶದಲ್ಲಿ ಹಲಾವಾರು ಸ್ವಾಮೀಜಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಿಂಗಾಲೇಶ್ವರ ಸ್ವಾಮಿಜಿ. ಬಾಳೆಹೊಸೂರ

ವೀರಶೈವ-ಲಿಂಗಾಯತ ದರ್ಮ ಒಂದೇ ಎನ್ನುವುದಕ್ಕೆ ಧಾಖಲೆ ನೀಡುತ್ತೆನೆ. ಇದನ್ನು ಪ್ರತ್ಯೇಕಗಳಿಸಲು ಹೊರಟಿರುವವರು “ಕುಲಕೆ ಮ್ರತ್ಯು ಕೊಡಲಿಕಾವು” ಎನ್ನುವಂತೆ ಇವರು ಕೊಡಲಿ ಇದ್ದಂತೆ. ಇದನ್ನು ಬೇರ್ಪಡಿಸಲು ಯತ್ನಿಸುತ್ತಿರುವವರನ್ನು ಮುಂದೊಂದು ದಿನ ಸಮಾಜದಿಂದ ಹೊರಹಾಕಲಾಗುವುದು ಎಂದರು.

ಜಗದ್ಗುರು ಸಿದ್ದಲಿಂಗ ಭಗವತ್ಪಾದರು, ಉಜ್ಜಯಿನಿ ಪೀಠ

ವೀರಶೈವ-ಲಿಂಗಾಯತ ಧರ್ಮದಿಂದ ಲಿಂಗಾಯತವನ್ನು ಪ್ರತ್ಯೇಕಗಳಿಸುವುದನ್ನು ತಡೆಯಲು ಎಲ್ಲೆಡೆ ಸಂಚಾರ ಮಾಡಿ ಸಮಾಜದ ಸದ್ಬಕ್ತರನ್ನು  ಜಾಗ್ರತಗೊಳಿಸುತ್ತಿದ್ದೇವೆ. ಬಸವಾದಿ ಶರಣರಿಗೂ ಮೊದಲು ವೀರಶೈವ-ಲಿಂಗಾಯತ ಧರ್ಮವಿತ್ತು ಎನ್ನುವುದಕ್ಕೆ 1033ನೇ ಇಸವಿಯಲ್ಲಿ ದೊರಕಿದ ಬನವಾಸಿ ಮತ್ತು ಹಂಪಿಯ ಶಾಸನದಲ್ಲಿ ಸ್ಪಷ್ಟವಾದ ಉಲ್ಲೇಖವಿದೆ ಎಂದರು.

ಡಾ.ಸಂಗನಬಸವ ಸ್ವಾಮಿಜಿ ಶಿವಯೋಗಮಂದಿರ ಸಂಸ್ಥೆ ಅಧ್ಯಕ್ಷರು

ವೀರಶೈವ-ಲಿಂಗಾಯತ ಒಂದೇ ಧರ್ಮವಾಗಿದೆ ಇದರಲ್ಲಿ ಲಿಂಗಾಯತ ಬೇರ್ಪಡಿಸಲು ಸಾದ್ಯವಿಲ್ಲ. ವೀರಶೈವ- ಲಿಂಗಾಯತ ಧರ್ಮದ ಕುರಿತು ಕೆಲವರಿಗೆ ತಪ್ಪು ತಿಳುವಳಿಕೆ ಇದೆ. ಇದನ್ನು ದೂರ ಮಾಡಲು, ಅವರ ಮನವೊಲಿಸಲು ನಾವು ಸಿದ್ದರಿದ್ದೇವೆ. ವೀರಶೈವ- ಲಿಂಗಾಯತ ಧರ್ಮದಲ್ಲಿ ಅತ್ಯಂತ ಆರ್ಥಿಕವಾಗಿ ಹಿಂದುಳಿದ ಕುಟುಂಭಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೀರಶೈವ- ಲಿಂಗಾಯತ ಶಿಕ್ಷಣ ಸಂಸ್ತೆಗಳು ಉಚಿತ ಶಿಕ್ಷಣ ನೀಡಬೇಕು ಎಂದರು.

ಗಂಗಾಧರ ಹಿರೆಮಠ ಹೈಕೊರ್ಟ ನಿವ್ರತ್ತ ನ್ಯಾಯಾಧಿಶರು:- ಸಂವಿಧಾನದಲ್ಲಿ ಪ್ರತ್ಯೇಕ ಹೊಸ ಧರ್ಮಕ್ಕೆ ಮಾನ್ಯತೆ ನೀಡಲು ಸಾದ್ಯವಿಲ್ಲವೆಂದು 2005 ರಲ್ಲೇ ಸುಪ್ರಂ ಕೋರ್ಟ ಹೇಳಿದೆ. ಸೌಲಬ್ಯ ಸಿಗದವರಿಗೆ ಮೀಸಲಾತಿ ನೀಡಲಾಗುತ್ತದೆ. ಜಾತಿಯಾಧಾರಿತ ಜನಸಂಖ್ಯೆ ಆದಾರಿತ ಮೀಸಲಾತಿ ಹೆಚ್ಚಿಸಲು ಎಲ್ಲರೂ ಹೋರಾಟ ಮಾಡಬೇಕು ಎಂದರು.

 

ವರದಿ: ರವಿ ಜಾಧವ ಬಾಗಲಕೋಟ

Please follow and like us:
0
http://bp9news.com/wp-content/uploads/2017/09/WhatsApp-Image-2017-09-05-at-9.36.57-AM.jpeghttp://bp9news.com/wp-content/uploads/2017/09/WhatsApp-Image-2017-09-05-at-9.36.57-AM-150x150.jpegBP9 Bureauಪಂಚಪೀಠಬಾಗಲಕೋಟೆಬಾಗಲಕೋಟ: ಬಾದಾಮಿ ತಾಲೂಕಿನ ಹಾನಗಲ್ಲ ಕುಮಾರ ಶ್ರೀಗಳ 150 ನೇ ಜಯಂತ್ಯೊತ್ಸವ ಹಾಗೂ ವೀರಶೈವ ಲಿಂಗಾಯತ ಸಂಘಟನೆಗಾಗಿ ನಡೆದ ಗುರುವಿರಕ್ತರ ಹಾಗೂ ಸದ್ಬಕ್ತರ ಸದ್ಬಾವನಾ ಸಮಾವೇಶ ಸೋಮವಾರ ಶಿವಯೋಗ ಮಂದಿರದಲ್ಲಿ ನಡೆಯಿತು. ಸಮಾವೇಶದಲ್ಲಿ ವೀರಶೈವ ಲಿಂಗಾಯತ ಧರ್ಮ ಒಂದೇ ಇದು ಚಿದ್ರವಾಗದಂತೆ ರಕ್ಷಿಸುವುದು ಗುರುವಿರಕ್ತ ಮಠಾಧೀಶರ ಹಾಗೂ ಎಲ್ಲ ಭಕ್ತರಿಂದ ಕರ್ಥವ್ಯವಾಗಿದೆ ಎಂಬ ಅಬಿಪ್ರಾಯ ವ್ಯಕ್ತವಾಯಿತು. ಕರ್ನಾಟಕ, ಆಂದ್ರ ತೆಲಂಗಾಣ ಸೇರಿದಂತೆ ವಿವಿದೆಡೆಗಳಿಂದ ಸುಮಾರು 1400 ಕ್ಕೂ ಹೆಚ್ಚು ಗುರು...Kannada News Portal