ಬೆಂಗಳೂರು :  ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ದುರ್ಗಾಪುರದಲ್ಲಿ ಬಿಜೆಪಿ- ಸಿಪಿಎಂ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಬೀದಿಕಾಳಗದಲ್ಲಿ 6 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಚ್ಚಾಬಾಂಬ್‌ ದಾಳಿ ಕೂಡ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪ್ರಾಣ ಕಳೆದುಕೊಂಡಿದ್ದಾರೆ.

ಸೋಮವಾರ ನಡೆಯುತ್ತಿದ್ದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಕೂಚ್ ಬೆಹರ್ ಬಳಿ ಈ ಗಲಭೆ ನಡೆಯುತ್ತಿದ್ದು, ಚುನಾವಣೆ ಹಿನ್ನಲೆಯಲ್ಲಿ ಹಲವಾರು ಮಂದಿ ಮತಚಲಾಯಿಸಲು ತೆರಳಿದ್ದರು. ಮತದಾನ ಕ್ಷೇತ್ರಗಳ ಬಳಿ ತೆರಳಿದ್ದಾಗ ಸ್ಥಳಕ್ಕೆ ಬಂದ ಟಿಎಂಸಿ ಕಾರ್ಯಕರ್ತರು ಲಾಠಿ ಹಾಗೂ ದೊಡ್ಡ ದೊಡ್ಡ ದೊಣ್ಣೆಗಳ ಮೂಲಕ ದಾಳಿ ನಡೆಸಿದ್ದಾರೆಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಗಾಯಾಗಳುಗಳನ್ನು ಎಂಜೆಎನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಈ ನಡುವೆ ದಕ್ಷಿಣ 24 ಪರ್ಗನಾಸ್ ಜಿಲ್ಲೆಯ ಕುಲ್ತಾಲಿ ಎಂಬ ಪ್ರದೇಶದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಟಿಎಂಸಿ ಕಾರ್ಯಕರ್ತ ಆರೀಫ್ ಗಜಿ ಎಂಬುವವರು ಸಾವನ್ನಪ್ಪಿದ್ದಾರೆ. ಇದರಂತೆ ಸಿಪಿಐ ಕಾರ್ಯಕರ್ತನ ಮೇಲೆ ದಾಳಿ ಕೂಡ ನಡೆದಿದ್ದು, ಉತ್ತರ 24 ಪರ್ಗನಾಸ್ ನಲ್ಲಿದ್ದ ಮನೆಗೆ ಕಳೆದ ರಾತ್ರಿ ಬೆಂಕಿ ಹಚ್ಚಿದ ಪರಿಣಾಮ ಸಿಪಿಐ ಕಾರ್ಯಕರ್ತ ಹಾಗೂ ಆತನ ಪತ್ನಿ ಸಜೀವ ದಹನವಾಗಿದ್ದಾರೆಂದು ಹೇಳಲಾಗುತ್ತಿದೆ.

ಉತ್ತರ 24 ಪರ್ಗನಾಸ್, ಬುರ್ದ್ವಾನ್, ಕೂಚ್ಬೆಹಾರ್ ಮತ್ತು ದಕ್ಷಿಣ 24 ಪರ್ಗನಾಸ್ ಜಿಲ್ಲೆಗಳಲ್ಲಿ ಹಿಂಸಾಚಾರ ನಡೆಯುತ್ತಿರುವುದಾಗಿ ಚುನಾವಣಾ ಆಯೋಗಕ್ಕೆ ಹಲವಾರು ದೂರುಗಳು ಬರುತ್ತಿವೆ ಎಂದು ತಿಳಿದುಬಂದಿದೆ.

ಮುರ್ಶಿದಾಬಾದ್ ನಲ್ಲಿ ಟಿಎಂಸಿ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟ ಪರಿಣಾಮ ಸ್ಥಳದಲ್ಲಿದ್ದ ಜನರು ಬ್ಯಾಲೆಟ್ ಪೇಪರ್ ಗಳನ್ನು ಎಸೆದು ಮತದಾನ ಕ್ಷೇತ್ರಗಳಿಂದ ದೂರ ಹೋಗಿದ್ದಾರೆ. ಘರ್ಷಣೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಮತದಾನ ಪ್ರಕ್ರಿಯೆಗಳನ್ನು ಸ್ಥಗಿತಗೊಳಿಸಲಾಗಿದೆ.

Please follow and like us:
0
http://bp9news.com/wp-content/uploads/2018/05/04TH_BENGAL_VIOLENCE.jpghttp://bp9news.com/wp-content/uploads/2018/05/04TH_BENGAL_VIOLENCE-150x150.jpgBP9 Bureauಪ್ರಮುಖರಾಜಕೀಯರಾಷ್ಟ್ರೀಯmore than 20 people injured,Violence in West Bengal: 6 people killedಬೆಂಗಳೂರು :  ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆಯಲ್ಲಿ ದುರ್ಗಾಪುರದಲ್ಲಿ ಬಿಜೆಪಿ- ಸಿಪಿಎಂ ನಡುವೆ ಘರ್ಷಣೆ ಏರ್ಪಟ್ಟಿದೆ. ಈ ಬೀದಿಕಾಳಗದಲ್ಲಿ 6 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕಚ್ಚಾಬಾಂಬ್‌ ದಾಳಿ ಕೂಡ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ನಡೆಯುತ್ತಿದ್ದ ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ ವೇಳೆ ಕೂಚ್ ಬೆಹರ್ ಬಳಿ ಈ ಗಲಭೆ ನಡೆಯುತ್ತಿದ್ದು, ಚುನಾವಣೆ ಹಿನ್ನಲೆಯಲ್ಲಿ ಹಲವಾರು ಮಂದಿ ಮತಚಲಾಯಿಸಲು ತೆರಳಿದ್ದರು. ಮತದಾನ ಕ್ಷೇತ್ರಗಳ...Kannada News Portal